ಚಕ್ಕಡಿ ಓಡಿಸುತ್ತಾ ಕೂಲಿ ಮಾಡುತ್ತಿದ್ದ ತಂದೆ; ಪದ್ಮಶ್ರೀಯನ್ನೇ ಗೆದ್ದು ಪ್ರಧಾನಿ ಜೊತೆ ನಿಲ್ಲಿಸಿದಳು ಮಗಳು​


ಇಂದಿಗೂ ದೇಶದಲ್ಲಿ ಎಷ್ಟೋ ಮಂದಿ ಪೋಷಕರು ತಮಗೆ ಹೆಣ್ಣು ಮಗು ಜನಿಸಿದೆ ಎಂದ ಕ್ಷಣ ನಿರಾಸೆಯಿಂದ ಚಿಂತೆಗೆ ಒಳಗಾಗುತ್ತಾರೆ. ಆದರೆ ಮೊನ್ನೆ ಭಾರತದ ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಹೆಣ್ಣು ಮಗಳು, ಎತ್ತಿನ ಬಂಡಿ ನಡೆಸಿ ಜೀವನ ನಡೆಸುತ್ತಿದ್ದ ತಂದೆಯನ್ನು ಪ್ರಧಾನಿ ಮೋದಿ ಅವರ ಎದುರು ನಿಲ್ಲಿಸಿ ಇಡೀ ದೇಶಕ್ಕೆ ಮಾದರಿಯಾಗಿದ್ದರು. ಆಕೆ ಬೇರೆ ಯಾರು ಅಲ್ಲ ಟೀಂ ಇಂಡಿಯಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್​..

