ಕಿವೀಸ್ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನ ಪ್ರಕಟಿಸಲು ಸೆಲೆಕ್ಷನ್ ಕಮಿಟಿ ಸಿದ್ಧತೆ ನಡೆಸ್ತಿದೆ. ಈ ವೇಳೆ ಓರ್ವ ಯಂಗ್ ವಿಕೆಟ್ ಕೀಪರ್ಗೆ ಮಣೆಹಾಕಲು, ಸೆಲೆಕ್ಟರ್ಸ್ ಮುಂದಾಗಿದ್ದಾರೆ. ಇದು ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಆತಂಕಕ್ಕೆ, ಕಾರಣವಾಗಿದೆ.
ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿ, ಇದೇ 25ರಿಂದ ಆರಂಭಗೊಳ್ಳಲಿದೆ. ಇದಕ್ಕಾಗೆ ಟೆಸ್ಟ್ ತಂಡವನ್ನ ಪ್ರಕಟಿಸಲು ಸೆಲೆಕ್ಷನ್ ಕಮಿಟಿ ಸನ್ನದ್ಧವಾಗಿದೆ. ಟಿ20 ಮಾದರಿಯಂತೆ ಟೆಸ್ಟ್ ತಂಡದಲ್ಲೂ ಕೆಲ ಬದಲಾವಣೆಗಳಾಗುವ ಸಾಧ್ಯತೆ ಇದೆ. ಹೌದು..! ಸದ್ಯ ಟಿ20 ತಂಡದಲ್ಲಿ ಬದಲಾವಣೆ ತಂದಿರುವ ಸೆಲೆಕ್ಷನ್ ಕಮಿಟಿ, ಈಗ ಟೆಸ್ಟ್ ತಂಡದಲ್ಲೂ ಅಂಥದ್ದೇ ನಡೆ ಅನುಸರಿಸಲು ಮುಂದಾಗಿದೆ. ಹೀಗಾಗಿಯೇ ಕೆಲ ಹಿರಿಯ ಆಟಗಾರರ ಸ್ಥಾನವನ್ನ, ಅಂತತ್ರಕ್ಕೆ ಸಿಲುಕಿಸುತ್ತಿದೆ.
ವೃದ್ದಿಮಾನ್ ಸಾಹ, ಟೀಮ್ ಇಂಡಿಯಾದ ಶ್ರೇಷ್ಠ ವಿಕೆಟ್ ಕೀಪರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ.. ವಿಕೆಟ್ ಹಿಂದೆ ಕೈಚಳಕ ತೋರುವ ಸಾಹ, ಅವಕಾಶ ಸಿಕ್ಕಾಗ ವಿಕೆಟ್ ಮುಂದೆ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಇದಕ್ಕಿಂತ ಹೆಚ್ಚಾಗಿ ವೃದ್ದಿಮಾನ್ ವಯಸ್ಸು, ತಂಡದಲ್ಲಿ ಮುಂದುವರಿಯಲು ಅಡ್ಡಗಾಲಾಗ್ತಿದೆ. ಹೀಗಾಗಿ ವೃದ್ದಿಮಾನ್ ಸಾಹ ಜಾಗದಲ್ಲಿ, ಯಂಗ್ ವಿಕೆಟ್ ಕೀಪರ್ಗೆ ಅವಕಾಶ ನೀಡಲು, ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್ಮೆಂಟ್ ಮುಂದಾಗಿದೆ.
ಸಾಹ ಬದಲಿಗೆ ಯಂಗ್ ವಿಕೆಟ್ ಕೀಪರ್ ಭರತ್ಗೆ ಸ್ಥಾನ..?
