ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸ್ಥಳೀಯ ಶಾಸಕ ಜಮೀರ್ ಅಹ್ಮದ್ಗೂ ಅವಕಾಶವಿರುವುದಿಲ್ಲ. ಸರ್ಕಾರದಿಂದಲೇ ಧ್ವಜಾರೋಹಣ ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ; ಸ್ಥಳೀಯ ಶಾಸಕ ಜಮೀರ್ ಗೂ ಅವಕಾಶವಿಲ್ಲ -ಕಂದಾಯ ಸಚಿವ ಅಶೋಕ್ ಘೋಷಣೆ
ಬೆಂಗಳೂರು: ದೇಶದ ಸ್ವಾತಂತ್ರ್ಯ ಅಮೃತಮಹೋತ್ಸವಕ್ಕೆ (Azadi Ka Amrit Mahotsav) ರಾಜ್ಯ ಸರ್ಕಾರ ವಿವಾದವೊಂದನ್ನು ಸದ್ಯಕ್ಕೆ ಇತ್ಯರ್ಥ ಪಡಿಸಿದೆ. ಈ ಸಂಬಂಧ, ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ ನಡೆಯಲಿದೆ, ಬೇರೆ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಕಂದಾಯ ಸಚಿವ ಅಶೋಕ್ (Revenue Minister R Ashok) ಘೋಷಣೆ ಮಾಡಿದ್ದಾರೆ. ಚಾಮರಾಜಪೇಟೆ ಮೈದಾನದ ಸಂಬಂಧ ಕಂದಾಯ ಸಚಿವ ಅಶೋಕ್ ನೇತೃತ್ವದ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ (Chamraj pet Edga Maidan) ಯಾವ ಸಂಘ-ಸಂಸ್ಥೆಗಳಿಗೂ ಧ್ವಜಾರೋಹಣಕ್ಕೆ ಅವಕಾಶವಿಲ್ಲ. ಸ್ಥಳೀಯ ಶಾಸಕ ಜಮೀರ್ ಅಹ್ಮದ್ಗೂ ಅವಕಾಶವಿರುವುದಿಲ್ಲ. ಸರ್ಕಾರದಿಂದಲೇ ಧ್ವಜಾರೋಹಣ ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಅಶೋಕ್ ಸ್ಪಷ್ಟಪಡಿಸಿದ್ದಾರೆ.