ಬಿಗ್​ ಬಾಸ್​ ಮನೆಯ ಸದಸ್ಯರು ಈ ವಾರ ಫುಲ್​ ಜೋಶ್​ನಿಂದಲೇ ಟಾಸ್ಕ್​ಗಳನ್ನು ನಿಭಾಯಿಸಿದ್ದರು. ಸಣ್ಣ ಪುಟ್ಟ ಮನಸ್ತಾಪಗಳು ಬಂದ್ರು ಕೂಡಾ ಅವುಗಳನ್ನು ಅಲ್ಲಲ್ಲಿಯೇ ಸಾಲ್ವ್​ ಮಾಡಿ, ಟಾಸ್ಕ್​ಗಳನ್ನು ಅಚ್ಚುಕಟ್ಟಾಗಿ ಆಡಿದ್ದರು. ಆದ್ರೇ ಅವರ ಐದು ದಿನಗಳ ಶ್ರಮ ಒಂದೇ ದಿನದಲ್ಲಿ ಮಾಯವಾಗಿದ್ದು ಸುಳ್ಳಲ್ಲ. ಈ ಬೆಳವಣಿಗೆಗಳ ಕುರಿತು ಸುದೀಪ್​ ವಾರ ಕತೆ ಕಿಚ್ಚನ ಜೊತೆಯಲ್ಲಿ ಏನ್​ ಹೇಳಿದ್ರು ನೋಡೋಣ.

ಹೌದು, ಮನೆಯಲ್ಲಿ ಗಲಾಟೆ ಆದ್ರೇ ಹೆಚ್ಚು ಕೇಳಿಬರುತ್ತಿದ್ದ ಹೆಸರುಗಳು ಕುಚಿಕು ಗೆಳೆಯರಾಗಿದ್ದ ಚಕ್ರವರ್ತಿ ಮತ್ತು ಪ್ರಶಾಂತ್​. ಈ ವಾರವಿಡಿ ಗಮನಿಸಿದ್ರೆ ಇಬ್ಬರು ಸಾಕಷ್ಟು ಸಂಯಮದಿಂದ ವರ್ತಿಸಿದ್ದರು. ಈ ವಿಷಯ ಮನೆಯವರಿಗೆ ಶಾಕ್​ ಮತ್ತು ಖುಷಿ ನೀಡಿತ್ತು. ಆದರೆ ಯಾವಾಗ ಕಳಪೆ, ಅತ್ಯುತ್ತಮ ನೀಡುವ ವಿಚಾರ ಬಂತೂ ಶಾಂತಿಯುತವಾಗಿದ್ದ ಮನೆಯಲ್ಲಿ ಅಸಮಾಧಾನದ ಕಿಡಿ ಹೊತ್ತಿತು.
ಸುದೀಪ್ ಅವರು ಮಾತ್ನಾಡಿ, ಚಕ್ರವರ್ತಿ ಅವರೇ ನೀವೇ ಮೊದಲು ಹೇಳ್ತಿರಿ ನನಗೆ ಕಳಪೆ ಕೊಡಿ ಅಂತಾ ಆದ್ರೇ ಯಾವಾಗ ನಿಮಗೆ ಕಳಪೆ ಬರುತ್ತೊ ಆಗ ಯಾಕ್​ ನೀವು ಒಪ್ಕೊಳ್ಳೊದಿಲ್ಲ.