ಹೌದು, ಎತ್ತಿನ ಬಂಡಿ ಓಡಿಸುತ್ತಾ ಜೀವನ ನಡೆಸುತ್ತಿದ್ದ ತಂದೆಯ ಮಗಳಾಗಿ ಜನಿಸಿದ ರಾಂಪಾಲ್​, ಇಂದು ಟೀಂ ಇಂಡಿಯಾ ಹಾಕಿ ತಂಡದ ಕ್ಯಾಪ್ಟನ್​ ಆಗಿದ್ದಾರೆ. ಈ ಬಾರಿಯ ಟೊಕಿಯೋ ಒಲಂಪಿಕ್ಸ್​ನಲ್ಲಿ ಟೀಂ ಇಂಡಿಯಾ ಹಾಕಿ ತಂಡವನ್ನು ಮುನ್ನಡೆಸಿದ್ದ ರಾಣಿ ರಾಂಪಾಲ್​ ಗಮನಾರ್ಹ ಪ್ರದರ್ಶನ ನೀಡಿದ್ದರು. ಸದ್ಯ ಅವರ ಸಾಧನೆಯನ್ನು ಗುರುತಿಸಿದ ಕೇಂದ್ರ ಸರ್ಕಾರ ಅವರಿಗೆ ಪದ್ಮ ಶ್ರೀ ಪ್ರಶಸ್ತಿಯನ್ನು ಗೌರವಿಸಿದೆ. ಇದೇ ವೇಳೆ ಪ್ರಶಸ್ತಿ ಸ್ವೀಕರಿಸಿದ ಬಳಿಕ ರಾಣಿ ರಾಂಪಾಂಲ್​ ಮಾಡಿರೋ ಟ್ವೀಟ್​ ಸಖತ್ ವೈರಲ್​ ಆಗಿದೆ. ಜಗತ್ತಿನಲ್ಲೇ ಮಗಳು ಏನಾದರೂ ಸಾಧಿಸಲೇಬೇಕು ಎಂದು ಬಯಸುವ ಏಕೈಕ ವ್ಯಕ್ತಿ ಎಂದರೇ ಆತನೇ ತಂದೆ ಎಂದು ಟ್ವೀಟ್​​ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ತಮ್ಮ ತಂದೆ ಎತ್ತಿನ ಬಂಡಿ ಓಡಿಸುತ್ತಿದ್ದ ಹಾಗೂ ಪ್ರಧಾನಿ ಮೋದಿ ಅವರ ಎದುರು ನಿಂತು ಮಾತನಾಡುತ್ತಿರೋ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ರಾಣಿ ರಾಂಪಾಲ್​ ಹಿನ್ನೆಲೆ ಏನು..?
ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಶಹಬಾದ್​ ಗ್ರಾಮದಲ್ಲಿ ಜನಿಸಿದ್ದರು. ತಂದೆ ಎತ್ತುಗಳ ಬಂಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ತಾಯಿ ಇತರರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಮುರಿದ ಹಾಕಿ ಸ್ಟೀಕ್​ನೊಂದಿಗೆ ಹಾಕಿ ಆಡಲು ಆರಂಭಿಸಿದ್ದ ರಾಂಪಾಲ್​​ಗೆ ಹೊಸ ಹಾಕಿ ಸ್ಟೀಕ್​ ಖರೀದಿ ಮಾಡಲು ಕೂಡ ಆಗಿರಲಿಲ್ಲ. ಪ್ರತಿ ದಿನ ಎರಡೂ ಹೊತ್ತಿನ ಊಟಕ್ಕೂ ಹೋರಾಟ ಮಾಡಬೇಕಾದ ಕುಟುಂಬದಿಂದ ಬಂದಿರೋ ರಾಣಿ ರಂಪಾಲ್ ಈಗ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಚಿಕ್ಕಂದಿನಿಂದಲೇ ಸವಾಲುಗಳ ವಿರುದ್ಧ ಹೋರಾಡೋದು ಕಲಿತ್ತಿದ್ದ ರಾಂಪಾಲ್​..
ಸಂದರ್ಶನವೊಂದರಲ್ಲಿ ರಾಂಪಾಲ್ ತಮ್ಮ ಜೀವನದ ಹೋರಾಟ ಕ್ಷಣಗಳನ್ನು ಬಿಚ್ಚಿಟ್ಟಿದ್ದಾರೆ. ಹಾಕಿ ತರಬೇತಿ ಹಾಗೂ ಮ್ಯಾಚ್​​ಗಳಲ್ಲಿ ತರಬೇತಿ ಪಡೆಯಬೇಕಾದರೇ ಸರ್ಟ್​​ ಧರಿಸಲೇಬೇಕಿತ್ತು. ಆದರೆ ಸ್ಕರ್ಟ್​ ಧರಿಸಲು ತಂದೆ-ತಾಯಿ ಅನುಮತಿ ನೀಡಿರಲಿಲ್ಲ. ಆರಂಭದಲ್ಲಿ ಸಲ್ವಾರ್​, ಕಮೀಜ್​ ಧರಿಸಿಯೇ ರಾಣಿ ರಂಪಾಲ್​ ತರಬೇತಿ ಪಡೆದಿದ್ದರು. ಆದರೆ ಇದಕ್ಕಾಗಿ ಕೋಚ್​​ರನ್ನು ಒಪ್ಪಿಸಲು ರಾಂಪಾಲ್​ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ವಿದ್ಯುತ್​ ಇಲ್ಲದ ರಾತ್ರಿಗಳು, ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಬೇಕು ಎಂದು ಅಂದುಕೊಂಡಿದ್ದರಂತೆ. ವೃತ್ತಿ ಜೀವನದಲ್ಲಿ ಬೆಳೆಯಲು ಕೋಚ್​ ನೀಡಿದ ಸಹಾಯ ಎಂದಿಗೂ ಮರೆಯಲು ಆಗೋದಿಲ್ಲ. ಮೊದಲಿಗೆ ತನಗಾಗಿ ಹಾಕಿ ಸ್ಟೀಕ್​ ಖರೀದಿ ಮಾಡಿದ್ದೇ, ಕೋಚ್ ಎಂದು ಸಂದರ್ಶನವೊಂದರಲ್ಲಿ ರಿವೀಲ್​ ಮಾಡಿದ್ದರು.

15 ವರ್ಷದ ವೇಳೆಗೆ ತನಗೆ ರಾಷ್ಟ್ರೀಯ ತಂಡದಲ್ಲಿ ಆಡಲು ಅವಕಾಶ ಲಭಿಸಿತ್ತು. ಚಿಕ್ಕ ವಯಸ್ಸಿನಲ್ಲೇ ದೇಶದ ಪರ ಆಡೋ ಅವಕಾಶ ಸಿಕ್ಕಿತ್ತು. ಚಿಕ್ಕದಿಂದಲೇ ತನಗೆ ಎದುರಾದ ಸಮಸ್ಯೆಗಳನ್ನು ದಿಟ್ಟತನದಿಂದ ಎದುರಿಸಲು ಕಲಿತುಕೊಂಡಿದ್ದೆ. 15ನೇ ವಯಸ್ಸಿನಲ್ಲಿ ವೃತ್ತಿಪರವಾಗಿ ಆಡಲು ಆರಂಭಿಸಿದ ವೇಳೆ ನನ್ನ ತಂದೆ ಒಂದು ಮಾತು ಹೇಳಿದ್ದರು. ನಿನ್ನ ಮನಸ್ಸು ಏನು ಹೇಳುತ್ತೆ ಅದನ್ನೇ ಮಾಡು.. ಕುಟುಂಬದ ಸ್ಥಿತಿಯ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಎಂದಿದ್ದರು.

