ಚಾಮರಾಜಪೇಟೆ ಈದ್ಗಾ ಮೈದಾನದ ಇತಿಹಾಸದಲ್ಲೇ ನಾಳೆ (ಆಗಸ್ಟ್ 15) ರಂದು ಬೆಳಗ್ಗೆ 8ಕ್ಕೆ ಕಂದಾಯ ಇಲಾಖೆ ಉಪ ವಿಭಾಗಾಧಿಕಾರಿ ಶಿವಣ್ಣ ಧ್ವಜಾರೋಹಣ ಮಾಡಲಿದ್ದಾರೆ.

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಪೊಲೀಸ್ ಕಣ್ಗಾವಲು
ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ (Idgah maidan) ನಾಳೆ (ಆಗಸ್ಟ್ 15) ರಂದು ಬೆಳಗ್ಗೆ 8ಕ್ಕೆ ಕಂದಾಯ ಇಲಾಖೆ ಉಪ ವಿಭಾಗಾಧಿಕಾರಿ ಶಿವಣ್ಣ ಧ್ವಜಾರೋಹಣ ಮಾಡಲಿದ್ದಾರೆ. ಚಾಮರಾಜಪೇಟೆ (Chamrajapete) ಮೈದಾನದ ಸುತ್ತಮುತ್ತ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ (Azadi Ka Amrit Mahotsav) ಶುಭಾಶಯ ಕೋರಿ ಫ್ಲೆಕ್ಸ್ಗಳನ್ನು ಅಳವಡಿಸಲಾಗಿದೆ. ಫ್ಲೆಕ್ಸ್ಗಳನ್ನು ತೆರವುಗೊಳಿಸುವಂತೆ ಪೊಲೀಸರು ನಾಗರಿಕರ ಒಕ್ಕೂಟದ ಜೊತೆ ಸಂಧಾನದ ಮಾತುಕತೆಯನ್ನು ಆಡಿದ್ದಾರೆ.
ಆದರೆ ಫ್ಲೆಕ್ಸ್ ತೆರವುಗೊಳಿಸಲು ನಾಗರಿಕರ ಒಕ್ಕೂಟ ಭಾರಿ ವಿರೋಧ ವ್ಯಕ್ತಪಡಿಸಿದೆ. ಫ್ಲೆಕ್ಸ್ ತೆರವು ಮಾಡಿ ಇಲ್ಲದಿದ್ದಲ್ಲಿ ನಾವೇ ತೆರವುಗೊಳಿಸುತ್ತೇವೆ. ನಮ್ಮಿಂದಾಗಿ ಈ ಬಾರಿ ಸ್ವಾತಂತ್ರ್ಯ ಉತ್ಸವ ಆಚರಿಸಲಾಗುತ್ತಿದೆ. ಹೀಗಾಗಿ ಹೊರಭಾಗದಲ್ಲಿ ಫ್ಲೆಕ್ಸ್ ಹಾಕಿದೀವಿ ಎಂದಿದ್ದಾರೆ. ಆದರೆ ಸ್ಥಳೀಯ ನಿವಾಸಿಗಳು ತೆಗೆಯೋದಿಲ್ಲ ಎನ್ನುತ್ತಿದ್ದಾರೆ. ಸಧ್ಯ ಪೊಲೀಸ್ ರಿಗೇಡ್ ಸುತ್ತ ಅಳವಡಿಸಿದ್ದ ಬಾವುಟ ತೆರವು ಮಾಡುತ್ತಿದ್ದಾರೆ.
ಈದ್ಗಾ ಮೈದಾನಕ್ಕೆ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿದ್ದು, ನಾಳಿನ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಚರ್ಚೆ ಮಾಡಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳಿಂದ ಡಿಸಿಪಿ ಲಕ್ಷ್ಮಣ ನಿಂಬರಗಿ ಮಾಹಿತಿ ಪಡೆಯುತ್ತಿದ್ದಾರೆ. ಸಾರ್ವಜನಿಕರ ಎಂಟ್ರಿ ಪಾಯಿಂಟ್, ಗಣ್ಯರು ಕೂರುವ ಸ್ಥಳ ಮತ್ತು ಧ್ವಜಾರೋಹಣಕ್ಕೆ ಈಗಾಗಲೇ ಮಾಡಿರುವ ಯೋಜನೆ ಬಗ್ಗೆ ಚರ್ಚೆ ಮಾಡಲಾಗಿದೆ.
ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ ಹಿನ್ನೆಲೆ ಖಾಕಿ ಕಣ್ಗಾವಲು ಇದೆ. ಇಡೀ ಮೈದಾನಕ್ಕೆ ಬ್ಯಾರಿಗೇಟ್ ಅಳವಡಿಸಿ ಭದ್ರತೆ ಮಾಡಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಮೈದಾನದಲ್ಲಿ ಎಂಟ್ರಿ ಹಾಗೂ ಎಕ್ಸಿಟ್ ಗೇಟ್ ಒಂದೇ ಇದೆ. ಧ್ವಜಾರೋಹಣ ಬಳಿಕ 500 ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮೈದಾನದಲ್ಲಿ ವಂದೇ ಮಾತಂ, ಭಾರತ್ ಮಾತಾ ಕೀ ಜೈ ಘೋಷಣೆ ಗೆ ಮಾತ್ರ ಅವಕಾಶ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