ನವದೆಹಲಿ:  ದೇಶದ ಜನರಿಗೆ ಕೊರೊನಾ ಲಸಿಕೆಯನ್ನ ಉಚಿತವಾಗಿ ಕೊಡಬೇಕು ಅಂತ ಕಾಂಗ್ರೆಸ್​ ಮುಖಂಡ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಇಂದು ಈ ಬಗ್ಗೆ ಟ್ವೀಟ್ ಮಾಡಿರುವ ಅವರು,  ಚರ್ಚೆ ಬಹಳ ಆಗೋಗಿದೆ. ದೇಶದ ಜನರಿಗೆ ಉಚಿತವಾಗಿ ಲಸಿಕೆ  ಸಿಗಬೇಕು ಅಷ್ಟೇ.. ಬಾತ್ ಖತಂ. ಭಾರತವನ್ನು ಬಿಜೆಪಿ ವ್ಯವಸ್ಥೆಗೆ ಬಲಿಯಾಗಿಸಬೇಡಿ ಎಂದು ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ಎಲ್ಲರಿಗೂ ಉಚಿತ ವ್ಯಾಕ್ಸಿನ್ ನೀಡುವಂತೆ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಅಂದ್ಹಾಗೆ ಭಾರತ್​ ಬಯೋಟೆಕ್ ಅಭಿವೃದ್ಧಿಪಡಿಸಿರುವ ಸ್ವದೇಶಿ ಲಸಿಕೆ ಕೋವ್ಯಾಕ್ಸಿನ್​ಗೆ ಮೊನ್ನೆ ಸಂಸ್ಥೆ ದರ ನಿಗದಿ ಮಾಡಿದ್ದು, ರಾಜ್ಯ ಸರ್ಕಾರಗಳಿಗೆ ಒಂದು ಡೋಸ್​​ಗೆ 600 ರೂಪಾಯಿ, ಖಾಸಗಿ ಆಸ್ಪತ್ರೆಗೆ 1,200 ರೂಪಾಯಿ ದರದಲ್ಲಿ ಪೂರೈಕೆ ಮಾಡುವುದಾಗಿ ಹೇಳಿದೆ.

The post ಚರ್ಚೆ ಬಹಳ ಆಯ್ತು. ಜನರಿಗೆ ಉಚಿತ ಲಸಿಕೆ ಸಿಗಬೇಕು ಅಷ್ಟೇ.. ಬಾತ್ ಖತಂ -ರಾಹುಲ್ ಗಾಂಧಿ appeared first on News First Kannada.

Source: News First Kannada
Read More