ಚಹಲ್​ಗೆ ಅವಕಾಶ ನೀಡದ್ದಕ್ಕೆ ದ್ರಾವಿಡ್-​ರೋಹಿತ್​​ ಶರ್ಮಾ ವಿರುದ್ಧ ಫ್ಯಾನ್ಸ್​​ ಬೇಸರ; ಏನಂದ್ರು?


ಟೀಮ್​ ಇಂಡಿಯಾ ಲೆಗ್​ ಬ್ರೇಕ್​ ಸ್ಪಿನ್ನರ್​​ ಯಜುವೇಂದ್ರ ಚಹಲ್​ ಅವರನ್ನ ಎರಡನೇ ಟಿ20 ಪಂದ್ಯಕ್ಕೂ ಕೈ ಬಿಡಲಾಗಿದೆ. ಹೀಗಾಗಿ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ ಮತ್ತು ಟೀಂ ಇಂಡಿಯಾ ಕೋಚ್​​ ರಾಹುಲ್​​ ದ್ರಾವಿಡ್​​, ಹೊಸ ನಾಯಕ ರೋಹಿತ್​​ ಶರ್ಮಾ ವಿರುದ್ಧ ಮತ್ತೆ ಟೀಕೆಗಳ ಸುರಿಮಳೆಗೈಯುತ್ತಿದ್ದಾರೆ ನೆಟ್ಟಿಗರು. ಕಿವೀಸ್​ ವಿರುದ್ಧದ ಮೊದಲ ಟಿ20ಗೂ ಚಹಲ್​ರನ್ನ ಡ್ರಾಪ್​​ ಮಾಡಲಾಗಿತ್ತು. ಈಗ ಇವತ್ತೂ (2ನೇ ಟಿ20) ಕೂಡ ಕೈ ಬಿಟ್ಟಿರೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಯಾವ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗ್ತಿದೆ.

ಟಿ20 ವಿಶ್ವಕಪ್​​ಗೂ ಆಯ್ಕೆ ಮಾಡದೆ ಅನ್ಯಾಯ ಮಾಡಲಾಗಿತ್ತು. ಇದೀಗ ಕಿವೀಸ್​ ಸರಣಿಗೆ ಆಯ್ಕೆ ಮಾಡಿದ್ರೂ ಆಡುವ 11ರ ಬಳಗದಲ್ಲಿ ಕಣಕ್ಕಿಳಿಸುತ್ತಿಲ್ಲ. ನಿಮಗೆ ಇದು ಸರಿ ಅನಿಸುತ್ತಿದೆಯೇ ಎಂದು ಫ್ಯಾನ್ಸ್​​ ಮ್ಯಾನೇಜ್​ಮೆಂಟ್​ಗೆ ಕೇಳಿದ್ದಾರೆ. ಇತ್ತ ಐಪಿಎಲ್​​​ನಲ್ಲಿ ಕಳಪೆ ಪ್ರದರ್ಶನ ನೀಡಿದಿದ್ದಿದ್ರೆ, ಅವಕಾಶ ನೀಡದಿರಲು ಕಾರಣವಿತ್ತು. ಆದರೆ IPLನಲ್ಲಿ ಅದ್ಭುತವಾಗೇ ಕಮ್​​ಬ್ಯಾಕ್​ ಮಾಡಿದ್ದಾರೆ. ಆದರೂ ಚಾನ್ಸ್​ ನೀಡದಿರೋದು ದುರದೃಷ್ಟವೇ ಸರಿ ಅಂತ ಬೇಸರ ವ್ಯಕ್ತಪಡಿಸಿದ್ದಾರೆ ಫ್ಯಾನ್ಸ್​.

News First Live Kannada


Leave a Reply

Your email address will not be published. Required fields are marked *