ಚಾಮರಾಜನಗರದಲ್ಲಿ ವಿಡಿಯೋ ಮಾಡಲು ಹೋದವರನ್ನು ಅಟ್ಟಾಡಿಸಿದ ಕಾಡಾನೆ! ದೃಶ್ಯ ನೋಡಿ | Elephant has chased those who went to capture the scene at Chamarajanagar

ರಾಜ್ಯದ ಹಲವು ಕಡೆ ಕಾಡಾನೆಗಳ ಹಾವಳಿ ಜೋರಾಗಿದೆ. ಚಾಮರಾಜನಗರದಲ್ಲಿ ಒಂಟಿ ಸಲಗ ವಾಹನ ಸವಾರರು ಪರದಾಡುವಂತೆ ಮಾಡಿದೆ. ಇನ್ನೊಂದು ಕಡೆ ಮರಿ ಆನೆ ಜೊತೆ ಕಾಡಾನೆಗಳು ಹೆಜ್ಜೆ ಹಾಕಿವೆ. ಚಾಮರಾಜನಗರ ಗಡಿ ಭಾಗದ ತಮಿಳುನಾಡಿನ ಹಾಸನೂರು ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಕಾಡಾನೆಗಳು ಓಡಾಡುತ್ತಿವೆ. ಹಾಸನೂರಿನಲ್ಲಿ ಒಂಟಿ ಸಲಗ ಗೂಡ್ಸ್ ವಾಹನವನ್ನು ಎಳೆದು ಬೀಳಿಸಲು ಮುಂದಾಗಿದೆ. ಮತ್ತೊಂದೆಡೆ ಮರಿಯಾನೆ ಜೊತೆ ಕಾಡಾನೆಗಳು ಓಡಾಟ ನಡೆಸುತ್ತಿವೆ. ಹೀಗಾಗಿ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.ಸವಾರರು ಹಾರ್ನ್ ಮಾಡಿ ಕಾಡಾನೆಯನ್ನು ಓಡಿಸಿದ್ದಾರೆ. ವಿಡಿಯೋ ಮಾಡಲು ಹೋದವರನ್ನು ಕಾಡಾನೆ ಅಟ್ಟಾಡಿಸಿದೆ. ವಾಹನ ಚಾಲಕರ ಮೊಬೈಲ್​ನಲ್ಲಿ ಅಪರೂಪದ ದೃಶ್ಯ ಸೆರೆಯಾಗಿದೆ.

TV9 Kannada

Leave a comment

Your email address will not be published. Required fields are marked *