ಸೆಕೆಂಡ್‌ ಇನ್ನಿಂಗ್ಸ್‌ ಆರಂಭದಲ್ಲಿಯೇ ಜನ್ರು ಏನ್ ಅಂದುಕೊಂಡಿದ್ದರೋ ಅದರ ಗ್ಲಿಂಪ್ಸ್‌ ನಿನ್ನೆಯ ಎಪಿಸೋಡ್‌ನಲ್ಲೇ ಸಿಕ್ಕಿದೆ. ಸೀಸನ್‌ 8ರಲ್ಲಿ ನಡೆಯದಿದ್ದ ದೊಡ್ಡ ಕಾಳಗ ನಿನ್ನೆ ನಡೆದುಬಿಟ್ಟಿದೆ. ಅದು ದೊಡ್ಡ ಮಾತಿನ ಸಮರ. ಸಂಡೇ ವಿತ್‌ ಸುದೀಪ್ ಎಪಿಸೋಡ್‌ನಲ್ಲಿ ಕಿಚ್ಚ ಎಲ್ಲರಿಗೂ ಒಂದ್ ಟಾಸ್ಕ್ ಕೊಡ್ತಾರೆ. ನಿಮ್ಮ ಸಹ ಸ್ಪರ್ಧಿಗಳ ಬಗ್ಗೆ ನಿಮ್ಮ ಮನೆಯವರು ಏನಂದ್ರೂ ಅಂತಾ ಹೇಳಿ ಅಂತಾರೆ. ಅದಕ್ಕೆ ಒಬ್ಬೊಬ್ಬೊರು ಒಂದು ಆನ್ಸರ್ ಮಾಡಿದರು.

ಲ್ಯಾಗ್ ಮಂಜು, ನನ್ನ ತಂದೆ ತಾಯಿ ಚಂದ್ರಚೂಡ್ ಹಾಗೂ ಪ್ರಶಾಂತ್ ಸಂಬರಗಿ ಬಗ್ಗೆ ಮಾತನಾಡಿದರು. ಅವರು ಸರಿಯಿಲ್ಲಾ. ಬೇಜಾನ್ ಮಾತನಾಡ್ತಾರೆ. ಅವ್ರೇನೂ ಮಾಡ್ಬೇಕು ಅಂತಾ ಮಾತನಾಡೋಲ್ಲ. ಬೇರೆಯವರ ಬಗ್ಗೆನೇ ಮಾತನಾಡ್ತಿರ್ತಾರೆ. ಒಳ್ಳೆಯದಲ್ಲ ಅವ್ರ ಜೊತೆ ಇರ್ಬೇಡ ಅಂತಾ ಹೇಳಿದ್ರು ಅಂತಾ ಲ್ಯಾಗ್ ಹೇಳಿದರು. ನಂತರ ದಿವ್ಯಾ ಸುರೇಶ್ ಮಾತನಾಡಿ, ನನ್ನ ತಾಯಿ ಬಹುಶಃ ಚಂದ್ರಚೂಡ್ ಹಾಗೂ ಪ್ರಶಾಂತ್ ಸಂಬರಗಿ ಅವರನ್ನ ನಿನ್ನೆ ಸೆಕ್ಯೂರಿಟಿ ಗಾರ್ಡ್ ಆಗಿ ಕರೆಸಿದ್ದರೋ ಏನೋ. ಯಾವಾಗ್ಲೂ ಹಿಂದೆ ಮಾತನಾಡ್ತಿದ್ರು. ನೀನು ಯಾಕೆ ಮಾತನಾಡಿಲ್ಲ ಅಂತಾ ಹೇಳಿದರು ಅಂತಾ ದಿವ್ಯಾ ಸುರೇಶ್ ಹೇಳಿದರು. ಇದಕ್ಕೆ ಚಂದ್ರಚೂಡ್ ಕೊಟ್ಟ ಉತ್ತರ ಇಡೀ ಮನೆಯನ್ನೇ ಅಲುಗಾಡಿಸಿಬಿಟ್ಟಿತ್ತು..!

 

 

The post ಚಂದ್ರಚೂಡ್, ಪ್ರಶಾಂತ್ ಸಂಬರಗಿ ಸರಿ ಇಲ್ಲ ಅಂತ ನನ್ನ ತಾಯಿ ಹೇಳಿದ್ರು -ಲ್ಯಾಗ್ ಮಂಜು appeared first on News First Kannada.

Source: newsfirstlive.com

Source link