ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ; ಮತ್ತೊಂದು ಮಾಹಿತಿ ಬಹಿರಂಗ | Details about chamarajpet idgah field controversy


ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ; ಮತ್ತೊಂದು ಮಾಹಿತಿ ಬಹಿರಂಗ

ಚಾಮರಾಜಪೇಟೆ ಈದ್ಗಾ ಮೈದಾನ (ಸಂಗ್ರಹ ಚಿತ್ರ)

ಮೊದಲು ಯಾರಿಗೆ ಸೇರಿದ ಮೈದಾನ ಎಂದು ನಿರ್ಧಾರ ಆಗಲಿ ಅಂತಾ ನೇಸರ್ಗಿ ಪಟ್ಟು ಹಿಡಿದಿದ್ದರು. ಎಸಿಪಿ ಕಚೇರಿಯಲ್ಲಿ, ಆಗೀನ ಡಿಸಿಪಿ ಆಗಿದ್ದ ಅಲೋಕ್ ಕುಮಾರ್ ನೇತೃತ್ವದಲ್ಲಿ ಒಂದು ಸಂಧಾನ ಸಭೆ ನಡೆದಿತ್ತು.

ಬೆಂಗಳೂರು: ರಾಜ್ಯದಲ್ಲಿ ಒಂದಲ್ಲ ಒಂದು ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಹಿಜಾಬ್, ಹಲಾಲ್, ಆಜಾನ್, ಮಂದಿರ ವರ್ಸಸ್ ಮಸೀದಿ ಸೇರಿ ಇದೀಗ ಹೊಸ ವಿವಾದ ಭುಗಿಲೆದ್ದಿದೆ. ಅದೇ ಚಾಮರಾಜಪೇಟೆಯ (Chamarajpet) ಈದ್ಗಾ ಮೈದಾನ (idgah field) ವಿವಾದ. ಈ ವಿವಾದ ವಿಚಾರಕ್ಕೆ ಸಂಬಂಧಿಸಿ ಮತ್ತೊಂದು ಮಾಹಿತಿ ಬಹಿರಂಗವಾಗಿದೆ. ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದ ಇಂದು ನಿನ್ನೆಯದಲ್ಲ. ಕಳೆದ 14 ವರ್ಷದ ಹಿಂದೆಯೇ ಅಂದರೆ 2006ರಲ್ಲಿ ಬಗ್ಗೆ ಮಹತ್ವದ ಸಂಧಾನ ಸಭೆ ನಡೆದಿದೆ.

ಜಮೀರ್ ಅಹ್ಮದ್ ಖಾನ್ ಮೊದಲ ಬಾರಿಗೆ ಶಾಸಕರಾಗಿದ್ದಾಗ, ಚಾಮರಾಜಪೇಟೆ ಮೈದಾನದ ಟವರ್ ಪರಿಶೀಲನೆ ಮಾಡಿದ್ದಾರೆ. ಆ ಟವರ್​ನಲ್ಲಿ ಮಳೆಯಿಂದ ಕ್ರಾಕ್ಸ್ ಆಗಿರುವುದು ಪತ್ತೆಯಾಗಿತ್ತು. ಆ ಟವರ್​ನನ್ನು ಮತ್ತೆ ರಿನೋವೇಶನ್ ಮಾಡಲು ಜಮೀರ್ ಅಹ್ಮದ್ ಖಾನ್ ಚಿಂತನೆ ಮಾಡುತ್ತಾರೆ. ಇದಕ್ಕೆ ಮಾಜಿ ಶಾಸಕಿ ಪ್ರಮೀಳಾ ನೇಸರ್ಗಿ ವಿರೋಧ ವ್ಯಕ್ತಪಡಿಸಿದ್ದರು.

ಇದು ಮೊದಲು ಯಾರಿಗೆ ಸೇರಿದ ಮೈದಾನ ಎಂದು ನಿರ್ಧಾರ ಆಗಲಿ ಅಂತಾ ನೇಸರ್ಗಿ ಪಟ್ಟು ಹಿಡಿದಿದ್ದರು. ಎಸಿಪಿ ಕಚೇರಿಯಲ್ಲಿ, ಆಗೀನ ಡಿಸಿಪಿ ಆಗಿದ್ದ ಅಲೋಕ್ ಕುಮಾರ್ ನೇತೃತ್ವದಲ್ಲಿ ಒಂದು ಸಂಧಾನ ಸಭೆ ನಡೆದಿತ್ತು. ಈ ಸಭೆಯಲ್ಲಿ ಪ್ರಮೀಳಾ ನೇಸರ್ಗಿ, ಜಮೀರ್, ಆರ್.ವಿ ದೇವರಾಜ್, ಇಬ್ಬರು ಮಾಜಿ ಕಾರ್ಪೋರೇಟರ್ ಹಾಗೂ ಹಲವರು ಸದಸ್ಯರು ಭಾಗಿಯಾಗಿದ್ದರು. ಇವರೆಲ್ಲರೂ ಸೇರಿ ಒಂದು ಸಂಧಾನ ಮಾಡಿಕೊಳ್ಳುತ್ತಾರೆ. ಈದ್ಗಾ ಟವರ್​​ನಲ್ಲಿ ಕ್ರಾಕ್ ಬಿಟ್ಟಿರುವುದನ್ನು ಸರಿ ಮಾಡಿಕೊಳ್ಳಿ. ಆದರೆ ನಮಗೆ ದಸರಾ, ದೀಪಾವಳಿ, ಗಣೇಶೋತ್ಸವ ಮಾಡಲು ಅವಕಾಶ ಕೊಡಬೇಕು ಅಂತಾ ಅಗ್ರಿಮೆಂಟ್ ಆಗಿದೆ. 2006 ರಲ್ಲಿ ಆಗಿರುವ ಅಗ್ರಿಮೆಂಟ್ ಇದು. ಈ ರೀತಿ ಅಗ್ರಿಮೆಂಟ್ ಮಾಡಿಕೊಂಡ ನಂತರ ಜಮೀರ್ ಅಹ್ಮದ್ ಖಾನ್ ಉಲ್ಟಾ ಹೊಡೆದಿದ್ದಾರೆ ಅಂತಾ ವಿಶ್ವ ಸನಾತನ ಪರಿಷತ್ತು ಆರೋಪ ಮಾಡಿದೆ.

TV9 Kannada


Leave a Reply

Your email address will not be published.