ದೇಶಿ ಕ್ರಿಕೆಟ್ನಲ್ಲಿ ತನ್ನ ಪ್ರತಿಭೆ ಅನಾವರಣಗೊಳಿಸಿರುವ ಭರತ್, ಈಗ ಮತ್ತೊಮ್ಮೆ ರಾಷ್ಟ್ರೀಯ ತಂಡದ ಕದ ತಟ್ಟುತ್ತಿದ್ದಾರೆ. 2019ರ ಕೊಲ್ಕತ್ತಾ ಪಿಂಕ್ ಬಾಲ್ ಟೆಸ್ಟ್ ವೇಳೆ ತಂಡಕ್ಕೆ ಆಯ್ಕೆಯಾಗಿದ್ದ ಭರತ್, ಹಿಂದೆ ರಿಸರ್ವ್ ವಿಕೆಟ್ ಕೀಪರ್ ಆಗಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಪ್ರವಾಸ ಸೇರಿದಂತೆ, ಕೆಲ ಸರಣಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಈಗ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಆಗೋದು ಬಹುತೇಕ ಖಚಿತವಾಗಿದೆ. ಐಪಿಎಲ್ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಕೆ.ಎಸ್.ಭರತ್, ಬ್ಯಾಟಿಂಗ್ ಜೊತೆಗೆ ಉತ್ತಮ ವಿಕೆಟ್ ಕೀಪಿಂಗ್ ಸ್ಕಿಲ್ಸ್ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್ಗೆ ಬೇಕಿರುವ ಕ್ವಾಲಿಟಿಸ್ ಈತನಲ್ಲಿವೆ.
ಪ್ರಥಮ ದರ್ಜೆ ಕ್ರಿಕೆಟ್
- ಪಂದ್ಯ 78
- ರನ್ 4283
- ಸರಾಸರಿ 37.24
- ಶತಕ 09
ಇದುವರೆಗೆ 78 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಕೆ.ಎಸ್.ಭರತ್, 4283 ರನ್ ಕಲೆಹಾಕಿದ್ದಾರೆ. 37.24ರ ಸರಾಸರಿಯಲ್ಲಿ ರನ್ ಕೆಲೆಹಾಕಿರುವ ಭರತ್, 23 ಅರ್ಧಶತಕ ಹಾಗೂ 9 ಶತಕ ಸಿಡಿಸಿದ್ದಾರೆ.
ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಪ್ರಥಮ ದರ್ಜೆ ಕ್ರಿಕೆಟ್ನ 2015ರ ಜನವರಿ ಮತ್ತು 2018ರ ಸೆಪ್ಟೆಂಬರ್ ಅವಧಿಯಲ್ಲಿ, ಅತಿ ಹೆಚ್ಚು ಬ್ಯಾಟ್ಸ್ಮನ್ಗಳನ್ನ ಬಲಿ ಪಡೆದ ಇಂಡಿಯನ್ ವಿಕೆಟ್ ಕೀಪರ್ ಆಗಿದ್ದಾರೆ. ಈ ವಿಚಾರದಲ್ಲಿ ರಿಷಭ್ ಪಂತ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ರನ್ನೇ, ಭರತ್ ಹಿಂದಿಕ್ಕಿದ್ದಾರೆ. ಈ ಅವಧಿಯಲ್ಲಿ 40 ಪಂದ್ಯಗಳಿಂದ 141 ಕ್ಯಾಚ್, 14 ಸ್ಟಂಪ್ ಮಾಡಿದ ಖ್ಯಾತಿ, ಕೆ.ಎಸ್.ಭರತ್ಗೆ ಸೇರುತ್ತೆ. ಆದ್ರೀಗ ಬ್ಯಾಕ್ ಅಪ್ ವಿಕೆಟ್ ಕೀಪರ್ ಸ್ಥಾನ ಪಡೆಯಲು ತುದಿಗಾಲಿನಲ್ಲಿ ನಿಂತಿರುವ ಭರತ್, ಮುದೊಂದು ದಿನ ಟೀಮ್ ಇಂಡಿಯಾ ಟೆಸ್ಟ್ ತಂಡದ ಖಾಯಂ ವಿಕೆಟ್ ಕೀಪರ್ ಆದ್ರೂ, ಅಚ್ಚರಿ ಇಲ್ಲ.