ಚಾಮರಾಜನಗರ: ಜಿಲ್ಲೆಯ ಎಲ್ಲಾ 130 ಗ್ರಾಮ ಪಂಚಾಯಿತಿಗಳಲ್ಲೂ ಕೊರೊನಾ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲದೇ ಜಿಲ್ಲೆಯ 509 ಹಳ್ಳಿಗಳ ಪೈಕಿ 260ಕ್ಕೂ ಹೆಚ್ಚು ಹಳ್ಳಿಯಲ್ಲಿ ಸೋಂಕು ಇರೋದು ದೃಢವಾಗಿದೆ ಎನ್ನಲಾಗಿದೆ.

ಹೌದು, ಕೆಲವೆಡೆ ಕಂಟೈನ್​ಮೆಂಟ್​ ಝೋನ್​ಗಳು ಘೋಷಣೆ ಆಗಿದ್ರೂ, ಎಲ್ಲೂ, ಯಾರೊಬ್ಬರೂ ಕಟ್ಟು ನಿಟ್ಟಿನ ಕ್ರಮವನ್ನ ಪಾಲಿಸ್ತಾಯಿಲ್ಲ. ಹೀಗಾಗಿ, ದಟ್ಟ ಅರಣ್ಯಗಳ ಮಧ್ಯೆ ಇರುವ ಗ್ರಾಮಗಳಿಗೂ ಕೊರೊನಾ ತಾಕಿದೆ. ಅಷ್ಟೇ ಅಲ್ಲದೇ, ಮಹದೇಶ್ವರ ಬೆಟ್ಟಕ್ಕೆ ಹೊರಗಿನ ಭಕ್ತರಿಗೆ ಪ್ರವೇಶ ನಿಷೇಧವನ್ನ ಹೇರಿದ್ರೂ, ಮಹದೇಶ್ವರ ಬೆಟ್ಟದಲ್ಲಿ ಸೋಂಕು ಹರಡಿದೆ. ದಟ್ಟ ಅರಣ್ಯಗಳ ಮಧ್ಯೆ ಇರುವ ಗ್ರಾಮಗಳಿಗೂ ಕೊರೊನಾ ಹಬ್ಬಿದೆ. ಕಾರಣ, ಕೆಲವೆಡೆ ಕಂಟೈನ್ಮೆಂಟ್ ಝೋನ್ ನಿಯಮಗಳು ಪಾಲನೆ ಆಗ್ತಿಲ್ಲ. ಹೀಗಾಗಿ, ಹಳ್ಳಿ ಹಳ್ಳಿಗೂ ಕೊರೊನಾ ವ್ಯಾಪಿಸಿದ್ರೂ, ಇನ್ನೂ ಜನ ಎಚ್ಚೆತ್ತುಕೊಂಡಿಲ್ಲ.

The post ಚಾಮರಾಜನಗರ ಜಿಲ್ಲೆಯ 260 ಹಳ್ಳಿಗಳಲ್ಲಿ ಕೊರೊನಾ.. ದಟ್ಟ ಅರಣ್ಯಕ್ಕೂ ತಲುಪಿದ ಸೋಂಕು appeared first on News First Kannada.

Source: newsfirstlive.com

Source link