ಚಾಮರಾಜನಗರ ದುರಂತ ಕೇಸ್​​; ಮೃತರಾದ 24 ಮಂದಿಗೆ ಪರಿಹಾರ ನೀಡುವಂತೆ ‘ಹೈ’ ಆದೇಶ

ಚಾಮರಾಜನಗರ ದುರಂತ ಕೇಸ್​​; ಮೃತರಾದ 24 ಮಂದಿಗೆ ಪರಿಹಾರ ನೀಡುವಂತೆ ‘ಹೈ’ ಆದೇಶ

ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 23 ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದ ಎಲ್ಲಾ ಮೃತ ಕುಟುಂಬಗಳಿಗೂ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಮೇ 2ನೇ ತಾರೀಕಿನಂದು ಮೊದಲು ಮೃತಪಟ್ಟ 13 ಮಂದಿಗೆ 5 ಲಕ್ಷ ರೂ. ಮತ್ತು ನಂತರ ಮರಣ ಹೊಂದಿದ 11 ಮಂದಿಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ಸೂಚಿಸಿದೆ.

ಏನಿದು ಪ್ರಕರಣ?

ಕಳೆದ ಎರಡು ತಿಂಗಳ ಹಿಂದೆ ಮೇ 2ನೇ ತಾರೀಕಿನಂದು ರಾತ್ರಿ 2.30 ರವರೆಗೂ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಿತ್ತು. ಅದರ ಪರಿಣಾಮ 24 ಜನ ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಬಳಿಕ ನ್ಯಾ. ಎ.ಎನ್ ವೇಣುಗೋಪಾಲಗೌಡ ನೇತೃತ್ವದ ಸಮಿತಿ ಹೈಕೋರ್ಟ್​ಗೆ ಸಲ್ಲಿಸಿದ ವರದಿಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರು 24 ಜನರಲ್ಲ, 36 ಜನರು ಎಂದು ಉಲ್ಲೇಖಿಸಿತ್ತು.

The post ಚಾಮರಾಜನಗರ ದುರಂತ ಕೇಸ್​​; ಮೃತರಾದ 24 ಮಂದಿಗೆ ಪರಿಹಾರ ನೀಡುವಂತೆ ‘ಹೈ’ ಆದೇಶ appeared first on News First Kannada.

Source: newsfirstlive.com

Source link