ಚಾಟ್ಸ್​ ತಿನ್ನುವುದರಿಂದ ಆರೋಗ್ಯಕ್ಕೆ ಅಪಾಯವೇ?: ತಜ್ಞರು ಹೇಳೋದೆ ಬೇರೆ | Nutritionist Says Chats are Not Bad For Health


Chats:ಆಹಾ! ಸಿಹಿ, ಹುಳಿ, ಉಪ್ಪು, ಖಾರ ಮಿಶ್ರಿತ ರುಚಿಯಾದ ಚಾಟ್ಸ್ ತಿನ್ನುವಾಗ ಸಿಗುವ ಖುಷಿಯೇ ಬೇರೆ. ಫ್ರೆಂಡ್ಸ್​ ಜತೆ ಸುತ್ತುವಾಗ, ಮಳೆಯ ಚಳಿಯನ್ನು ಹೋಗಲಾಡಿಸಲು, ಟೈಂಪಾಸ್​ಗಾಗಿ ಚಾಟ್ಸ್​ (Chats)ತಿನ್ನುತ್ತೇವೆ.

ಆಹಾ! ಸಿಹಿ, ಹುಳಿ, ಉಪ್ಪು, ಖಾರ ಮಿಶ್ರಿತ ರುಚಿಯಾದ ಚಾಟ್ಸ್ ತಿನ್ನುವಾಗ ಸಿಗುವ ಖುಷಿಯೇ ಬೇರೆ. ಫ್ರೆಂಡ್ಸ್​ ಜತೆ ಸುತ್ತುವಾಗ, ಮಳೆಯ ಚಳಿಯನ್ನು ಹೋಗಲಾಡಿಸಲು, ಟೈಂಪಾಸ್​ಗಾಗಿ ಚಾಟ್ಸ್​ (Chats)ತಿನ್ನುತ್ತೇವೆ. ಚಾಟ್ಸ್​ ತಿನ್ನಬೇಕೆಂದರೆ ಇಂಥದ್ದೇ ಜಾಗ ಎಂದು ಹುಡುಕಬೇಕಿಲ್ಲ, ತಳ್ಳುವ ಗಾಡಿಯಾದರೂ ತೊಂದರೆಯಿಲ್ಲ ಬಿಡಬೇಕಷ್ಟೇ. ಆದರೆ ಇತ್ತೀಚಿನ ದಿನಗಳಲ್ಲಿ ಚಟುವಟಿಕೆಗಳು ಕಡಿಮೆಯಾಗಿವೆ. ಆಲಸ್ಯ ಹೆಚ್ಚಾಗಿದೆ.

ದೇಹ ಹೇಳಿದ ಮಾತು ಕೇಳುತ್ತಿಲ್ಲ. ಆದರೆ ನ್ಯೂಟ್ರಿಷನಿಸ್ಟ್​ಗಳು ಹೇಳುವುದೇ ಬೇರೆ, ಚಾಟ್ಸ್​ ತಿನ್ನಿ ತೂಕ ಖಂಡಿತವಾಗಿಯೂ ಹೆಚ್ಚಾಗುವುದಿಲ್ಲ. ಇದನ್ನು ತಿನ್ನುವಾಗ ಎಲ್ಲೋ ಒಂದು ಕಡೆ ಆರೋಗ್ಯ ಹಾಳಾಗುತ್ತದೆ ಎಂಬ ಆತಂಕವೂ ಕಾಡುತ್ತದೆ. ಆದರೆ ಅತ್ಯಂತ ಶುಚಿಯಾಗಿ ತಯಾರಿಸಿದ ಚಾಟ್ಸ್ ಸೇವನೆಗೆ ಆದ್ಯತೆ ನೀಡುವುದು ಒಳಿತು.

ಚಾಟ್‌ಗಳೆಂದರೆ ಕೇವಲ ಭೇಲ್‌ಪುರಿ, ಸೇವ್‌ಪುರಿ, ಮಸಾಲಪೂರಿ, ಪಾನಿಪೂರಿ, ಮಾತ್ರ ಎನ್ನುವ ಕಾಲವೂ ಈಗಿಲ್ಲ. ಈ ಚಾಟ್ಸ್‌ನಲ್ಲಿಯೂ ಹೊಸ ಹೊಸ ಪ್ರಯೋಗಗಳಾಗುತ್ತಿವೆ. ಈ ಪರಿಣಾಮವಾಗಿ ಈಗ ಕೋಕಂ, ಲಿಚಿ, ಬ್ಲಾಕ್ ಕರೆಂಟ್, ಶುಂಠಿ ರುಚಿಯ ಪಾನಿಪೂರಿಗಳು, ಚಾಕೊಲೇಟ್ ಪಾನಿಪೂರಿ, ಡಿಸ್ಕೊ ಭೇಲ್, ಟಕಾಟಕ್ ಭೇಲ್, ರಸ್‌ಗುಲ್ಲಾ ಚಾಟ್ಸ್, ಚೈನೀಸ್ ಗೊಲ್‌ಗಪ್ಪಾ, ಟೋಕ್ರಿ ಚಾಟ್ ಮುಂತಾದ ಚಾಟ್‌ಗಳನ್ನು ಸವಿಯಬಹುದು.

