ಚಲಿಸುತ್ತಿದ್ದ ಬೈಕ್​​ಗೆ ಸಿಮೇಂಟ್ ಮಿಕ್ಸಿಂಗ್ ಲಾರಿ ಡಿಕ್ಕಿ; ಸ್ಥಳದಲ್ಲೇ ಮಹಿಳೆ ಸಾವು | Accident Between Bike and Lorry 1 Spot dead in Devanahalli Bengaluru


ಚಲಿಸುತ್ತಿದ್ದ ಬೈಕ್​​ಗೆ ಸಿಮೇಂಟ್ ಮಿಕ್ಸಿಂಗ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿ ಸವಾರಿ ಮಾಡುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ನಡೆದಿದೆ.

ಚಲಿಸುತ್ತಿದ್ದ ಬೈಕ್​​ಗೆ ಸಿಮೇಂಟ್ ಮಿಕ್ಸಿಂಗ್ ಲಾರಿ ಡಿಕ್ಕಿ; ಸ್ಥಳದಲ್ಲೇ ಮಹಿಳೆ ಸಾವು

ಸಾಂಧರ್ಬಿಕ ಚಿತ್ರ

ಬೆಂಗಳೂರು: ಚಲಿಸುತ್ತಿದ್ದ ಬೈಕ್​​ಗೆ (Bike) ಸಿಮೇಂಟ್ ಮಿಕ್ಸಿಂಗ್ ಲಾರಿ (Lorry) ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿ ಸವಾರಿ ಮಾಡುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೇವನಹಳ್ಳಿ (Devanhalli) ಹೊರವಲಯದ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ನಡೆದಿದೆ. ಬೈಕ್ ಚಿಕ್ಕಬಳ್ಳಾಪುರ ಕಡೆಯಿಂದ ಬೆಂಗಳೂರಿನತ್ತ ಬರುತ್ತಿತ್ತು. ಈ ವೇಳೆ ಹಿಂದಿನಿಂದ ಲಾರಿ ಡಿಕ್ಕಿ‌ ಹೊಡೆದಿದೆ. ಡಿಕ್ಕಿ ಹೊಡೆದ ರಬಸಕ್ಕೆ ಮಹಿಳೆ ಕೆಳಗೆ ಬಿದ್ದಿದ್ದು, ಮಹಿಳೆ ಮೆಲೆ ಲಾರಿ ಟೈರ್ ಹರಿದಿದೆ. ಪರಿಣಾಮ ಸ್ಥಳದಲ್ಲೆ ಮಹಿಳೆ ದುರ್ಮರಣ ಹೊಂದಿದ್ದಾರೆ. ಮಹಿಳೆಯ ಗುರುತು ಪತ್ತೆಯಾಗಿಲ್ಲ. ಏರ್ಪೋಟ್ ಸಂಚಾರಿ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ‌ ಡಿಕ್ಕಿ, ಬೈಕ್ ಸವಾರ ಸಾವು

ರಾಯಚೂರು: ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ‌ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಾನ್ವಿ ಪಟ್ಟಣದ ಸರಕಾರಿ ಪದವಿ ಕಾಲೇಜು ಬಳಿ ನಡೆದಿದೆ. ಜಲಾಲಿ(35) ಮೃತ ಬೈಕ್ ಸವಾರ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಲಾರಿ ಕೆಳಗೆ ಸಿಲುಕಿದೆ. ಈ ವೇಳೆ ಜಲಾಲಿ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಸ್ಥಳಕ್ಕೆ ಮಾನ್ವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆದಿಸಿದ್ದಾರೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸಿಆರ್​ಪಿಎಫ್ ಯೋಧ ಸಾವು

ಬಾಗಲಕೋಟೆ: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸಿಆರ್​ಪಿಎಫ್ ಯೋಧ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಚಿದಾನಂದ ಭಜಂತ್ರಿ (52) ಮೃತ ಯೋಧ. ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಗುಡೂರು ಗ್ರಾಮ ಯೋಧ ಚಿದಾನಂದ ಭಜಂತ್ರಿ 1988ರಲ್ಲಿ ಸಿಆರ್​ಪಿಎಫ್ ಸೇರಿದ್ದರು. ಇವರು ಬೆಳಗಾವಿಯ ೩೨ ಸಿಆರ್​ಪಿಎಫ್ ಬಟಾಲಿಯನ್​ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಪತ್ನಿಗೆ ಹುಷಾರಿಲ್ಲದ ಕಾರಣ ರಜೆ ಮೇಲೆ ಊರಿಗೆ ಬಂದಿದ್ದರು. ಅಗಷ್ಟ್ 9 ರಂದು ಬಾಗಲಕೋಟೆ ತಾಲ್ಲೂಕಿನ ಸೀಮಿಕೇರಿ ಬಳಿ ಇವರ ಬೈಕ್​ಗೆ ಹಿಂಬದಿಯಿಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿತ್ತು. ಇದರಿಂದ ಯೋಧ ಗಂಭೀರ ಗಾಯಗೊಂಡಿದ್ದು  ಬೆಳಗಾವಿಯ ಖಾಸಗಿ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇಂದು (ಆ 24) ರಾತ್ರಿ 8 ಗಂಟೆಗೆ ಗುಡೂರು ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಬೈಕ್​ಗೆ ಹಿಂಬದಿಯಿಂದ ಲಾರಿ ಡಿಕ್ಕಿ: ದಂಪತಿ ಸೇರಿದಂತೆ ಮಗು ಸ್ಥಳದಲ್ಲೇ ದುರ್ಮರಣ

ಬಳ್ಳಾರಿ: ಲಾರಿ ಡಿಕ್ಕಿಯಾಗಿ ಬೈಕ್​​ನಲ್ಲಿ ತೆರಳುತ್ತಿದ್ದ ಮೂವರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಕೌಲ್​ಬಜಾರ್ ಫ್ಲೈಓವರ್ ಮೇಲೆ ಅಪಘಾತ ಸಂಭವಿಸಿದೆ. ಬೈಕ್​​ನಲ್ಲಿ ತೆರಳುತ್ತಿದ್ದ ದಂಪತಿ ವೀರೇಶ್, ಅಂಜಲಿ ಹಾಗೂ ಮಗು ದಿನೇಶ್ ದುರ್ಮರಣ ಹೊಂದಿದ್ದಾರೆ. ಹನಿ ಎಂಬ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.