ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್​ ಪೂರೈಕೆ ಇಲ್ಲದೇ 24 ಸೋಂಕಿತರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್​ ದಾಖಲೆಗಳನ್ನು ಸೀಜ್​ ಮಾಡಲು ಆದೇಶ ನೀಡಿತ್ತು. ದಾಖಲೆ ಸೀಜ್​ಗೆ ತೆರಳಿದ್ದ ಸಂದರ್ಭದಲ್ಲಿ ಚಾಮರಾಜನಗರ ಡಿಎಚ್​​ಓ ಎಂಸಿ ರವಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಘಟನೆ ಕುರಿತಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅಲ್ಲದೇ ನ್ಯಾಯಾಮೂರ್ತಿ ಓಕಾ ಅವರು, ದಾಖಲೆಗಳನ್ನು ಸೀಜ್ ಮಾಡುವಂತೆ ಆದೇಶ ನೀಡಿದ್ದರು.

ಇದರಂತೆ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾಸ್ಪತ್ರೆ, ಡಿಎಚ್​ಓ ಕಚೇರಿ ಸೇರಿದಂತೆ ಐದು ಸ್ಥಳದಲ್ಲಿ ಡಿವೈಎಸ್​​​ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ಡಿಹೆಚ್‌ಓ ಕಛೇರಿ ದಾಖಲೆಗಳ ಸೀಜ್​​ಗೆ ತೆರಳಿದ್ದ ಸಂದರ್ಭದಲ್ಲಿ ಡಿಹೆಚ್‌ಓ ಡಾ.ಎಂ.ಸಿ.ರವಿ. ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಅವರಿಗೆ ಕೂಡಲೇ ಕಚೇರಿಯಲ್ಲೇ ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ.

The post ಚಾಮರಾಜನಗರ ದುರಂತ- ದಾಖಲೆ ಸೀಜ್​​ ಮಾಡುತ್ತಿದ್ದ ವೇಳೆ ಕುಸಿದು ಬಿದ್ದ ಡಿಎಚ್​​ಓ appeared first on News First Kannada.

Source: newsfirstlive.com

Source link