ಚಲಿಸುವ ವೇಳೆಯೇ ಮುರಿದು ಬಿದ್ದ Ola S1 Pro ಎಲೆಕ್ಟ್ರಿಕ್ ಸ್ಕೂಟರ್​ನ ಮುಂಭಾಗ | ಫೋಟೋ ವೈರಲ್ | Ola S1 Pro Ola S1 Pro Electric Scooter’s Front Suspension Broken


ಚಲಿಸುವ ವೇಳೆಯೇ ಮುರಿದು ಬಿದ್ದ Ola S1 Pro ಎಲೆಕ್ಟ್ರಿಕ್ ಸ್ಕೂಟರ್​ನ ಮುಂಭಾಗ | ಫೋಟೋ ವೈರಲ್

ಮುರಿದು ಬಿದ್ದ ಓಲಾ ಎಸ್1 ಪ್ರೋ ಮುಂಭಾಗ

Ola S1 Pro ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ ಕಡಿಮೆ ವೇಗದಲ್ಲಿ ಸವಾರಿ ಮಾಡುವಾಗ ಸ್ಕೂಟರ್​ನ ಮುಂಭಾಗ ಹ್ಯಾಂಡಲ್‌ಬಾರ್‌ಗೆ ಸಂಪರ್ಕಿಸುವ ಟಯರ್ ಮುರಿದು ಬಿದ್ದಿದೆ ಎಂದು ಸವಾರರೊಬ್ಬರು ಟ್ವೀಟ್ ಮಾಡಿದ್ದಾರೆ. 

ನವದೆಹಲಿ: Ola S1 Pro ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ ಕಡಿಮೆ ವೇಗದಲ್ಲಿ ಸವಾರಿ ಮಾಡುವಾಗ ಸ್ಕೂಟರ್​ನ ಮುಂಭಾಗ ಹ್ಯಾಂಡಲ್‌ಬಾರ್‌ಗೆ ಸಂಪರ್ಕಿಸುವ ಟಯರ್ ಮುರಿದು ಬಿದ್ದಿದೆ ಎಂದು ಸವಾರರೊಬ್ಬರು ಟ್ವೀಟ್ ಮಾಡಿದ್ದಾರೆ.  ಅವರು ಓಲಾ ಎಲೆಕ್ಟ್ರಿಕ್  ಭೌತಿಕ ರಚನೆಯು ಅಸುರಕ್ಷಿತವಾಗಿರಬಹುದು ಎಂದು ಆರೋಪಿಸಿದ್ದಾರೆ.  ಮುರಿದು ಬಿದ್ದ ಮುಂಬಾಗದ ಪೋಟೊವನ್ನು ಟ್ವೀಟ್ ಮಾಡಿ ಇದು ಅತ್ಯಂತ ಅಪಾಯಕಾರಿ ಪರಿಸ್ಥಿತಿಯನ್ನು ಪ್ರಸ್ತುತಪಡಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥರವರ ಶೈಕ್ಷಣಿಕ ಅರ್ಹತೆ ಬಿಡುಗಡೆ

ಕಡಿಮೆ ವೇಗದ ಡ್ರೈವಿಂಗ್‌ನಲ್ಲಿಯೂ ಮುಂಭಾಗದ ಫೋರ್ಕ್ ಮುರಿಯುತ್ತಿದೆ . ಇದು ನಾವು ಈಗ ಎದುರಿಸುತ್ತಿರುವ ಗಂಭೀರ ಮತ್ತು ಅಪಾಯಕಾರಿ ವಿಷಯವಾಗಿದೆ. ಆ ಭಾಗದ  ವಿನ್ಯಾಸ ಬದಲಾವಣೆಯಾಗಬೇಕು.  ಇದಿರಂದ ರಸ್ತೆ ಅಪಘಾತವನ್ನು ತಪ್ಪಿಸಬಹುದು ಎಂದು ಓಲಾ ಎಸ್ 1 ಪ್ರೊ ಮಾಲೀಕ ಶ್ರೀನಾದ್ ಮೆನನ್ ಅವರು ಟ್ವೀಟ್ ಮಾಡಿದ್ದಾರೆ ಶ್ರೀ ಮೆನನ್ ಅವರು ಪೋಸ್ಟ್‌ನಲ್ಲಿ ಓಲಾ ಸಿಇಒ ಮತ್ತು ಸಹ-ಸಂಸ್ಥಾಪಕ ಭವಿಶ್ ಅಗರ್ವಾಲ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ಇದನ್ನು ಓದಿ: ಊಟ ಮಾಡುವಾಗ ಮಕ್ಕಳು ಹಠ ಮಾಡುತ್ತಾರೆ ಏಕೆ?

ಕಪ್ಪು ಎಲೆಕ್ಟ್ರಿಕ್ ಸ್ಕೂಟರ್‌ನ ಮುಂಭಾಗದ ಟೈರ್ ಹೊರಬಂದಿರುವುದನ್ನು ಫೋಟೋ ತೋರಿಸುತ್ತದೆ. ಮುಂಭಾಗದ ಫೋರ್ಕ್ ಮುರಿದಿರುವುದರಿಂದ ಸ್ಕೂಟರ್ ಮುಂದೆ ಓರೆಯಾಗಿ ನೆಲದ ಮೇಲೆ ನಿಂತಿದೆ. ಹೆಚ್ಚಿನ ಜನರು ಫೋರ್ಕ್ ಮುರಿಯುವ ಘಟನೆಗಳು ಎಂದು ಹೇಳಿಕೊಳ್ಳುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

TV9 Kannada


Leave a Reply

Your email address will not be published. Required fields are marked *