ಚಾಮರಾಜನಗರ ಆಸ್ಪತ್ರೆಯಿಂದ ಮತ್ತೊಂದು ಘೋರ ಕೃತ್ಯ; ಸೋಂಕಿತನ ಶವ ಮೋರಿಯಲ್ಲಿ ಪತ್ತೆ

ಚಾಮರಾಜನಗರ ಆಸ್ಪತ್ರೆಯಿಂದ ಮತ್ತೊಂದು ಘೋರ ಕೃತ್ಯ; ಸೋಂಕಿತನ ಶವ ಮೋರಿಯಲ್ಲಿ ಪತ್ತೆ

ಚಾಮರಾಜನಗರ: ಚಾಮರಾಜನಗರ ಜಿಲ್ಲಾಸ್ಪತ್ರೆ ಮತ್ತೊಂದು ಮಹಾಯಡವಟ್ಟು ಮಾಡಿಕೊಂಡಿದೆ. ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸುರೇಶ್ ಎಂಬ ರೋಗಿಯ ಮೃತದೇಹ ಜಿಲ್ಲಾಸ್ಪತ್ರೆಯ ಮುಂಭಾಗ ರಸ್ತೆಯ ಪಕ್ಕದಲ್ಲಿ ಪತ್ತೆಯಾಗಿದೆ.

ಚಾಮರಾಜನಗರ ತಾಲೂಕಿನ ಆಲ್ದೂರು ಗ್ರಾಮದ ಸುರೇಶ್ ಎಂಬುವವರು ಕೊರೊನಾ ಸೋಂಕಿನಿಂದಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಸುರೇಶ್ ಆಸ್ಪತ್ರೆಯಿಂದ ನಿನ್ನೆ ರಾತ್ರಿ ಕಾಣೆಯಾಗಿದ್ದರು ಎನ್ನಲಾಗಿದೆ. ಆದ್ರೆ ಈ ಕುರಿತು ಜಿಲ್ಲಾಸ್ಪತ್ರೆಗೆ ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ದುರಂತ ಅಂದ್ರೆ ಅವರ ಮೃತದೇಹ ಇಂದು ಬೆಳಗ್ಗೆ ರಸ್ತೆ ಪಕ್ಕದ ಮೋರಿಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಅನಾಥ ಶವವೆದು ಪೊಲೀಸರು ಶವಾಗಾರಕ್ಕೆ ಕೊಂಡೊಯ್ದು ಇಟ್ಟಿದ್ದರಂತೆ. ಈ ವಿಚಾರ ಕುಟುಂಬಸ್ಥರಿಗೆ ತಿಳಿಯದ ಹಿನ್ನೆಲೆ ಬೆಳಗ್ಗಿನಿಂದಲೇ ಸೋಂಕಿತ ಸುರೇಶ್​ಗಾಗಿ ಹುಡುಕಾಟ ನಡೆಸಿದ್ದಾರೆ. ಶವಾಗಾರದಲ್ಲಿ ಶವ ಇಟ್ಟಿರುವ ವಿಚಾರ ಮಾಧ್ಯಮಗಳಿಂದಾಗಿ ಕುಟುಂಬಸ್ಥರಿಗೆ ಗೊತ್ತಾಗಿದೆ. ಮೃತದೇಹ ತನ್ನ ಪತಿಯದ್ದೇ ಎಂದು ಗೊತ್ತಾಗ್ತಿದ್ದಂತೆ ಮಹಿಳೆಯ ಆಕ್ರಂದನ ಮುಗಿಲುಮುಟ್ಟಿದೆ.

ಇನ್ನು ಪೊಲೀಸರು ಮೃತದೇಹ ಸಾಗಿಸುವಾಗ ತಮಗೆ ಅದು ಸೋಂಕಿತನ ಮೃತದೇಹವೆಂದು ತಿಳಿಯದೇ ಸಾಗಿಸಿದ್ದಾರೆ ಎನ್ನಲಾಗಿದೆ. ಕೊರೊನಾ ರೋಗಿಯನ್ನು ಹೊರಹೋಗಲು ಬಿಟ್ಟು ಆಸ್ಪತ್ರೆ ಸಿಬ್ಬಂದಿ ದೊಡ್ಡ ಯಡವಟ್ಟು ಮಾಡಿಕೊಂಡಿದ್ದಾರೆ.

The post ಚಾಮರಾಜನಗರ ಆಸ್ಪತ್ರೆಯಿಂದ ಮತ್ತೊಂದು ಘೋರ ಕೃತ್ಯ; ಸೋಂಕಿತನ ಶವ ಮೋರಿಯಲ್ಲಿ ಪತ್ತೆ appeared first on News First Kannada.

Source: newsfirstlive.com

Source link