ಮೈಸೂರು: ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತಗೊಂಡಿದೆ.
ನಿನ್ನೆ ಮಧ್ಯಾಹ್ನದ ಬಳಿಕ ಸುರಿದ ಭಾರೀ ಮಳೆಗೆ ಮತ್ತಷ್ಟು ಭೂ ಕುಸಿತ ಸಂಭವಿಸಿದೆ. ಸತತ ಮಳೆಯಿಂದಾಗಿ ನಂದಿ ಮಾರ್ಗದ ಬಹುತೇಕ ರಸ್ತೆ ಕುಸಿತಗೊಂಡಿದೆ. ಇತ್ತೀಚೆಗೆ ಮೂರು ಬಾರಿ ಭೂ ಕುಸಿತ ಸಂಭವಿಸಿತ್ತು. ಕಳೆದೊಂದು ತಿಂಗಳಲ್ಲಿ ಮೂರು ಬಾರಿ ಭೂ ಕುಸಿತ ಉಂಟಾಗಿತ್ತು.
ಇದೀಗ ನಾಲ್ಕನೇ ಬಾರಿ ಭೂ ಕುಸಿತ ಉಂಟಾಗಿದೆ. ರಸ್ತೆಯುದ್ದಕ್ಕೂ ಭೂ ಕುಸಿತ ಸಂಭವಿಸಿದ್ದು, ಮಳೆ ಇದೇ ರೀತಿ ಮುಂದುವರಿದರೆ ನಂದಿ ಮಾರ್ಗದ ರಸ್ತೆ ಸಂಪೂರ್ಣ ಕಣ್ಮರೆಯಾಗುವ ಆತಂಕ ವ್ಯಕ್ತವಾಗಿದೆ. ಮಳೆ ನಿಲ್ಲುವವರೆಗೂ ದುರಸ್ತಿ ಕಾಮಗಾರಿ ಮಾಡಲು ಸಾಧ್ಯವಿಲ್ಲದ್ದರಿಂದ ಭೂ ಕುಸಿತ ಸಂಭವಿಸಿದೆ.