ಸೀಗೆ ಮಾರಮ್ಮ ಒಕ್ಕಲಿನ 120 ಕುಟುಂಬಸ್ಥರಿಗಷ್ಟೇ ಊಟದ ವ್ಯವಸ್ಥೆ ಮಾಡಲಾಗಿದೆ. ಕುರಿ ಕುಯ್ದು ಗ್ರಾಮಸ್ಥರು ಊಟ ಮಾಡಿದ್ದಾರೆ. ಈ ವೇಳೆ ಇತರ ಸಮುದಾಯದ ಜನರು ತಿಥಿ ಕಾರ್ಯ ನೋಡುವಂತಿಲ್ಲ.
ಚಾಮರಾಜನಗರ: ಸತ್ತವರಿಗೆ ತಿಥಿ ಕಾರ್ಯ ಮಾಡೋದು ಸಾಮಾನ್ಯ. ಆದರೆ ಜಿಲ್ಲೆಯಲ್ಲಿ ಜೀವಂತ ವ್ಯಕ್ತಿಗೂ ತಿಥಿ ಮಾಡುತ್ತಾರೆ. ಬಲಿ ಹಬ್ಬದಲ್ಲಿ ಸತ್ತು ಬದುಕಿದ ವ್ಯಕ್ತಿಗೆ ತಿಥಿ ಮಾಡುತ್ತಾರೆ. ಜಿಲ್ಲೆಯ ಕೊಳ್ಳೇಗಾಲ (kollegal) ತಾಲೂಕಿನ ಪಾಳ್ಯ ಗ್ರಾಮದಲ್ಲಿ ತಿಥಿ ಮಾಡಲೂ ಗ್ರಾಮಸ್ಥರು (Villagers) 101 ಎಡೆಯಿಟ್ಟದ್ದಾರೆ. ಸೀಗೆ ಮಾರಮ್ಮ ಒಕ್ಕಲಿನ 120 ಕುಟುಂಬಸ್ಥರಿಗಷ್ಟೇ ಊಟದ ವ್ಯವಸ್ಥೆ ಮಾಡಲಾಗಿದೆ. ಕುರಿ ಕುಯ್ದು ಗ್ರಾಮಸ್ಥರು ಊಟ ಮಾಡಿದ್ದಾರೆ. ಈ ವೇಳೆ ಇತರ ಸಮುದಾಯದ ಜನರು ತಿಥಿ ಕಾರ್ಯ ನೋಡುವಂತಿಲ್ಲ. ಸೀಗೆ ಮಾರಮ್ಮ ಮನೆತನದವರಷ್ಟೇ ತಿಥಿ ನಡೆಸಬೇಕೆಂಬ ನಂಬಿಕೆಯಿದೆ. ಕುರಿ ಸೀಗೆ ನಾಯಕ 11 ದಿನದ ಹಿಂದೆ ದೇವರಿಗೆ ಬಲಿಯಾಗಿ ಬದುಕಿ ಬಂದಿದ್ದಾರೆ. ಈ ಮೂಲಕ 21 ದಿನ ನಡೆದ ಹಬ್ಬ ಮುಕ್ತಾಯವಾಗಿದೆ.