ಚಕ್ರವರ್ತಿ ವಿರುದ್ಧ ಮತ್ತೆ ಶಮಂತ್ ಕೆಂಡಾಮಂಡಲ.. ನಿಜಕ್ಕೂ ಆಗಿದ್ದೇನು..?

ಚಕ್ರವರ್ತಿ ವಿರುದ್ಧ ಮತ್ತೆ ಶಮಂತ್ ಕೆಂಡಾಮಂಡಲ.. ನಿಜಕ್ಕೂ ಆಗಿದ್ದೇನು..?

ಕ್ಯಾಪ್ಟನ್ಸಿಯಲ್ಲಿ ತಾಳ್ಮೆಯಿಂದ ವರ್ತಿಸಬೇಕು ಎಂದು ಚಕ್ರವರ್ತಿ ಅವರು ದಿವ್ಯಾ ಸುರೇಶ್​ಗೆ ಪಾಠ ಮಾಡ್ತಿದ್ರು.  ಈ ಗ್ಯಾಪನಲ್ಲಿ ಶಮಂತ್​ ಹೆಸರು ಬಂತು. ಇದಕ್ಕೆ ಶಮಂತ್​ ಖಾರವಾಗಿ ರಿಯಾಕ್ಟ್​ ಮಾಡಿದ್ದಾರೆ.

ಹೌದು.. ಮೊದಲು ಪ್ರಶಾಂತ್​ ಅವರ ಮುಂದೆ ಚಕ್ರವರ್ತಿ, ದಿವ್ಯಾರ ಕ್ಯಾಪ್ಟನ್ಸಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ರು. ತುಂಬಾ ರಾಜಕೀಯ ನಡೀತಿದೆ. ಮೂಟೆ ಟಾಸ್ಕ್​ನಲ್ಲಿ ಎಲ್ಲರೂ ಸಾಕಷ್ಟು ಫೌಲ್​ ಮಾಡಿದ್ರು. ಆದ್ರೂ ಕ್ಯಾಪ್ಟನ್​ ಏನು ಹೇಳಲಿಲ್ಲ. ಇನ್ನೂ ಶಮಂತ್​ ಹತ್ರ ಬಂದು ನೀನು ಚೆನ್ನಾಗ ಆಡ್ತಿದ್ಯಾ ಹಾಗೇ ಆಡು ಅನ್ನೋದು. ಇತ್ತ ವೈಷ್ಣವಿಗೆ ಓಡು ಓಡು ಅಂತಾ ಮೊಟಿವೇಟ್ ಮಾಡೋದೇನು? ಇದೆಲ್ಲ ನಂಗೆ ಸರಿ ಬರಲಿಲ್ಲ.  ಒಂದು ವೇಳೆ ಶಮಂತ್​ಗೆ ಸ್ವಲ್ಪ ಎಚ್ಚರಿಕೆ ನೀಡಿದ್ದರೂ ನಾನು ಇನ್ನೂ ಚೆನ್ನಾಗಿ ಆಡುತ್ತಿದ್ದೆ ಅಂತಾರೆ.

ನಂತರ ಎಲ್ಲರೂ ಸೋಫಾ ಮೇಲೆ ಕೂಳಿತಾಗ ದಿವ್ಯಾ ಎಸ್​ಗೆ ನೀನು ಸ್ವಲ್ಪ ತಾಳ್ಮೆಯಿಂದಿರು. ಎಲ್ಲದರ ಬಗ್ಗೆ ಎಚ್ಚರಿಕೆವಹಿಸು ಅಂತಾರೆ. ಮಾತುಕತೆ ಹೇಗಿತ್ತು ಅನ್ನೋದ್ರ ವಿವರ ಇಲ್ಲಿದೆ.

