‘ಚಲುವರಾಯ ಸ್ವಾಮಿ ಬಡ್ಡಿ ಕೊಡೋದಿರಲಿ ನಾನು ಕೊಟ್ಟ ಅಸಲೇ ವಾಪಸ್ ಕೊಟ್ಟಿಲ್ಲ’

‘ಚಲುವರಾಯ ಸ್ವಾಮಿ ಬಡ್ಡಿ ಕೊಡೋದಿರಲಿ ನಾನು ಕೊಟ್ಟ ಅಸಲೇ ವಾಪಸ್ ಕೊಟ್ಟಿಲ್ಲ’

ಮಂಡ್ಯ: ಮನ್‌ ಮುಲ್ ಹಗರಣ ಮುಚ್ಚಿಹಾಕಲು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜೊತೆ ಮಾತನಾಡಿದ್ದಾರೆ ಅನ್ನೋ ಚಲವರಾಯಸ್ವಾಮಿ ಆರೋಪಕ್ಕೆ ಹೆಚ್​ಡಿಕೆ ಕಿಡಿಕಾರಿದ್ದಾರೆ.

ಮಳವಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ.. ಹೌದು ನಾನು, ದೇವೇಗೌಡರು ಸಿಎಂ ಜೊತೆ ಮಾತನಾಡಿದ್ದೇವೆ. ನೀವು ಯಾವ ತನಿಖೆಯಾದರೂ ಮಾಡಿಕೊಳ್ಳಿ. ಆದ್ರೆ ಆಡಳಿತ ಮಂಡಳಿ ಸೂಪರ್‌ಸೀಡ್ ಮಾಡೋದು ಬೇಡ. ಹಗರಣ ಬಯಲಿಗೆಳೆದ ಆಡಳಿತ ಮಂಡಳಿ ವಿರುದ್ಧವೇ ಕ್ರಮ ಯಾಕೆ? ಎಂದು ಸಿಎಂಗೆ ಹೇಳಿದ್ದೇವೆ. ನನ್ನ ಬಡ್ಡಿ ಮಗ ಎನ್ನುತ್ತಾನಲ್ಲ.. ಆತ ನಮಗೆ ಬಡ್ಡಿ ಕೊಡುವುದಿರಲಿ ನಾನು ಕೊಟ್ಟ ಅಸಲೇ ವಾಪಸ್ ಕೊಟ್ಟಿಲ್ಲ. ನಾನೇ ಸಿಎಂಗೆ ಹೇಳಿ ಟೈಂ‌ ನಿಗಧಿ ಮಾಡ್ತೀನಿ. ಈ ವಯಸ್ಸಿನಲ್ಲಿ ಮಾದೇಗೌಡರು ಯಾಕೆ ಆ ಮಾಹಾನುಭಾವನನೇ ಕರೆದುಕೊಂಡು ಹೋಗಲಿ. ಹಗರಣ ಹೊರತಂದಿದ್ದೇ ಈ ಆಡಳಿತ ಮಂಡಳಿ.  ಹಗರಣ ಹೊರ ತಂದಿದ್ದಕ್ಕೆ ಆಡಳಿತ ಮಂಡಳಿ ಸೂಪರ್ ಸೀಡ್ ಆಗಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

ಇವರಿಗೆ ಮಾನ ಮರ್ಯಾದೆ ಇದ್ರೆ ಹಗರಣದ ತನಿಖೆ ನಡೆಸೋ ಬಗ್ಗೆ ಮಾತನಾಡಲಿ. ಇವರ ಅಪ್ಪಣೆ ತಗೊಂಡು ನಾನು ಮಂಡ್ಯಕ್ಕೆ ಬರಬೇಕಿಲ್ಲ. ನನ್ನ‌ ಜನ ಬಡವರಿದ್ದಾರೆ. ಈ ಜಿಲ್ಲೆಯ ಜನ ಋಣ ಹೊರಿಸಿದ್ದಾರೆ.  ನನಗೆ ಗೌರವ ಕೊಟ್ಟಿರೋ ಲಕ್ಷಾಂತರ ಜನ ಇಲ್ಲಿದ್ದಾರೆ. ಜೀವ ಮಣ್ಣಾಗುವ ವರೆಗೂ ಮಂಡ್ಯ ಜಿಲ್ಲೆಗೆ ಬರ್ತೀನಿ. ಮಾತನಾಡುವಾಗ ಎಚ್ಚರಿಕೆ ಇರಲಿ, ಏನ್ ಇವರ ಋಣ ತಿಂದಿದ್ದವಾ? ಹಲ್ಲು ಹಿಡಿದು ಮಾತನಾಡಲಿ, ಸೋತು ಮನೆಯಲ್ಲಿ ಮಲಗಿದ್ದ. ಆಗ ಎಂಪಿ ಮಾಡಿದೆ, ಸ್ವಂತ ದುಡಿಮೆಯಲ್ಲಿ ಪಾರ್ಲಿಮೆಂಟ್​ಗೆ ಹೋಗಿದ್ನಾ ಇವನು? ಎಂದು ಚಲುವರಾಯಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

The post ‘ಚಲುವರಾಯ ಸ್ವಾಮಿ ಬಡ್ಡಿ ಕೊಡೋದಿರಲಿ ನಾನು ಕೊಟ್ಟ ಅಸಲೇ ವಾಪಸ್ ಕೊಟ್ಟಿಲ್ಲ’ appeared first on News First Kannada.

Source: newsfirstlive.com

Source link