ಚಾಮರಾಜನಗರ: ಜಿಲ್ಲೆಯಲ್ಲಿ ಮತ್ತೆ ಸಾವಿನ ಸರಣಿ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ ಬೆಳ್ಳಿಗೆ 9 ರಿಂದ ಇಂದು ಬೆಳ್ಳಿಗೆ 9ರವರೆಗೆ 20  ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಈ 20 ಮಂದಿ ಪೈಕಿ 13 ರೋಗಿಗಳು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದು, 7 ಮಂದಿ ಸಿಎಲ್ಎಸ್( ಕೋವಿಡ್ ಲೈಕ್ ಸಿಂಡ್ರೋಮ್)ನಿಂದ ಸಾವನ್ನಪ್ಪಿದ್ದಾರೆ. ಕಳೆದ ವಾರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾದ ಬೆನ್ನಲ್ಲೇ  20ಕ್ಕೂ ಹೆಚ್ಚು ರೋಗಿಗಳು ಕೊನೆಯುಸಿರೆಳೆದಿದ್ದರು. ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವುದೇ ಸಾವಿಗೆ ಕಾರಣ ಅಂತ ವೈದ್ಯರು ಹೇಳ್ತಿದ್ದಾರೆ.

ಇನ್ನು ಮರಣ ಪ್ರಮಾಣ ಹೆಚ್ಚಳವಾದ ಹಿನ್ನಲೆ ಕೋವಿಡ್ ಆಸ್ಪತ್ರೆಗೆ ಎರಡು ದಿನದ ಭೇಟಿ ನೀಡಿದ್ದ ಪರಿಣಿತರ ತಂಡ ಇಂದು ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ.

The post ಚಾಮರಾಜನಗರ ಆಸ್ಪತ್ರೆಯಲ್ಲಿ ಮತ್ತೆ 24 ಗಂಟೆಯಲ್ಲಿ 20 ರೋಗಿಗಳ ಸಾವು appeared first on News First Kannada.

Source: newsfirstlive.com

Source link