ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ: ಕಂದಾಯ ಇಲಾಖೆಗೆ ನೀಡಿದ್ದ ಡೆಡ್​ಲೈನ್ ನಾಳೆಗೆ ಅಂತ್ಯ | Ganeshotsav issue in Chamarajpet Maidan; The deadline given to the revenue department ends tomorrow


ಆ.25ರವರೆಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಡೆಡ್​​ಲೈನ್ ನೀಡಿದ್ದು, ಈ ಬಗ್ಗೆ ಕಂದಾಯ ಇಲಾಖೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ನಾಳೆ ಸಂಜೆಯವರೆಗೂ ಕಾದು ನೋಡಿ ಮತ್ತೊಮ್ಮೆ ಸಭೆ ಮಾಡಲಿದೆ.

ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ: ಕಂದಾಯ ಇಲಾಖೆಗೆ ನೀಡಿದ್ದ ಡೆಡ್​ಲೈನ್ ನಾಳೆಗೆ ಅಂತ್ಯ

ಚಾಮರಾಜಪೇಟೆ ಮೈದಾನ ಮತ್ತು ಗಣೇಶ (ಸಂಗ್ರಹ ಚಿತ್ರ)

ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ಕಂದಾಯ ಇಲಾಖೆಗೆ ನೀಡಿದ್ದ ಡೆಡ್​ಲೈನ್ ನಾಳೆಗೆ ಅಂತ್ಯವಾಗಲಿದೆ. ಆ.25ರವರೆಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಡೆಡ್​​ಲೈನ್ ನೀಡಿದ್ದು, ಈ ಬಗ್ಗೆ ಕಂದಾಯ ಇಲಾಖೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ನಾಳೆ ಸಂಜೆಯವರೆಗೂ ಕಾದು ನೋಡಿ ಮತ್ತೊಮ್ಮೆ ಸಭೆ ಮಾಡಲಿದ್ದು, ಸಭೆ ಬಳಿಕ ಗಣೇಶ ಪ್ರತಿಷ್ಠಾಪನೆ ಕುರಿತು ಒಕ್ಕೂಟ ಚರ್ಚೆ ನಡೆಸಲಿದೆ. ಆ.19ರಂದು ಬೆಂಗಳೂರು ನಗರ ಡಿಸಿ ಶ್ರೀನಿವಾಸ್​ರಿಗೆ  ಒಕ್ಕೂಟ ಮನವಿ ಸಲ್ಲಿಸಿತ್ತು. ಈಗಾಗ್ಲೇ ಕಂದಾಯ ಸಚಿವ ಆರ್.ಅಶೋಕ್, ಸಂಸದ ಪಿಸಿ ಮೋಹನ್, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಗೆ ಮನವಿ ಮಾಡಿದ್ದು, ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಗ್ರೀನ್ ಸಿಗ್ನಲ್ ನೀಡುತ್ತಾ ಕಂದಾಯ ಇಲ್ಲಾಖೆ ಎನ್ನುವ ಪ್ರಶ್ನೆ ಉಂಟಾಗಿದೆ.

TV9 Kannada


Leave a Reply

Your email address will not be published.