ಇದು ಜೀವನದ ಹೆಮ್ಮೆಯ ಕ್ಷಣ..
ನನ್ನ ತಂದೆ ದಿನಕ್ಕೆ ಕೇವಲ 80 ರೂಪಾಯಿ ಮಾತ್ರ ಸಂಪಾದನೆ ಮಾಡುತ್ತಿದ್ದರು. ಆದ್ದರಿಂದ ಮೊದಲು ಹಾಕಿ ಕಲಿಯುತ್ತೇನೆ ಎಂದರೇ ಒಪ್ಪಿಗೆ ನೀಡಿರಲಿಲ್ಲ. ನನ್ನ ಮನೆ ಬಳಿ ಹಾಕಿ ಅಕಾಡೆಮಿ ಇದ್ದ ಕಾರಣ ಮೊದಲು ನನಗೆ ಹಾಕಿ ಆಡಲು ಆಸಕ್ತಿ ಬಂತು. ಕೊನೆಗೂ ತಂದೆಯನ್ನು ಒಪ್ಪಿಸಿ ಅಕಾಡೆಮಿ ಸೇರ್ಪಡೆಯಾಗಿದ್ದೆ. ಆದರೆ ಅಕಾಡೆಮಿ ಸೇರ್ಪಡೆಯಾಗಲು ಪ್ರತಿ ಆಟಗಾರ ಅವರ ಖರ್ಚು ವೆಚ್ಚಗಳನ್ನು ಅವರೇ ಭರಿಸಬೇಕಾಗಿತ್ತು.

ಪ್ರತಿ ದಿನ ಅರ್ಧ ಲೀಟರ್ ಹಾಲು ಕೂಡಿಯಲೇ ಬೇಕಿತ್ತು. ಆದರೆ ನನ್ನ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿ ಇಲ್ಲದ ಕಾರಣ 200 ಎಂಎಲ್​ ಹಾಲಿಗೆ ನೀರು ಮಿಸ್ಸ್ ಮಾಡಿ ಕೂಡಿಯುತ್ತಿದೆ. ಇದನ್ನು ಕಂಡ ಕೋಚ್​ ನನಗೆ ಸಹಾಯ ಮಾಡಲು ಮುಂದೇ ಬಂದಿದ್ದರು. ಆ ಬಳಿಕ ಆಡಿದ ಮೊದಲ ಟೂರ್ನಿಯಲ್ಲಿ ಗೆದ್ದು 500 ರೂಪಾಯಿ ಗಳಿಸಿದ್ದೆ. ಅದನ್ನು ಅಪ್ಪನಿಗೆ ನೀಡಿದ್ದೆ. ಆ ವೇಳೆಯೇ ನಿಮಗೆ ಒಂದು ಒಳ್ಳೆ ಮಾಡಿಕೊಡುತ್ತೇನೆ ಎಂದು ಹೇಳಿದ್ದೆ. 2017ರಲ್ಲಿ ಈ ಮಾತನ್ನು ಉಳಿಸಿಕೊಂಡು ಮನೆ ನಿರ್ಮಾಣ ಮಾಡಿಕೊಟ್ಟಿದ್ದೆ. ತನ್ನ ತಂದೆ ಹೇಳಿದ ಮಾತನ್ನು ಕೇಳಿ ನಾನು ಟೀಂ ಇಂಡಿಯಾ ಕ್ಯಾಪ್ಟನ್​ ಆಗಿ ಬೆಳೆದೆ. ಒಂದು ದಿನ ನನ್ನ ತಂದೆಯ ಸ್ನೇಹಿತರೊಬ್ಬರು ತಮ್ಮ ಮಗಳನ್ನು ಕರೆದುಕೊಂಡು ಬಂದು, ನನ್ನ ಮಗಳು ಹಾಕಿ ಆಟಗಾರ್ತಿ ಆಗಬೇಕು ಎಂದು ಹೇಳುತ್ತಿದ್ದಾಳೆ. ಆಕೆಗೆ ನೀನೇ ಪ್ರೇರಣೆ ಎಂದು ಹೇಳಿದ್ದರು. ಆ ಕ್ಷಣ ನನಗೆ ಎಷ್ಟೋ ಹೆಮ್ಮೆ ಎನಿಸಿತ್ತು ಎಂದಿದ್ದಾರೆ.

The post ಚಕ್ಕಡಿ ಓಡಿಸುತ್ತಾ ಕೂಲಿ ಮಾಡುತ್ತಿದ್ದ ತಂದೆ; ಪದ್ಮಶ್ರೀಯನ್ನೇ ಗೆದ್ದು ಪ್ರಧಾನಿ ಜೊತೆ ನಿಲ್ಲಿಸಿದಳು ಮಗಳು​ appeared first on News First Kannada.

News First Live Kannada


Leave a Reply

Your email address will not be published. Required fields are marked *