ಚಾಮರಾಜನಗರ:  ಜಿಲ್ಲಾಸ್ಪತ್ರೆಯಲ್ಲಿ ಸಾವಿನ ಸರಣಿ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ 7 ರೋಗಿಗಳು ಮೃತಪಟ್ಟಿದ್ದಾರೆ.

ನಿನ್ನೆ ಬೆಳಿಗ್ಗೆ 9 ಗಂಟೆಯಿಂದ ಇಂದು ಬೆಳಿಗ್ಗೆ 9 ಗಂಟೆವರೆಗೂ ಏಳು ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಮರಣ ಪ್ರಮಾಣವನ್ನ ತಗ್ಗಿಸಲು ಕೈಗೊಳ್ಳಬೇಕಾದ ಕ್ರಮಗಳನ್ನ ತಿಳಿಸಲು ನಿನ್ನೆ ಪರಿಣಿತರ ತಂಡ ಭೇಟಿ ನೀಡಿತ್ತು. ನಾಳೆಯೊಳಗೆ ಸರ್ಕಾರಕ್ಕೆ ಇದೇ ಪರಿಣಿತರ ತಂಡ ವರದಿ ಸಲ್ಲಿಸಲಿದೆ.

The post ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಗಂಟೆಯಲ್ಲಿ 7 ರೋಗಿಗಳ ಸಾವು appeared first on News First Kannada.

Source: newsfirstlive.com

Source link