ಚಹಲ್​​ ವಿಚಾರದಲ್ಲಿ ಇಷ್ಟು ಕಠೋರ ಯಾಕೆ..? ಆಯ್ಕೆ ಸಮಿತಿ ವಿರುದ್ಧ ಫ್ಯಾನ್ಸ್ ಗರಂ


ಕಿವೀಸ್​ ವಿರುದ್ಧದ ಮೊದಲ ಟಿ-20 ಪಂದ್ಯಕ್ಕೆ ಯುಜುವೇಂದ್ರ ಚಹಲ್​ರನ್ನ ಕೈ ಬಿಟ್ಟಿದ್ದರಿಂದ ನೆಟ್ಟಿಗರು ಟೀಮ್​ ಮ್ಯಾನೇಜ್​ಮೆಂಟ್​ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲ ಹಣಾಹಣಿಗೆ ಇಬ್ಬರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿದ್ದ ಕ್ಯಾಪ್ಟನ್‌ ರೋಹಿತ್‌ ಶರ್ಮಾ, ಚಹಲ್‌ ಬದಲಿಗೆ ಅಕ್ಷರ್‌ ಪಟೇಲ್​ರನ್ನ ಕಣಕ್ಕಿಳಿಸಿದ್ದರು. ಹೀಗಾಗಿ ಸಿಡಿದ ನೆಟ್ಟಿಗರು, ಟಿ20 ವಿಶ್ವಕಪ್​ಗೂ ಅವಕಾಶ ನೀಡದ ಟೀಮ್​ ಮ್ಯಾನೇಜ್​ಮೆಂಟ್​, ಈಗಲೂ ಅನ್ಯಾಯ ಮಾಡ್ತಿದೆ ಎಂದು ದನಿಯೆತ್ತಿದ್ದಾರೆ.

ಕೆಲವೊಮ್ಮೆ ಟಿ20 ಕ್ರಿಕೆಟ್‌ ಯುಜ್ವೇಂದ್ರ ಚಹಲ್‌ ಅಂಥವರಿಗೆ ಬಹಳ ಕಠೋರವಾಗಿ ಬಿಡುತ್ತದೆ. ತಂಡದಲ್ಲಿ ಸಮತೋಲನ ಸಲುವಾಗಿ ಮಾತ್ರ ಅವರನ್ನ ಹೊರಗಿಡುವುದು ದುರದೃಷ್ಟವೇ ಸರಿ. ಉತ್ತಮ ಬೌಲರ್‌ಗೆ ಅವಕಾಶ ಕೊಡುವ ಕಡೆಗೆ ಗಮನ ನೀಡುವ ಅಗತ್ಯವಿದೆ ಎಂದಿದ್ದಾರೆ ಫ್ಯಾನ್ಸ್​.

ಇನ್ನು ಕೆಲವರು ಚಹಲ್‌ ತಂಡದಲ್ಲಿ ಇಲ್ಲವೇ.? ಹಾಗಾದ್ರೆ ರೋಹಿತ್‌ ಶರ್ಮಾ ಕ್ಯಾಪ್ಟನ್ಸಿ ಬಿಡುವುದು ಉತ್ತಮ. ಐಪಿಎಲ್‌ನಲ್ಲಿ ಚಹಲ್‌ ಅತ್ಯುತ್ತಮ ಲೆಗ್‌ ಸ್ಪಿನ್ನರ್‌ ಆಗಿದ್ದರು. ಆದರೂ ಚಾನ್ಸ್​ ನೀಡದಿರೋದು ದುರದೃಷ್ಟವೇ ಸರಿ. ಆರ್‌.ಅಶ್ವಿನ್‌ ವಿರುದ್ಧ ವಿರಾಟ್‌ ಕೊಹ್ಲಿ ತೋರಿದ್ದ ಧೋರಣೆಯನ್ನೇ ಈಗ ಚಹಲ್‌ ವಿರುದ್ಧ ರೋಹಿತ್‌ ಶರ್ಮಾ ತೋರಿಸುತ್ತಿದ್ದಾರೆ ಎಂಬೆಲ್ಲಾ ಟ್ವೀಟ್​​​ಗಳನ್ನ ಅಭಿಮಾನಿಗಳು ಮಾಡುತ್ತಿದ್ದಾರೆ.

ಇತ್ತ ಚಹಲ್​ರನ್ನು ಕೈಬಿಟ್ಟ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ನ್ಯೂಜಿಲೆಂಡ್ ಮಾಜಿ ಆಟಗಾರ ಡೆನಿಯಲ್ ವಿಟೋರಿ, ಐಪಿಎಲ್​ ಪ್ರದರ್ಶನದ ಆಧಾರವಾಗಿ ವೆಂಕಟೇಶ್​ ಅಯ್ಯರ್​​ಗೆ ಅವಕಾಶ ನೀಡಿದ್ದೀರಿ.. ಆದರೆ ಇದು ಚಹಲ್​ ವಿಚಾರದಲ್ಲಿ ಯಾಕೆ ಅನ್ವಯ ಆಗುತ್ತಿಲ್ಲ. ಅಶ್ವಿನ್​ ಯಾವ ರೀತಿ ಬೌಲಿಂಗ್ ಮಾಡ್ತಾರೆ ನಮ್ಗೆ ಗೊತ್ತು ಆದ್ರೆ 2022ರ ವಿಶ್ವಕಪ್​​ನಲ್ಲಿ ಅಶ್ವಿನ್​​ರನ್ನು ಆಡಿಸುತ್ತಿರಾ..? 2021ರ ಐಪಿಎಲ್​​ನಲ್ಲಿ ಕೊಹ್ಲಿ ಚಹಲ್​​ರನ್ನು ವಿಕೆಟ್​ ಟೇಕಿಂಗ್​ ಬೌಲರ್​ ಆಗಿ ನೋಡಿದ್ದೀರಿ. ಟಿ20 ಕ್ರಿಕೆಟ್​ನಲ್ಲಿ ಚಹಲ್​ ಅತ್ಯುತ್ತಮ ಲೆಗ್​ ಸ್ಪಿನ್ನರ್​, ಚೆಂಡನ್ನು ಉತ್ತಮವಾಗಿ ಟರ್ನ್​ ಮಾಡಬಲ್ಲ ಆಟಗಾರ. ಅಲ್ಲದೇ ವಿಕೆಟ್​ ಟು ವಿಕೆಟ್​ ಬೌಲ್​ ಮಾಡಬಲ್ಲ.. ಆದ್ದರಿಂದ ಟೀಂ ಇಂಡಿಯಾದಲ್ಲಿ ಆತ ಇರಲು ಅರ್ಹ ಎಂದು ಹೇಳಿದ್ದಾರೆ.

News First Live Kannada


Leave a Reply

Your email address will not be published. Required fields are marked *