ಇದಕ್ಕೆ ಚಕ್ರವರ್ತಿ ಅವರು ಕೈಯಲ್ಲಿ ಕಪ್ಪು ಬಣ್ಣದ ಕವರ್​ ಹಿಡಿದು, ಬಿಗ್​ ಬಾಸ್​ ಮನೆಯ ರೂಲ್ಸ್​ ಪ್ರಕಾರ ಕಳಪೆ ಒಂದು ಫಾರ್ಮೆಟ್​ ಅದಕ್ಕೆ ನನಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ. ನನಗೆ ಮೊದಲೇ ಶಮಂತ್​ ಈ ಬಗ್ಗೆ ಹೇಳ್ತಾರೆ. ದಿವ್ಯಾ ಅವರಿಗೆ ಆದ ಗಾಯದ ವಿಚಾರವಾಗಿ ನಿಮಗೆ ಕಳಪೆ ಬರಬಹುದು ಅಂತಾ, ಹೀಗಾಗಿ ಕಳಪೆ ವಿಚಾರ ಬಂದ ತಕ್ಷಣ ನಾನು ಮೊದಲೇ ಹೇಳ್ತಿನಿ, ಆ ವಿಚಾರದ ಬಗ್ಗೆ ಆದ್ರೇ ನಾನು ಬೇಕಂತಾ ದಿವ್ಯಾ ಉರುಡುಗ ಅವರಿಗೆ ಇಂಜೂರಿ ಆಗ್ಲಿ ಅಂತಾ ಮಾಡಿಲ್ಲ. ಅದು ಒಂದು ಆಕಸ್ಮಿಕ ಘಟನೆ ಆದ್ರೂ ನಾನು ತಪ್ಪು ಒಪ್ಪಿಕೊಂಡು ನಾನೇ ಜೈಲಿಗೆ ಹೋಗ್ತಿನಿ ಅಂದೆ. ಆಗ ಎಲ್ಲರೂ ಇಲ್ಲ ಆ ವಿಷಯಕ್ಕೆ ಬೇಡ. ಅದು ಆಕಸ್ಮಿಕ ಘಟನೆ ಅಂತಾ ಹೇಳ್ತಾರೆ. ಆದಾದ್ಮೇಲೆ ನಂಗೆ ಕಳಪೆ ಪಟ್ಟ ಕೊಡ್ತಾರೆ. ಇದು ನನಗೆ ಸರಿ ಅನ್ನಿಸಲಿಲ್ಲ. ಅವರು ನೀಡಿದ ಕಾರಣಗಳು ನನಗೆ ಕನ್ವಿನ್ಸ್​ ಆಗಲಿಲ್ಲ. ಅದಕ್ಕೆ ನಾನು ಹೋರಾಟದ ದಾರಿ ಹಿಡಿಯಬೇಕಾಯಿತು. ಹೀಗಾಗಿ ನಾನು ತರಕಾರಿ ಕಟ್​ ಮಾಡ್ಲಿಲ್ಲ.

ಇದಕ್ಕೆ ಪ್ರಿಯಾಂಕಾ ಅವರು ಉತ್ತರಿಸಿ, ನನಗೆ ಚಕ್ರವರ್ತಿ ಅವರ ವ್ಯಂಗ್ಯ ತಮಾಷೆ ನನಗೆ ಇಷ್ಟಾಗಿಲ್ಲ. ಅವರು ಬಳಸುವ ಶಬ್ದಗಳು ತುಂಬಾ ಕೆಟ್ಟದಾಗಿರುತ್ತೆ. ನಾನು ಶಮಂತ್​ ಮಾತಾಡಿದ್ರೇ ಅವರಿಗೆ ಅದು ಇಷ್ಟಾ ಆಗಲ್ಲಾ. ಫೇಕ್​, ಅನರಿಯಲ್​ ಅಂತಾರೆ ನಾನ್​ ಏನ್​ ಮಾಡಿದ್ದೀನಿ. ಅವರ ಕಾಮೆಂಟ್​ಗಳಿಗೆ ಬೆಸತ್ತು ನಾನು ಕಳಪೆ ನೀಡಿದ್ದಿನಿ ಅಂತಾರೆ.

ಇತ್ತ ಚಕ್ರವರ್ತಿ ಅವರು, ನಾನು ಒಂದು ಹೆಣ್ಣು ಮಗಳ ಬಗ್ಗೆ ಕೆಟ್ಟದಾಗಿ ಏನ್​ ಮಾತಾಡಲ್ಲ. ಅವರು ಮಾಡಿದ ರೀತಿಗಳಿಗೆ ನಾನು ಹೇಳಿದ್ದಿನಿ. ಜನಗಳ ಮುಂದೆ ಕಣ್ಣೀರು ಹಾಕಿ ಬಿಟ್ರೆ ಸುಳ್ಳು ನಿಜಾ ಆಗಲ್ಲಾ. ಅಷ್ಟಕ್ಕೂ ನಾನು ಅವರು ಬಿಗ್​ ಬಾಸ್​ ಮನೆಯಲ್ಲಿ ಇಲ್ವೇ ಇಲ್ಲ ಅನ್ಕೊಂಡಿದ್ದಿನಿ. ಇನ್ನೂ ಪ್ರಶಾಂತ್​ ಅವರು ತಾವು ನೋಡದೆ ಇರುವ ವಿಷದ ರಿಸನ್ ನೀಡಿದ್ರು, ಬರೀ ಸುಳ್ಳು ಹೇಳ್ತಾರೆ. ರಾಜಕೀಯ, ಫೇಕ್. ನಾನು ಹುಟ್ಟು ಹೋರಾಟಗಾರ. ಪ್ರಶಾಂತ್​ ಅವರು ತಾವು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹಾಕ್ತಾರೆ. ಕಳಪೆ ಹಾಕಿದ್ದರ ಬಗ್ಗೆ ಸರಿಯಾದ ಕನ್ವಿನ್ಸ್​ ಮಾಡ್ಲಿಲ್ಲ ಅಂದ್ರೇ ಈ ವಾರವಿಡಿ ನಾನು ಹೋರಾಟ ಮಾಡ್ತೀನಿ ಅಂತಾರೆ.

