ಮೈಸೂರು: ರಾಜ್ಯದ ಪ್ರತಿಷ್ಠಿತ ಟಿವಿ ಚಾನಲ್ ಗಳ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಲ್ಲಿ ವೆಬ್ ಚಾನಲ್ ವರದಿಗಾರ ಪ್ರಶಾಂತ ಸೇರಿ ಇಬ್ಬರ ವಿರುದ್ಧ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಚ್.ಡಿ.ಕೋಟೆ ಪಟ್ಟಣದ ಆಸ್ಪತ್ರೆ ಬಡಾವಣೆಯ ನಿವಾಸಿ ಪ್ರಶಾಂತ್, ಟಿವಿ ಚಾನಲ್ ಹೆಸರಿನಲ್ಲಿ ಬ್ಲಾಕ್ ಮೇಲ್ ಗೆ ಮುಂದಾಗಿದ್ದ. ಪಟ್ಟಣದ ಪಾರ್ವತಿ ಹೆಲ್ತ್ ಕೇರ್ ಕ್ಲಿನಿಕ್ ಮಾಲೀಕರ ಪತಿಯಿಂದ 40 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ನೀಡದೇ ಇದ್ದರೆ ಪ್ರತಿಷ್ಠಿತ ಟಿವಿ ಚಾನಲ್ ಗಳಲ್ಲಿ ಸುದ್ದಿ ಪ್ರಚಾರ ಮಾಡುವ ಬೆದರಿಕೆಯಾಕಿದ್ದ. ಹಣ ನೀಡಿದರೆ ಸುದ್ದಿ ಬಿತ್ತರಿಸದೇ ತಡೆ ಹಿಡಿಯಲು ಚಾನಲ್ ಅವರೊಂದಿಗೆ ಮಾತುಕತೆ ಮಾಡುವುದಾಗಿ ನಂಬಿಸಿದ್ದ.

ಪ್ರಶಾಂತ್ ಮಾತುಕತೆ ಆಡಿಯೋ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ. ಸರಗೂರು ಸರ್ಕಾರಿ ಆಸ್ಪತ್ರೆ ಶುಶ್ರೂಷಕನಾಗಿ ಪುಟ್ಟರಾಜು ಸೇವೆ ಸಲ್ಲಿಸುತ್ತಿದ್ದು, ಅವರ ಪತ್ನಿ ಪಾರ್ವತಿ ಎಚ್.ಡಿ.ಕೋಟೆ ಪಟ್ಟಣದಲ್ಲಿ ಪಾರ್ವತಿ ಹೆಲ್ತ್ ಕೇರ್ ಕ್ಲಿನಿಕ್ ನಡೆಸುತ್ತಿದ್ದಾರೆ. ಸರ್ಕಾರಿ ನೌಕರಿಯಲ್ಲಿದ್ದು ಕ್ಲಿನಿಕ್ ನಡೆಸುವ ಸುದ್ದಿ ಬಿತ್ತರಿಸುವ ಬೆದರಿಕೆ ಹಾಕಿ ಹಣಕ್ಕೆ ಒತ್ತಾಯ ಮಾಡಿದ್ದ.

ಈ ಸಂಬಂಧ ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಚಾನೆಲ್ ಹೆಸರಿನಲ್ಲಿ ಹಣ ವಸೂಲಿಗೆ ಇಳಿದಿದ್ದವನ ವಿರುದ್ಧ ದೂರು ದಾಖಲು appeared first on Public TV.

Source: publictv.in

Source link