ಚಾಮರಾಜನಗರಕ್ಕೆ ಆಕ್ಸಿಜನ್​​ ಪೂರೈಕೆಗೆ ರೋಹಿಣೀ ಸಿಂಧೂರಿ ಅಡ್ಡಿ? ಸ್ಫೋಟಕ ಮಾಹಿತಿ ಬಹಿರಂಗ

ಚಾಮರಾಜನಗರಕ್ಕೆ ಆಕ್ಸಿಜನ್​​ ಪೂರೈಕೆಗೆ ರೋಹಿಣೀ ಸಿಂಧೂರಿ ಅಡ್ಡಿ? ಸ್ಫೋಟಕ ಮಾಹಿತಿ ಬಹಿರಂಗ

ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ಸಾವನ್ನಪ್ಪಲು ಮೈಸೂರಿನಿಂದ ಆಕ್ಸಿಜನ್​ ಪೂರೈಕೆಯಾಗದಿರುವುದು ಪ್ರಮುಖ ಕಾರಣ. ಆಕ್ಸಿನ್​ ಪೂರೈಕೆ ಮಾಡಲು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಡ್ಡಿಪಡಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಾಟ್ಸಾಪ್​ ಗ್ರೂಪ್​ ಚಾಟ್​ ಫೋಟೋಗಳು ಬೆಳಕಿಗೆ ಬಂದಿದೆ.

ಚಾಮರಾಜನಗರ ಆಸ್ಪತ್ರೆ ಆಕ್ಸಿಜನ್ ಪೂರೈಕೆ ಕುರಿತಂತೆ ಮಾಡಿಕೊಂಡಿದ್ದ ವೈದ್ಯಾಧಿಕಾರಿಗಳ ವಾಟ್ಸಾಪ್​ ಗ್ರೂಪ್​​ನಲ್ಲಿ ದುರಂತ ನಡೆಯುವ ಎರಡು ದಿನಗಳ ಮುನ್ನವೇ ಚರ್ಚೆ ನಡೆದಿದೆ. ಏ.28 ರಂದು ನಡೆದಿದ್ದ ಸಭೆಯಲ್ಲಿ ಚಾಮರಾಜನಗರಕ್ಕೆ ಆಕ್ಸಿಜನ್ ಪೂರೈಕೆ ಮಾಡಲು ಮೈಸೂರು ಜಿಲ್ಲಾಧಿಕಾರಿಗಳು ಅಬ್ಜೆಕ್ಷನ್ ಹಾಕಿರುವ ಬಗ್ಗೆ ವೈದ್ಯಾಧಿಕಾರಿ ಸಂಜೀವ್ ಅವರು ಜಿಲ್ಲಾಧಿಕಾರಿಗಳಿಗೆ ಹೇಳಿದ್ದರು.

ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆ ಉಂಟಾಗುವ ಸಂಭವ ಇದೆ. ಕೂಡಲೇ ಮೈಸೂರಿಗೆ ವಾಹನಗಳನ್ನು ಕಳುಹಿಸಿ ಆಕ್ಸಿಜನ್​ ಪಡೆಯಿರಿ ಎಂದು ಜಿಲ್ಲಾಧಿಕಾರಿಗಳು ಕಳುಹಿಸಿದ್ದ ಸಂದೇಶದಕ್ಕೆ ಮೆಡಿಕಲ್​ ಕಾಲೇಜು ಡೀನ್ ಸಂಜೀವ್​ ಪ್ರತಿಕ್ರಿಯೆ ನೀಡಿದ್ದರು. ಮೈಸೂರು ಜಿಲ್ಲಾಧಿಕಾರಿಗಳು ಆಕ್ಷೇಪ ವ್ಯಕ್ತವಾಗುತ್ತಿದೆ ಎಂದು ತಿಳಿದ ಚಾಮರಾಜನಗರ ಡಿಸಿ, ಆಕ್ಸಿಜನ್ ಪೂರೈಕೆ ಮಾಡಲು ಅಗತ್ಯ ಕ್ರಮಕೈಗೊಳ್ಳುತ್ತೇನೆ ಎಂದಿದ್ದರು. ಆಸ್ಪತ್ರೆಯ ಡೀನ್​ ಹಾಗೂ ಜಿಲ್ಲಾಶಸ್ತ್ರಚಿಕಿತ್ಸಕರು ಹಾಗೂ ಜಿಲ್ಲಾಧಿಕಾರಿಗಳ ನಡುವೆ ನಡೆದಿರುವ ವಾಟ್ಸಪ್‌ ಚಾಟ್‌ ಇದಾಗಿದೆ ಎನ್ನಲಾಗಿದೆ.

ವಾಟ್ಸಾಪ್ ಚಾಟ್​​ನಲ್ಲಿ ಆಕ್ಸಿಜನ್​ ಕೊರತೆ ಆಗುತ್ತದೆ ಎಂದು ಹೇಳಿದ ಎರಡು ದಿನಗಳ ಬಳಿಕ ದುರಂತ ನಡೆದಿದೆ. ಎರಡು ದಿನ ಸಮಯ ಸಿಕ್ಕರೂ ಜಿಲ್ಲಾಧಿಕಾರಿಗಳು ಆಕ್ಸಿಜನ್​ ತರಿಸಿಕೊಳ್ಳಲು ಯಾಕೆ ಪ್ರಯತ್ನ ನಡೆಸಲಿಲ್ಲ ಎಂಬ ಪ್ರಶ್ನೆ ಉದ್ಭವವಾಗಿದೆ. ಇತ್ತ ಸ್ಕ್ರೀನ್ ಶಾಟ್ಸ್ ಬಿಡುಗಡೆ ಮೂಲಕ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರತ್ತ ಬೆಟ್ಟು ತೋರಿಸಿ ತಮ್ಮ ಮೇಲಿನ ಆರೋಪದಿಂದ ಪಾರಾಗಲು ಚಾಮರಾಜನಗರ ಆರೋಗ್ಯಾಧಿಕಾರಿಗಳು ಪ್ರಯತ್ನಿಸುತ್ತಿದ್ದರ ಎಂಬ ಅನುಮಾನವೂ ಮೂಡಿದೆ.

The post ಚಾಮರಾಜನಗರಕ್ಕೆ ಆಕ್ಸಿಜನ್​​ ಪೂರೈಕೆಗೆ ರೋಹಿಣೀ ಸಿಂಧೂರಿ ಅಡ್ಡಿ? ಸ್ಫೋಟಕ ಮಾಹಿತಿ ಬಹಿರಂಗ appeared first on News First Kannada.

Source: newsfirstlive.com

Source link