ಚಡಚಣ ತಾಲೂಕಿನ ಜಿಗಜಿವಣಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವ್ಯವಸ್ಥೆ; ಚಿಕಿತ್ಸೆ ಇಲ್ಲದೆ ನರಳಾಡಿದ ಗರ್ಭಿಣಿ | Pregnant women struggling without treatment in primary Health center in Chadachana Vijayapura


ಚಡಚಣ ತಾಲೂಕಿನ ಜಿಗಜಿವಣಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವ್ಯವಸ್ಥೆ; ಚಿಕಿತ್ಸೆ ಇಲ್ಲದೆ ನರಳಾಡಿದ ಗರ್ಭಿಣಿ

ಚಿಕಿತ್ಸೆ ಇಲ್ಲದೆ ನರಳಾಡುತ್ತಿರುವ ಮಹಿಳೆ

ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಜಿಗಜಿವಣಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದೇ ಗರ್ಭಿಣಿಯ ನರಳಾಡುತ್ತಿದ್ದಾರೆ.

ವಿಜಯಪುರ :ವಿಜಯಪುರ (Vijaypur) ಜಿಲ್ಲೆ ಚಡಚಣ ತಾಲೂಕಿನ ಜಿಗಜಿವಣಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (Primary Health Center) ಅವ್ಯವಸ್ಥೆ ತಾಂಡವಾಡುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದೆ ಗರ್ಭಿಣಿಯರು ನರಳಾಡುತ್ತಿದ್ದಾರೆ. ಹೆರಿಗೆ ನೋವಿನಿಂದ ಗರ್ಭಿಣಿಯರು ನರಳುತ್ತಿದ್ದರೂ ವೈದ್ಯರು ಆಸ್ಪತ್ರೆಗೆ‌ ಬರುತ್ತಿಲ್ಲ. ನಿನ್ನೆ (ಮೇ 23) ರಂದು ಮದ್ಯಾಹ್ನ ಗರ್ಭಿಣಿ ಪೂರ್ಣಿಮಾ ಹೊನಕಾಂಡೆ ಹೆರಿಗೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದರು. ಪೂರ್ಣಿಮಾ ಹೆರಿಗೆ ನೋವಿನಿಂದ ಬಳಲುತ್ತಿದ್ದು, ಸಾಯಂಕಾಲದವರೆಗೂ ಆಸ್ಪತ್ರೆಯಲ್ಲಿ‌ ಚಿಕಿತ್ಸೆಗಾಗಿ  ಗರ್ಭಿಣಿ ಹಾಗೂ ಆಕೆಯ ಪೋಷಕರು ಕಾಯ್ದರು ವೈದ್ಯರು ಬರಲಿಲ್ಲ. ಗರ್ಭಿಣಿ ಪೂರ್ಣಿಮಾ ಆಸ್ಪತ್ರೆ ‌ನೆಲದ ಮೇಲೆ ಕುಳಿತು‌ ನರಳಾಡಿದ್ದಾರೆ.

ಇದನ್ನು ಓದಿ: ಪ್ರೋಟೀನ್ ಪೌಡರ್ ಅತಿಯಾಗಿ ಬಳಸ್ತೀರಾ, ಈ ಅಡ್ಡಪರಿಣಾಮಗಳ ಬಗ್ಗೆ ಎಚ್ಚರವಿರಲಿ

ಈ ವೇಳೆ ಆಸ್ಪತ್ರೆಯಲ್ಲಿದ್ದ ಇಬ್ಬರು ಸಿಬ್ಬಂದಿಗಳು ತಾವು‌ ನಿಸ್ಸಾಯಕರು ಎಂಬಂತೆ  ಹೇಳಿಕೆ ನೀಡಿದ್ದಾರೆ. ಸಾಯಂಕಾಲ‌ ಆರು ಗಂಟೆವರೆಗೂ ಆಸ್ಪತ್ರೆಯಲ್ಲಿ ಕಾಯ್ದರೂ ವೈದ್ಯರು ಬಾರದಿದ್ದಕ್ಕೆ ಚಡಚಣದ ಸಮುದಾಯ ಆರೋಗ್ಯ ‌ಕೇಂದ್ರಕ್ಕೆ ಗರ್ಭಿಣಿ ಪೂರ್ಣಿಮಾ ತೆರಳಿದ್ದಾರೆ. ಅಂಬ್ಯುಲೆನ್ಸ್ ಮ‌ೂಲಕ ಸಮುದಾಯ ಆರೋಗ್ಯ ‌ಕೇಂದ್ರಕ್ಕೆ ತೆರಳುವಾಗ ಮಾರ್ಗ ಮಧ್ಯೆ ಅಂಬ್ಯುಲೆನ್ಸ್ ನಲ್ಲೇ ಹೆರಿಗೆ ಆಗಿದೆ. ಅಂಬ್ಯುಲೆನ್ಸ್ ನಲ್ಲಿ ಪೂರ್ಣಿಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಇದನ್ನು ಓದಿ: ಕಲಬುರಗಿ ಬಹಮನಿ ಕೋಟೆಯಲ್ಲಿ ಸೋಮೇಶ್ವರ ದೇಗುಲದ ಕುರುಹು ವಿಚಾರ; ಟಿವಿ9ಗೆ ಮಾಹಿತಿ ನೀಡಿದ ಇತಿಹಾಸ ಪ್ರಾಧ್ಯಾಪಕ

ತಾಯಿ‌ ಹಾಗೂ ಮಗುವಿಗೆ ಚಡಚಣದ ಸಮುದಾಯ ಆರೋಗ್ಯ‌ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಮಗು ಆರೋಗ್ಯವಾಗಿದ್ದಾರೆಂದು ವೈದ್ಯರು ಮಾಹಿತಿ ನೀಡಿದ್ದಾರೆ. ಜಿಗಜಿವಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಗಳ ವರ್ತನೆಗೆ ಗರ್ಭಿಣಿ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿದ್ದಾರೆ. ಕರ್ತವ್ಯ ‌ನಿರ್ಲಕ್ಷ್ಯ ಆರೋಪದ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿಗಳು (District Health Officer) ಕ್ರಮ‌ ತೆಗೆದುಕೊಳ್ಳಬೇಕೆಂದು ಪೋಷಕರು ಒತ್ತಾಯ ಮಾಡುತ್ತಿದ್ದಾರೆ.

TV9 Kannada


Leave a Reply

Your email address will not be published. Required fields are marked *