ಚಕ್ರವರ್ತಿ: ಮೂಟೆ ಟಾಸ್ಕ್​ನಲ್ಲಿ ಕತ್ತಿಗೆ ಹಗ್ಗ ಕಟ್ಟಿಕೊಂಡು ಶಮಂತ್​ ಸಖತ್​ ಕೂಗಾಡ್ತಿದ್ದ.
ದಿವ್ಯಾ ಎಸ್​: ಅವಂದು ಬಿಟ್ಟು ಬಿಡಿ. ನೀಮಗೆ ಫೌಲ್​ ಅಂತಾ ನೀಡುತ್ತಿದ್ದೆ. ಆದ್ರೆ ನೀವು ಕರೆಕ್ಟಾಗಿಯೇ ಆಡಿದ್ದೀರ.. ನೀವ್ಯಾಕೆ ತೆಲೆಕೆಡಿಸ್ಕೊಂತಿರ..
ಚಕ್ರವರ್ತಿ: ಇಲ್ಲ ಅದು ನಿನ್ನ ಜವಾಬ್ದಾರಿ. ನೀನು ಅವನಿಗೆ ಹೇಳಬಹುದಿತ್ತು. ಕತ್ತಿಗೆ ಕಟ್ಕೋಬೇಡ ಎಂದು. ಎಲ್ಲರಿಗೂ ಹೊಟ್ಟೆಗೆ ಕಟ್ಟಿಕೊಳ್ಳಲು ಹೇಳಿದೆ. ಆದ್ರೆ ಶಮಂತ್​ಗೆ ಹೇಳಲಿಲ್ಲ. ಬೈದ.

ಈ ನಡುವೆ ಶಮಂತ್​ ಮಾತನಾಡಿ, ನೀವು ಮೂರು ಸಾರಿ ಕತ್ತಿಂದ ಹಗ್ಗ ಎಳೆದ್ರಿ. ಆದಾದನಂತರ ನಾನು ರಿಂಗ್​ನಿಂದ ಆಚೆ ಹೋಗ್ತಿದ್ದೆ. ಅದಕ್ಕೆ ಕೋಪ ಬಂದು ಕಿರುಚಾಡಿದೆ. ಇಲ್ಲಾ ಅಂದ್ರೆ ನಂಗೆ ಏನು ಹುಚ್ಚಾ ಸುಮ್ ​ಸುಮ್ನೆ ಗಲಾಟೆ ಮಾಡೋಕೆ?

ಚಕ್ರವರ್ತಿ: ನಿಜಾ ಹೇಳು ನಾನು ನಿನ್ನ ತಳ್ಳಿದ್ನಾ? ತಾಳ್ಮೆ ಇಟ್ಕೊಂಡು ನೋಡು ನಿಂಗೆ ಗೊತ್ತಾಗುತ್ತೆ.
ಶಮಂತ್​: ಸರಿ ಹಾಗಿದ್ದರೆ ನೀವು ತಾಳ್ಮೆ ಇಟ್ಕೊಳ್ಳಿ. ಪದೇ ಪದೇ ಯಾಕೆ ಅದನ್ನೇ ಹೇಳ್ತಿದ್ದಿರಾ. 18 ಗಂಟೆಯಿಂದ ಅದನ್ನೇ ಹೇಳ್ತಿದ್ದಿರಾ..

ಚಕ್ರವರ್ತಿ: ನಾನು ನಿನ್ನ ವಿಷಯ ಬಿಟ್ಟಿದ್ದಿನಿ. ಡಿಎಸ್​ಗೆ ಉದಾಹರಣೆ ಕೊಡ್ತಿದ್ದೆ ಅಷ್ಟೇ. ನಂದೇ ತಪ್ಪಾ ಆಯ್ತು ಬಿಡು.
ಶಮಂತ್​: ನೀವು ಡಿಎಸ್​ಗಾದ್ರು ಹೇಳಿ, ಇಲ್ಲ ಅರವಿಂದ್​ಗಾದ್ರು ಹೇಳಿ. ಆದ್ರೆ ಅಲ್ಲಿ ನನ್ನ ಹೆಸರು ಬರಬಾರ್ದು. ನಾನು ಇಲ್ವೇ ಇಲ್ಲ ಅನ್ಕೊಳ್ಳಿ. ಆದ್ರೆ ಶಮಂತ್​ ಅಂತಾ ಎಲ್ಲಿಯೂ ಹೇಳಬೇಡಿ ಎಂದು ಖಡಕ್​ ಆಗಿಯೇ ವಾರ್ನ್​ ಮಾಡ್ತಾರೆ.

The post ಚಕ್ರವರ್ತಿ ವಿರುದ್ಧ ಮತ್ತೆ ಶಮಂತ್ ಕೆಂಡಾಮಂಡಲ.. ನಿಜಕ್ಕೂ ಆಗಿದ್ದೇನು..? appeared first on News First Kannada.

Source: newsfirstlive.com

Source link