ಚಾಮರಾಜನಗರದ ಒಂದು ಗ್ರಾಮವನ್ನು ದ್ವೀಪವಾಗಿ ಮಾರ್ಪಡಿಸಿದ ಧಾರಾಕಾರ ಮಳೆ, ಮನೆಗಳಲ್ಲೂ ನೀರು!


Bedarapura Village

ಪ್ರತಿದಿನ ನಾವು ಮಳೆ ಬಗ್ಗೆಯೇ ಹೆಚ್ಚು ಚರ್ಚೆ ಮಾಡುತ್ತಿದ್ದೇವೆ. ಅದನ್ನು ಮಾಡದೆ ವಿಧಿಯಿಲ್ಲ ಬಿಡಿ ಮಾರಾಯ್ರೇ. ರಾಜ್ಯದ ಎಲ್ಲಾ ಭಾಗಗಳಲ್ಲಿ ಮಳೆ ಬಿಟ್ಟೂ ಬಿಡದೆ ಸುರಿಯುತ್ತಿದೆ. ಪ್ರತಿದಿನ ಮಳೆಯಾಗುವ ಮುನ್ಸೂಚನೆ ನೀಡಿ ಹವಾಮಾನ ಇಲಾಖೆಯವರಿಗೂ (ಐ ಎಮ್ ಡಿ) ರೋಸಿ ಹೋಗಿರಬಹುದು. ಮಳೆ ಹೀಗೆಯೇ ಮುಂದುವರಿದರೆ, ಐ ಎಮ್ ಡಿ ಯವರ ಒಂದೇ ವಾಕ್ಯದಲ್ಲಿ ವೆದರ್ ಫೋರ್ ಕಾಸ್ಟ್ ಹೇಳಿ ಮುಗಿಸಬಹುದು-ಎಂದಿನಂತೆ ಇವತ್ತೂ ಮಳೆ ಸುರಿಯಲಿದೆ! ಅಂದಹಾಗೆ, ಮಳೆರಾಯನ ಕಾಟಕ್ಕೆ ಈ ವರ್ಷವೂ ರೈತರು ಕಂಗಾಲಾಗಿದ್ದಾರೆ. ಬಿತ್ತುವ ಮೊದಲು ಹುಯ್ಯೋ ಹುಯ್ಯೋ ಮಳೆರಾಯ ಅನ್ನುತ್ತಿದ್ದವರು, ಯಾಕಾದರೂ ಈ ಪಾಟಿ ಸುರಿಯುತ್ತಿರುವೆಯೋ ಮಳೆರಾಯ, ಸಾಕು ಮಾಡೋ ಮಳೆರಾಯ ಅನ್ನುತ್ತಿದ್ದಾರೆ.

ಮಳೆ ಸೃಷ್ಟಿಸುತ್ತಿರುವ ಅವಾಂತರದ ಮತ್ತೊಂದು ವಿಡಿಯೋವನ್ನು ನಿಮಗೆ ತೋರಿಸುತ್ತಿದ್ದೇವೆ. ನಿಮಗಿಲ್ಲಿ ಕಾಣಿತ್ತಿರೋದು ಚಾಮರಾಜನಗರ ತಾಲ್ಲೂಕಿನ ಬೇಡರಪುರ ಗ್ರಾಮ. ಗ್ರಾಮ ಅಂತ ಹೇಳುವ ಬದಲು ಬೇಡರಪುರ ದ್ವೀಪ ಅಂತ ಹೇಳಿದರೆ ಹೆಚ್ಚು ಸೂಕ್ತವೆನಿಸಬಹುದು. ಊರೆಲ್ಲ ಅಲ್ಲ, ಊರಲ್ಲಿರುವ ಎಲ್ಲ ಮನೆಗಳಲ್ಲೂ ನೀರು. ಜನ ಮನೆ ಬಿಟ್ಟು ಕದಲದ ಹಾಗೆ ಮಳೆ ಸುರಿದಿದೆ ಅಂತಲೂ ಹೇಳಲಾಗದು. ಯಾಕೆಂದರೆ, ಮನೆಯೆಲ್ಲೆಲ್ಲ ಮಳೆ ನೀರು ಆವರಿಸಿರುವುದರಿಂದ ಜನ ಅಲ್ಲಿ ಇರುವುದು ಸಹ ಸಾಧ್ಯವಿಲ್ಲದಂತಾಗಿದೆ.

ಆಗಸದಿಂದ ಮಳೆ ಸುರಿಯುತ್ತಿರುವುದು ಸಾಲದೆಂಬಂತೆ, ಬೇಡರಪುರ ಗ್ರಾಮದಲ್ಲಿ ಭುವಿಯೊಳಗಿಂದಲೂ ನೀರು ಉಕ್ಕಿ ಹೊರಬರುತ್ತಿದೆ. ವಿಡಿಯೋನಲ್ಲಿ ನಿಮಗದು ಕಾಣಿಸುತ್ತದೆ.

ಇದನ್ನೂ ಓದಿ:   ನಿಮ್ಮ ವಿಡಿಯೋಗೆ ಯೂಟ್ಯೂಬ್ ವೇದಿಕೆಯಲ್ಲಿ ಡಿಸ್ಲೈಕ್​ಗಳು ಬರುತ್ತಿದ್ದರೆ ಚಿಂತೆ ಬೇಡ, ಇನ್ನು ಮುಂದೆ ಆ ಕೌಂಟರ್ ಕಾಣದಂತೆ ಮರೆಯಾಗುವುದು

TV9 Kannada


Leave a Reply

Your email address will not be published. Required fields are marked *