ಚರ್ಮ ರೋಗಗಳು  ಎಲ್ಲರನ್ನೂ ಗಾಢವಾಗಿ ಕಾಡುವ ಸಮಸ್ಯೆಗಳಲ್ಲಿ ಒಂದು. ಕೆಲವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಸ್ಪಲ್ಪ ಪ್ರಮಾಣದಲ್ಲಿ ದೇಹವನ್ನು ಬಾಧಿಸಿದರೆ ಇನ್ನೂ ಕೆಲವು ಚರ್ಮರೋಗಗಳು ದೇಹದ ಮೇಲೆ ಭಾರಿ ಪರಿಣಾಮವನ್ನು ಬೀರುತ್ತದೆ.

ಚರ್ಮ ರೋಗಳನ್ನು ನಮ್ಮ ಸುತ್ತಮುತ್ತಲಿನ ಪ್ರಕೃತಿಯಲ್ಲಿ ದೊರಕುವ ಹಲವು ಗಿಡಮೂಲಿಕೆಗಳು ಮತ್ತು ನೈಸರ್ಗಿಕ ವಸ್ತುಗಳಿಂದ ಪರಿಣಾಮಕಾರಿಯಾಗಿ ಗುಣಪಡಿಸಿಕೊಳ್ಳಬಹುದಾಗಿದೆ.

ಚರ್ಮರೋಗದ ನಿವಾರಣೆಗೆ ಹೀಗೆ ಮಾಡಬಹುದು

1.ನಮ್ಮ ಸುತ್ತಮತ್ತಲು ಒದಗುವ ಬೇವಿನ ಎಲೆಯನ್ನು ಹುರಿದು ಅದನ್ನು ಸ್ಪಲ್ಪ ಹೊಂಗೆ ಎಣ್ಣೆಯೊಂದಿಗೆ ಬೆರಸಿ ದೇಹಕ್ಕೆ ಹಚ್ಚಿ ಸ್ನಾನ ಮಾಡುವುದರಿಂದ ಕಜ್ಜಿಯಂತಹ ಸಮಸ್ಯೆಗಳು ದೂರವಾಗುತ್ತದೆ.

2.ಬೇವಿನಲ್ಲಿ ರೋಗನಿರೋಧಕ ಶಕ್ತಿ ಹೇರಳವಾಗಿ ಇರುವುದರಿಂದ ಬೇವಿನ ತೊಗಟೆಯನ್ನು ನೀರಿನಲ್ಲಿ ಬೆರೆಸಿ ಚೆನ್ನಾಗಿ ಅರೆದು ಇದನ್ನು ಹಚ್ಚಿ ಸ್ನಾನ ಮಾಡುವುದರಿಂದ ಚರ್ಮ ರೋಗಗಳು ದೂರವಾಗುತ್ತದೆ. ಇನ್ನು ಬೇವಿನ ಬೀಜವನ್ನು ಗೋಮೂತ್ರದ ಜೊತೆ ಸೇರಿಸಿ ಅರೆದು ದೇಹಕ್ಕೆ ಲೇಪಿಸಿ ಸ್ನಾನ ಮಾಡುವುದರಿಂದ ಚರ್ಮದ ಸಮಸ್ಯೆಗಳು ಶಮನವಾಗುತ್ತದೆ.

3. ಸೌತೆಕಾಯಿಯನ್ನು ಚೆನ್ನಾಗಿ ಅರೆದು ರಸ ತೆಗೆದು ನಂತರ ಅದನ್ನು ಹಚ್ಚಿ ಸ್ನಾನ ಮಾಡುವುದರಿಂದ, ಸೌತೆಕಾಯಿ ರಸವನ್ನು ಸೇವಿಸುವುದರಿಂದ ಚರ್ಮ ರೋಗದಿಂದ ಪರಿಹಾರ ಪಡೆಯಬಹುದಾಗಿದೆ.

ಇದನ್ನೂ ಓದಿ:ಪಶ್ಚಿಮಬಂಗಾಳ: 100 ಗ್ರಾಂ ಕೊಕೇನ್ ಸಹಿತ ಬಿಜೆಪಿ ಯುವಮೋರ್ಚಾ ನಾಯಕಿ ಬಂಧನ

4.ಅರಶಿನದ ಬೇರನ್ನು ಗೋಮೂತ್ರ  ಅಥವಾ ಲಿಂಬೆ ರಸದೊಂದಿಗೆ ಅರೆದು ಅದನ್ನು ಹಚ್ಚಿ ಸ್ನಾನ ಮಾಡುವುದರಿಂದ ತುರಿಕೆ ಸೇರಿದಂತೆ ಹಲವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದಾಗಿದೆ.

ಇದಿಷ್ಟೇ ಅಲ್ಲದೆ ಶ್ರೀಗಂಧವನ್ನು ಅರೆದು ಚೂರ್ಣ ಮಾಡಿಕೊಂಡು ಸ್ನಾನ ಮಾಡುವಾಗ ಈ ಚೂರ್ಣವನ್ನು ಹಚ್ಚಿ ಸ್ನಾನ ಮಾಡುವುದರಿಂದ ಮತ್ತು ಗರಿಕೆ ಹಾಗೂ ಅರಶಿನವನ್ನು ಬೆರೆಸಿ ಚೂರ್ಣ ಮಾಡಿಕೊಂಡು ಸ್ನಾನದ ಸಮಯದಲ್ಲಿ ಲೇಪಿಸುವುದರಿಂದ ಚರ್ಮ ರೋಗಗಳಿಂದ ಪರಿಣಾಮಕಾರಿ ಪರಿಹಾರವನ್ನು ಕಾಣಬಹುದಾಗಿದೆ.

ಆರೋಗ್ಯ – Udayavani – ಉದಯವಾಣಿ
Read More