ಬೆಂಗಳೂರು: ಭಾರತೀಯ ಬಾಹ್ಯಾಕಾಶ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3ಕ್ಕೆ ಭಾರತ್ ಹೆವಿ ಎಲೆಟ್ರಿಕಲ್ಸ್ ಲಿಮಿಟೆಡ್ (ಬಿಹೆಚ್ಇಎಲ್) ಬಾಹ್ಯಾಕಾಶ ದರ್ಜೆಯ 100 ನೇ ಬ್ಯಾಟರಿಯನ್ನು ಪೂರೈಕೆ ಮಾಡಿದೆ. 

ಚಂದ್ರನ ಮೇಲೆ ರೋವರ್ ನ್ನು ಇಳಿಸುವುದಕ್ಕಾಗಿ 2022 ರಲ್ಲಿ ಉಡಾವಣೆಗೆ ನಿಗದಿಯಾಗಿರುವ ಚಂದ್ರಯಾನ-3 ರಲ್ಲಿ ಈ ಬ್ಯಾಟರಿಯನ್ನು ಬಳಕೆ ಮಾಡಲಾಗುತ್ತದೆ. 

ಬಿಹೆಚ್ಇಎಲ್-ಇಡಿಎನ್ ನ ಕಾರ್ಯನಿರ್ವಾಹಕ ನಿರ್ದೇಶಕ ಎಕೆ ಜೈನ್, ಉಪ ನಿರ್ದೇಶಕ ಎಂ ಶಂಕರನ್ ಅವರು ಬೆಂಗಳೂರಿನಲ್ಲಿರುವ ಇಸ್ರೋ ಕಚೇರಿಗೆ ಬ್ಯಾಟರಿಯನ್ನು ಹಸ್ತಾಂತರಿಸಿದ್ದಾರೆ. 

"ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅತಿ ಮುಖ್ಯವಾದ ಮಿಷನ್ ಗೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ 100 ನೇ ಬ್ಯಾಟರಿಯನ್ನು ಪೂರೈಕೆ ಮಾಡುವ ಮೂಲಕ ವಿಶಿಷ್ಟ ಮೈಲುಗಲ್ಲನ್ನು ಸಾಧಿಸಿದೆ ಎಂದು ಬಿಹೆಚ್ಇಎಲ್ ನ ಅಧಿಕೃತ ಪ್ರಕಟಣೆ ತಿಳಿಸಿದೆ.

16 ವರ್ಷಗಳಿಂದ ಇಸ್ರೋಗೆ ಬಿಹೆಚ್ಇಎಲ್ ವಿವಿಧ ರೀತಿಯ ಬ್ಯಾಟರಿಗಳನ್ನು ಪೂರೈಕೆ ಮಾಡುತ್ತಿದೆ. ಐಎನ್ಎಸ್ಎಟಿ, ಜಿಎಸ್ಎಟಿ, ಐಆರ್ ಎನ್ಎಸ್ಎಸ್ ಸರಣಿ, ಆರ್ ಐಎಸ್ಎಟಿ ಸರಣಿಯ ಮಿಷನ್ ಗಳಿಗೂ ಬಿಹೆಚ್ಇಎಲ್ ಬ್ಯಾಟರಿಗಳನ್ನು ಪೂರೈಕೆ ಮಾಡಿದೆ.

Source: Kannadaprabha – ವಿಜ್ಞಾನ-ತಂತ್ರಜ್ಞಾನ – https://www.kannadaprabha.com/science-technology/
Read More