ಗದಗ: ಚತ್ತೀಸ್​ಘಡದಲ್ಲಿ ನಡೆದ ನಕ್ಸಲರ ಜೊತೆಗಿನ ಸೆಣಸಾಟದಲ್ಲಿ ಗದಗ ಮೂಲದ ಯೋಧ ಹುತಾತ್ಮರಾಗಿದ್ದಾರೆ. ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮದ ಲಕ್ಷ್ಮಣ್ಣ ಗೌರಣ್ಣವರ್ (30) ಎಂಬುವರು ಹುತಾತ್ಮರಾದ ಯೋಧ.

ಲಕ್ಷ್ಮಣ್ಣ ಗೌರಣ್ಣವರ್ 12 ವರ್ಷಗಳಿಂದ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ 15 ದಿನದ ಹಿಂದೆ ರಜೆ ಮೇಲೆ ಬಂದು ತೆರಳಿದ್ದ ಯೋಧ ಇಂದು ನಕ್ಸಲರ ದಾಳಿಯಲ್ಲಿ ಗುಂಡೇಟಿಗೆ ಬಲಿಯಾಗಿದ್ದಾರೆ.

ಇನ್ನು ಈ ವಿಚಾರವಾಗಿ ಗದಗ ಜಿಲ್ಲಾಡಳಿತಕ್ಕೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ. ಚತ್ತೀಸ್​ಘಡ ಯೋಧರು ಹುತಾತ್ಮ ಸೈನಿಕ ಲಕ್ಷ್ಮಣ್ಣ ಗೌರಣ್ಣವರ್ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

The post ಚತ್ತೀಸ್​​ಘಡದಲ್ಲಿ ನಕ್ಸಲರ ದಾಳಿ; ಹೋರಾಡುತ್ತಲೇ ಹುತಾತ್ಮನಾದ ಗದಗ ಮೂಲದ ವೀರಯೋಧ appeared first on News First Kannada.

Source: newsfirstlive.com

Source link