ಎಲ್ಲವನ್ನೂ ಕೇಳಿದ ಸುದೀಪ್​ ಅವರು ಖಡಕ್ ಆಗಿಯೇ ಉತ್ತರಿಸ್ತಾರೆ. ಕಳಪೆ ಮತ್ತು ಅತ್ಯುತ್ತಮ ಮಾಡೋದು ಅವರ ಅವರ ಅಭಿಪ್ರಾಯ ಹೇಳೋಕೆ. ಇಲ್ಲಿ ನೀವು ವಿರೋಧವನ್ನು ವ್ಯಕ್ತಪಡಿಸಬಹುದು. ಇನ್ನೂ ಅತ್ಯುತ್ತಮ ಕೊಟ್ಟಾಗ ಯಾರು ಯಾಕೆ ಅತ್ಯುತ್ತಮ ಕೊಟ್ರಿ ಅಂತಾ ಕೇಳಲ್ಲ. ಜೈಲ್​ ಕೂಡಾ ಬಿಗ್​ ಬಾಸ್​ ಮನೆಯ ಒಂದು ಭಾಗ. ಆ ಜಾಗವನ್ನು ಕಳೆದ  ಆವೃತ್ತಿ​ಗಳಲ್ಲಿ ತುಂಬಾ ಜನ ತುಂಬಾ ಚೆನ್ನಾಗಿ ಉಪಯೋಗಿಸಿದ್ದಾರೆ.

ಕಳಪೆ ಅತ್ಯುತ್ತಮ ಕೊಡುವಾಗ ಎಲ್ಲರೂ ತುಂಬಾ ಪಾಲಿಶ್​ಡ್​ ಆಗಿ ಮಾತಾಡ್ತಿರಾ. ಅದು ಸರಿಯಲ್ಲ ಖಡಾ ಖಂಡಿತವಾಗಿ ಮಾತಾಡಿ. ನಾನು ನಿಂತಿರುವ ವೇದಿಕೆ. ಕಳಪೆ ಮತ್ತು ಅತ್ಯುತ್ತಮದ ಬಗ್ಗೆ ಮಾತಾಡೊದು ಸರಿ ಅಲ್ಲ. ಅದು ನಿಮ್ಮ್ ​ನಿಮಗೆ ಬಿಟ್ಟಿದ್ದು. ಇಲ್ಲಿ ಎಲ್ಲರಿಗೂ ಅಭಿಪ್ರಾಯ ಹೇಳೊಕೆ, ವಿರೋಧ ವ್ಯಕ್ತಪಡೆಸೋಕೆ ಹಕ್ಕಿದೆ.  ಕ್ರಿಮ್ ಹಚ್ಚಿ ಮಾತಾಡೊದನ್ನು ಬಿಡಿ. ಜನರು ಎಲ್ಲಾ ನೋಡ್ತಿರ್ತಾರೆ ಅದನ್ನು ತೆಲೆಯಲ್ಲಿ ಇಟ್ಕೋಳ್ಳಿ ಎಂದು ಮನೆಯವರಿಗೆ ಸರಿ ಯಾವುದು ತಪ್ಪು ಯಾವುದು ಎನ್ನುವುದ್ರ ಬಗ್ಗೆ ಮನವರಿಕೆ ಮಾಡಿ ಕೊಟ್ಟರು.

ಒಟ್ಟಿನಲ್ಲಿ ಕಿಚ್ಚನ ಪಂಚಾಯ್ತಿಯಲ್ಲಿ ಎಲ್ಲದಕ್ಕೂ ಪರಿಹಾರ ಇರುತ್ತೆ ಅನ್ನುವುದು ಅಭಿಮಾನಿಗಳ ಅಭಿಪ್ರಾಯ. ಈ ದಿನಕ್ಕಾಗಿಯೇ ಕಾಯುವ ಅದೇಷ್ಟೋ ಜನರಿದ್ದಾರೆ.

The post ಚಕ್ರವರ್ತಿ ಅವರ ಆರೋಪಕ್ಕೆ ಖಡಕ್​ ಆಗಿಯೇ ಉತ್ತರಿಸಿದ ಕಿಚ್ಚ appeared first on News First Kannada.

Source: newsfirstlive.com

Source link