ಚಾಮರಾಜನಗರ: ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಇಬ್ಬರು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು | Two Commercial tax inspectors caught by ACB when taking bribe in Chamarajnagara


ಚಾಮರಾಜನಗರ: ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಇಬ್ಬರು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು

ಎಸಿಬಿ (ಸಾಂದರ್ಭಿಕ ಚಿತ್ರ)

ಚಾಮರಾಜನಗರ: ಜಿಲ್ಲೆಯ ವಾಣಿಜ್ಯ ತೆರಿಗೆ ಇಲಾಖೆಯ ಇಬ್ಬರು ಇನ್ಸ್ಪೆಕ್ಟರ್​ಗಳು ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ (Anti Corruption Bureau – ACB) ಬಲೆಗೆ ಬಿದ್ದಿದ್ದಾರೆ. ರವಿಕುಮಾರ್ ಮತ್ತು ಅವಿನಾಶ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ. ಚಾಮರಾಜನಗರ ತಾಲೂಕಿನ ನಾಗವಳ್ಳಿ ಆಟೋಪಾರ್ಟ್ಸ್ ಅಂಗಡಿ ಮಾಲೀಕ ತೌಸಿಫ್ ಎಂಬುವವರಿಂದ ಲಂಚ ಪಡೆಯುವ ವೇಳೆಗೆ ಅಧಿಕಾರಿಗಳು ಬಲೆಗೆ ಬಿದ್ದಿದ್ದಾರೆ. ಜಿಎಸ್​ಟಿ ಹಣ ಕಟ್ಟದೆ ತಮಗೆ ನೀಡುವಂತೆ ಅಧಿಕಾರಿಗಳು ಹೇಳಿದ್ದರು. ನಂತರ 7 ಸಾವಿರ ರೂಪಾಯಿ ಹಣ ಪಡೆದು ಕೊಂಡಿದ್ದರು. ಅದರಲ್ಲಿ ರವಿಕುಮಾರ್ 2 ಸಾವಿರ, ಅವಿನಾಶ್ 5 ಸಾವಿರ ಹಂಚಿಕೆ ಮಾಡಿಕೊಂಡಿದ್ದರು. ಇದೀಗ ಈರ್ವರೂ ಎಸಿಬಿ ಬಲೆಗೆ ಬಿದ್ದಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಸಂತ್ರಸ್ತನಿಗೆ ಪರಿಹಾರ ಒದಗಿಸಲು ಬೇಡಿಕೆ ಇಟ್ಟಿದ್ದ ಅಧಿಕಾರಿ ಎಸಿಬಿ ಬಲೆಗೆ
ಧಾರವಾಡ: ಮಳೆಯಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತರೋರ್ವರಿಗೆ ಪರಿಹಾರ ಒದಗಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿ ಇತ್ತೀಚೆಗೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ಜಿಲ್ಲೆಯ ನವಲಗುಂದ ಕಚೇರಿಯಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಪ್ರದೀಪ ಬಸವಂತಕರ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪಿ. 2020ರ ಸೆಪ್ಟೆಂಬರ್‌ನಲ್ಲಿ ಮಳೆಯಿಂದಾಗಿ ಮಾಳಿ ಕುಟುಂಬ ಮನೆ ಕಳೆದುಕೊಂಡಿತ್ತು. ಈ ವೇಳೆ ಮನೆ ಹಾನಿ ಪರಿಹಾರ ಸಂಬಂಧ ₹ 15,000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ₹ 5 ಸಾವಿರ ಮುಂಗಡ ಪಡೆದಿದ್ದ ಆರೋಪಿ, ನವಲಗುಂದ ಕಚೇರಿಯಲ್ಲಿಯೇ ₹ 10,000 ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದರು. ಪ್ರಕರಣದ ವಿಚಾರಣೆ ನಡೆಯುತ್ತಿದೆ.

 

TV9 Kannada


Leave a Reply

Your email address will not be published. Required fields are marked *