ಬೆಂಗಳೂರು: ಕೊರೋನಾ ವೈರಸ್ ನಿಂದ ಬಚಾವ್ ಆಗಬೇಕಾದ್ರೇ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಎಷ್ಟು ಮುಖ್ಯವೋ ವ್ಯಾಕ್ಸಿನ್ ಕೂಡ ಅಷ್ಟೇ ಮುಖ್ಯ. ವ್ಯಾಕ್ಸಿನ್ ಪಡೆದವರ ಮೇಲೆ ಕೊರೋನಾ ಪ್ರಭಾವ ಕಡಿಮೆ, ಹಾಗಾಗಿ ವ್ಯಾಕ್ಸಿನ್ ಪಡೆಯಲು ಜನ ಚಳಿ, ಗಾಳಿ, ಮಳೆಯನ್ನ ಲೆಕ್ಕಿಸದೇ ಬೆಳ್ಳಂಬೆಳಗ್ಗೆಯೇ ಬಂದು ಕ್ಯೂ ನಲ್ಲಿ ನಿಲ್ಲುತ್ತಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆಯ ಆವರಣದ ಮುಂಭಾಗದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರೋ ವ್ಯಾಕ್ಸಿನ್ ಡ್ರೈವ್ ಗೆ ಬೆಳಗ್ಗೆ 6 ಗಂಟೆಗೇ ಜನ ಸೇರಿದ್ದಾರೆ. 9 ಗಂಟೆಯ ನಂತರ ಶುರುವಾಗೋ ವ್ಯಾಕ್ಸಿನ್ ಡ್ರೈವ್ ಗಾಗಿ ಜನ ಬೆಳ್ಳಂಬೆಳಗ್ಗೆಯೇ ಬಂದು ಸರತಿಸಾಲಿನಲ್ಲಿ ನಿಂತಿದ್ದಾರೆ.  ಇದನ್ನೂ ಓದಿ: ಸ್ವಾಭಿಮಾನಿ ಪಕ್ಷ ಸ್ಥಾಪಿಸ್ತಾರಾ ಸಂಸದೆ ಸುಮಲತಾ ಅಂಬರೀಶ್..?

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದರೂ ಚಳಿ ಗಾಳಿಯನ್ನು ಸಹ ಲೆಕ್ಕಿಸದೇ ವ್ಯಾಕ್ಸಿನ್ ಸಿಕ್ಕಿದ್ರೇ ಸಾಕು ಅಂತಾ ಕ್ಯೂ ನಲ್ಲಿ ನಿಂತಿದ್ದಾರೆ. ಆದರೆ ವ್ಯಾಕ್ಸಿನ್ ಪಡೆಯೋ ಉತ್ಸಾಹದಲ್ಲಿ ಜನ ಸಾಮಾಜಿಕ ಅಂತರವನ್ನ ಸಂಪೂರ್ಣವಾಗಿ ಮರೆತಿದ್ದಾರೆ. ಇದನ್ನೂ ಓದಿ: ಪಕ್ಷೇತರರಾಗಿ ಅಖಾಡಕ್ಕಿಳೀತಾರಾ ಜಿಟಿಡಿ..?

The post ಚಳಿ ಗಾಳಿ ಲೆಕ್ಕಿಸದೇ ಬೆಳಂಬೆಳಗ್ಗೆಯೇ ವ್ಯಾಕ್ಸಿನ್‍ಗಾಗಿ ಕ್ಯೂ ನಿಂತ ಜನ appeared first on Public TV.

Source: publictv.in

Source link