ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ಪ್ರಿಯಾಂಕಾ ತಿಮ್ಮೇಶ್ ಬರಹಗಾರ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಕೊನೆಯಲ್ಲಿ ಶಾಕ್ ಕೊಟ್ಟಿದ್ದಾರೆ.

ಪ್ರಿಯಾಂಕಾ ತಿಮ್ಮೇಶ್ ಮತ್ತು ಚಕ್ರವರ್ತಿ ಚಂದ್ರಚೂಡ್ ಅವರು ಮಧ್ಯ ಭಾಗದಲ್ಲಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದರು. ಹೀಗಾಗಿ ಇವರಿಬ್ಬರ ಮಧ್ಯೆ ಆರಂಭದಲ್ಲಿ ಉತ್ತಮವಾಗಿ ಮಾತುಕತೆ ನಡೆಯುತ್ತಿತ್ತು.

ನಂತರದ ದಿನಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಬಂದಿತ್ತು. ಈ ಮಧ್ಯೆ ಬಿಗ್ ಬಾಸ್ ಸ್ಥಗಿತಗೊಂಡು ಆರಂಭಗೊಂಡ ವಾರದಲ್ಲೂ ಇಬ್ಬರ ನಡುವೆ ಮಾತುಕತೆ ನಡೆಯಿತಿತ್ತು. ಆದರೆ ನಂತರದ ದಿನಗಳಲ್ಲಿ ಚಕ್ರವರ್ತಿ ಅವರಿಂದ ಪ್ರಿಯಾಂಕಾ ತಿಮ್ಮೇಶ್ ಅಂತರ ಕಾಯ್ದುಕೊಂಡು ದಿವ್ಯಾ ಸುರೇಶ್, ಶಮಂತ್, ಶುಭ ಪೂಂಜಾ ಅವರ ಜೊತೆ ಹೆಚ್ಚು ಬೆರೆಯುತ್ತಿದ್ದರು.

ಎರಡನೇ ಇನ್ನಿಂಗ್ಸ್‍ನ ಮೂರನೇ ವಾರದಲ್ಲಿ ಚಕ್ರವರ್ತಿ ಮತ್ತು ಪ್ರಿಯಾಂಕ ತಿಮ್ಮೇಶ್ ಮಧ್ಯೆ ಜಾಸ್ತಿ ಮಾತುಕತೆ ನಡೆದಿರಲಿಲ್ಲ. ಆದರೆ ಚಕ್ರವರ್ತಿಯವರು ನೇರವಾಗಿ ನನ್ನ ಹೆಸರು ತೆಗೆಯದೇ ಟಾಂಗ್ ನೀಡುತ್ತಿದ್ದಾರೆ ಎಂದು ಪ್ರಿಯಾಂಕಾ ಇತರೇ ಸ್ಪರ್ಧಿಗಳ ಜೊತೆ ಹೇಳುತ್ತಿದ್ದರು. ಇದನ್ನೂ ಓದಿ : ವೈಷ್ಣವಿ ಬಗ್ಗೆ ಸುದೀಪ್‍ಗಿದ್ದ ಅಭಿಪ್ರಾಯ ಚೇಂಜ್

ಮೊದಲೇ ಚಕ್ರವರ್ತಿ ಅವರು ಪ್ರಿಯಾಂಕಾ ಬಗ್ಗೆ ಅಸಮಾಧಾನಗೊಂಡಿದ್ದರು. ಇದರ ಜೊತೆ ಕಳಪೆಗೆ ನೀಡಿದ ಕಾರಣ ಸರಿಯಿಲ್ಲ ಎಂದು ಹೇಳಿ ಪ್ರಿಯಾಂಕಾ ವಿರುದ್ಧ ಜೈಲಿನಲ್ಲೂ ಪ್ರತಿಭಟನೆ ಮಾಡಿದ್ದರು.

ಅರವಿಂದ್ ಟೀಂ ಸೋತ ಹಿನ್ನೆಲೆಯಲ್ಲಿ ನಾಯಕ ಅರವಿಂದ್ ಬಿಟ್ಟು ವೈಷ್ಣವಿ, ಪ್ರಶಾಂತ್, ಶುಭಾ ಪುಂಜಾ, ಪ್ರಿಯಾಂಕಾ ತಿಮ್ಮೇಶ್ ನಾಮಿನೆಟ್ ಆಗಿದ್ದರು. ಹೀಗಾಗಿ ಕಡಿಮೆ ವೋಟ್ ಬಿದ್ದ ಹಿನ್ನೆಲೆಯಲ್ಲಿ ಪ್ರಿಯಾಂಕಾ ಮನೆಯಿಂದ ಔಟ್ ಆಗಿದ್ದಾರೆ.

ಈ ಮೊದಲು ನಿಧಿ ಔಟಾದಾಗ ಅರವಿಂದ್ ಅವರನ್ನು ನಾಮಿನೆಟ್ ಮಾಡಿದ್ದರು. ನಂತ್ರ ರಘು ಶಮಂತ್ ಅವರನ್ನು ಸೇವ್ ಮಾಡಿದ್ದರು. ಈ ಬಾರಿ ಪ್ರಿಯಾಂಕಾ ಅವರು ನೇರವಾಗಿ ಚಂದ್ರಚೂಡ್ ಅವರನ್ನು ಎಲಿಮಿನೇಟ್ ಮಾಡಿದ್ದಾರೆ. ಈ ಮೂಲಕ ಕೊನೆಗೆ ಮನೆಯಿಂದ ತೆರಳುವಾಗ ಪ್ರಿಯಾಂಕಾ ಶಾಕ್ ನೀಡಿದ್ದಾರೆ.

The post ಚಕ್ರವರ್ತಿಗೆ ಶಾಕ್ ಕೊಟ್ಟ ಪ್ರಿಯಾಂಕಾ appeared first on Public TV.

Source: publictv.in

Source link