ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಸರಣಿ ಮುಂದುವರಿದಿದ್ದು, ಕಳೆದ 24 ಗಂಟೆ ಅವಧಿಯಲ್ಲಿ 21 ಮಂದಿ ಸಾವನ್ನಪ್ಪಿದ್ದಾರೆ.

ನಿನ್ನೆ ಸಂಜೆ 6 ಗಂಟೆಯಿಂದ ಇಂದು ಸಂಜೆ 6 ಗಂಟೆಯವರೆಗೆ 21 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ 17 ಮಂದಿ ಕೋವಿಡ್ ಸೋಂಕಿತರು ಹಾಗೂ 4 ಮಂದಿ ಕೋವಿಡ್ ರೀತಿಯ ಕಾಯಿಲೆ (ಸಿಎಸ್) ಯಿಂದ ಸಾವನ್ನಪ್ಪಿದ್ದಾರೆ. ಇದರ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಸೋಂಕಿತರು ಕೊನೆ ಗಳಿಗೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಉಸಿರಾಟ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

The post ಚಾಮರಾಜನಗರದಲ್ಲಿ ನಿಲ್ಲದ ಕೊರೊನಾ ಸೋಂಕಿತರ ಸಾವಿನ ಸರಣಿ- ಇಂದು 21 ಸಾವು appeared first on News First Kannada.

Source: newsfirstlive.com

Source link