ಬೆಂಗಳೂರು: ಚಾಮರಾಜನಗರ ಜಿಲ್ಲೆಗೆ ಆಕ್ಸಿಜನ್ ನಿಗದಿ ಮಾಡಿರುವ ಸರ್ಕಾರ 4,700 ಲೀಟರ್ ಆಕ್ಸಿಜನ್ ಕೊಡಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲೆಯ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಅಲ್ಲದೇ ಆಕ್ಸಿಜನ್ ಬಳಕೆಯಲ್ಲೂ ವಿವೇಚನೆ ಇರಬೇಕು.. ಆಕ್ಸಿಜನ್ ಬಳಕೆಯ ಕುರಿತು ಆಡಿಟ್ ಮಾಡಲಾಗ್ತಿದೆ ಎಂದಿದ್ದಾರೆ.

ಮುಂದುವರೆದು.. ರಾಜಾಜಿನಗರದಲ್ಲಿ 20 ಬೆಡ್ ಗಳ ಕೋವಿಡ್ ಕೇರ್ ಕೇಂದ್ರ ಆರಂಭಿಸಿದ್ದೇವೆ. ಇವು ಆಕ್ಸಿಜನ್ ಸಹಿತ ಬೆಡ್ ಗಳು.. ಕ್ಷೇತ್ರದಲ್ಲಿ ಸೋಂಕಿತರಿಗೆ ಆಸ್ಪತ್ರೆಗೆ ಕರೆದೊಯ್ಯಲು ಮೂರು ಆ್ಯಂಬುಲೆನ್ಸ್ ಗಳಿವೆ.. ಕ್ಷೇತ್ರದ ಮನೆಗಳಿಗೆ ತುರ್ತು ಅಗತ್ಯ ಇರುವವರಿಗೆ ಆಕ್ಸಿಜನ್ ತಲುಪಿಸುತ್ತೇವೆ. ಕೋವಿಡ್ ವಾರಿಯರ್ ಗಳಿಗೆ ಕ್ಷೇತ್ರದಲ್ಲಿ ಚೈತನ್ಯ ಕೇಂದ್ರ ಆರಂಭಿಸಿದ್ದೇವೆ. ಚೈತನ್ಯ ಕೇಂದ್ರಗಳಲ್ಲಿ ವಾರಿಯರ್ ಗಳಿಗೆ ಸ್ಟೀಂ ವ್ಯವಸ್ಥೆ, ಕಷಾಯ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

The post ಚಾಮರಾಜನಗರ ಜಿಲ್ಲೆಗೆ 4,700 ಲೀಟರ್ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ- ಸುರೇಶ್ ಕುಮಾರ್ appeared first on News First Kannada.

Source: newsfirstlive.com

Source link