ಈ ಚಾಟ್ಸ್​ಗಳನ್ನು ತಿನ್ನಿ ಆರೋಗ್ಯವಾಗಿರಿ
ದಹಿ ಭಲ್ಲಾ, ಪಾಪ್ರಿ ಚಾಟ್, ಮೂಂಗ್ ಚೀಲಾ, ಮಟರ್ ಕುಲ್ಚಾ, ಗೋಲ್​ಗಪ್ಪಾ, ಪಾನಿಪೂರಿ ಮುಂತಾದವುಗಳನ್ನು ತಿಂದರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ತೂಕ ಇಳಿಕೆಗೆ ಸಹಾಯ ಮಾಡುವ ಚಾಟ್ಸ್​ಗಳು
 ರಾಜ್ಮಾ ಚಾಟ್: ತಯಾರಿಸಬೇಕಾದರೆ, ಮೊದಲು ರಾಜ್ಮಾವನ್ನು ನೆನೆಸಿ, ಬೇಯಿಸಿಟ್ಟುಕೊಳ್ಳಬೇಕು. ಅದಕ್ಕೆ ನಿಮಗಿಷ್ಟವಾದ ತರಕಾರಿಯನ್ನು ಕತ್ತರಿಸಿ ಹಾಕಿ, ಜೊತೆಗೆ ಒಂದಿಷ್ಟು ಮಸಾಲೆ ಕೂಡ ಸೇರಿಸಿ. ಅದರ ಮೇಲೆ ನಿಂಬೆ ರಸ ಹಿಂಡಿ, ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ನಿಮ್ಮ ರಾಜ್ಮಾ ಚಾಟ್ಸ್ ಸಿದ್ಧವಾಗುತ್ತದೆ.

ಫಲ್‍ದಾರಿ ಚಾಟ್: ಇದು ಹಣ್ಣುಗಳ ಚಾಟ್ಸ್ ಇದರಲ್ಲಿ ಕತ್ತರಿಸಿದ ಕಿವಿ, ಅನಾನಾಸ್, ಸೇಬು ಹಣ್ಣುಗಳ ಜೊತೆ ಅಣಬೆ ಅಂದರೆ ಮ ಶ್ರೂಮ್​ ಅನ್ನು ಸೇರಿಸುವುದು. ಅವುಗಳಿಗೆ ಕೊಂಚ ಮಸಾಲೆ ಸೇರಿಸಿ, ಗ್ರಿಲ್ ಮಾಡಿದರಾಯಿತು. ಈ ಚಾಟ್‍ನಲ್ಲಿ ಸಾಕಷ್ಟು ವಿಟಮಿನ್ ಮತ್ತು ಮಿನರಲ್ಸ್‌ಗಳಿರುತ್ತವೆ. ಇದನ್ನು ತಿಂದರೆ ಬೇಗ ಹಸಿವಾಗುವುದಿಲ್ಲ.

ಮೊಳಕೆ ಕಾಳು ಮತ್ತು ಮೆಕ್ಕೆ ಜೋಳದ ಚಾಟ್: ಮೆಕ್ಕೆ ಜೋಳ, ಮೊಳಕೆಕಾಳುಗಳು, ಟೊಮ್ಯಾಟೋ, ಈರುಳ್ಳಿ ಮತ್ತು ಒಂದಷ್ಟು ಮಸಾಲೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ದಿನದ ಮಧ್ಯೆ ಹಸಿವಾದರೆ ತಿನ್ನಲು, ಈ ಚಾಟ್ ಒಂದೊಳ್ಳೆಯ ಆರೋಗ್ಯಕರ ತಿನಿಸಾಗಿದೆ.ಆರೋಗ್ಯವೂ ಉತ್ತಮವಾಗಿರುತ್ತದೆ.

ಇದು ಟಿವಿ9 ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *