ಚಾಮುಂಡಿ ಬೆಟ್ಟ ಉಳಿಸಿ ಅಭಿಯಾನಕ್ಕೆ ಕೈಜೋಡಿಸಲು ಸಾಮಾಜಿಕ ಜಾಲತಾಣದಲ್ಲಿ ಯದುವೀರ್ ಒಡೆಯರ್ ಕರೆ | Yadavir Wodeyar has called for joining the Chamundi Hill Save campaign in social media


ಚಾಮುಂಡಿ ಬೆಟ್ಟ ಉಳಿಸಿ ಅಭಿಯಾನಕ್ಕೆ ಕೈಜೋಡಿಸಲು ಸಾಮಾಜಿಕ ಜಾಲತಾಣದಲ್ಲಿ ಯದುವೀರ್ ಒಡೆಯರ್ ಕರೆ

ಯದುವೀರ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಚಾಮುಂಡಿ ಬೆಟ್ಟ ಉಳಿಸಿ ಅಭಿಯಾನಕ್ಕೆ ಕೈಜೋಡಿಸಲು ಕರೆ ನೀಡಿದ್ದಾರೆ

ಮೈಸೂರು: ಚಾಮುಂಡಿ ಬೆಟ್ಟ (Chamundi Hills) ಉಳಿಸಿ ಅಭಿಯಾನಕ್ಕೆ ಕೈಜೋಡಿಸಲು ಯದುವೀರ್ ಒಡೆಯರ್ (Yaduveer Wadiyar) ಕರೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯದುವೀರ್ ಒಡೆಯರ್ ಕರೆ ನೀಡಿದ್ದು, ನಿಮ್ಮ ಒಂದು ಸಹಿ ಚಾಮುಂಡಿ ಬೆಟ್ಟವನ್ನು ಉಳಿಸಬಹುದು. ಮೈಸೂರಿನ ಮುಕುಟಪ್ರಾಯದಂತಿರುವ ಚಾಮುಂಡಿ ಬೆಟ್ಟವನ್ನು ಭವಿಷ್ಯದ ಮೈಸೂರಿನ ಸುರಕ್ಷತೆಗಾಗಿಯಾದ್ರೂ ಉಳಿಸಬೇಕು. ಮಿತಿ ಮೀರಿರುವ ಅಭಿವೃದ್ಧಿ ವೇಗಕ್ಕೆ ಕಡಿವಾಣ ಹಾಕಿ, ಬೆಟ್ಟದಲ್ಲಿ ಪರಿಸರ ಸಮತೋಲನ ಕಾಪಾಡಿಕೊಳ್ಳಬೇಕು. ಈ ಸಹಿ ಆಂದೋಲನಕ್ಕೆ ನಾನು ಕೈಜೋಡಿಸಿದ್ದೇನೆ. ನೀವೂ ಕೈಜೋಡಿಸಿ ಅಂತ ಯದುವೀರ್ ಒಡೆಯರ್ ಕರೆ ನೀಡಿದ್ದಾರೆ.

ಮಿತಿ ಮೀರಿರುವ ಅಭಿವೃದ್ಧಿ ವೇಗಕ್ಕೆ ಕಡಿವಾಣ ಹಾಕಿ ಪರಿಸರ ಸಮತೋಲನವನ್ನು ಬೆಟ್ಟದಲ್ಲಿ ಕಾಪಾಡಿಕೊಳ್ಳಬೇಕು ಎನ್ನುವುದು ಕಳಕಳಿ. ಈ ನಿಟ್ಟಿನಲ್ಲಿ ಮೈಸೂರಿನ ಹಲವು ಸಂಘಟನೆಗಳು ಮೈಸೂರು ಗ್ರಾಹಕರ ಪರಿಷತ್ ಸೇರಿದಂತೆ ಹಲವರು ಇದಕ್ಕೆ ಬಲ ನೀಡಿದ್ದಾರೆ. ಈ ಸಹಿ ಆಂದೋಲನಕ್ಕೆ ನಾನು ಕೈಜೋಡಿಸಿದ್ದೇನೆ. ನೀವೂ ಕೈ ಜೋಡಿಸಿ ಬೆಟ್ಟ ಉಳಿಸಿ ಅಂತ ಸಾಮಾಜಿಕ ಜಾಲತಾಣದಲ್ಲಿ ಯದುವೀರ್ ಒಡೆಯರ್ ತಿಳಿಸಿದ್ದಾರೆ.

ನಿರಂತರ ಮಳೆಯಿಂದಾಗಿ ಚಾಮುಂಡಿ ಬೆಟ್ಟ ಕುಸಿಯುತ್ತಿದೆ. ಈ ನಡುವೆ ಸರ್ಕಾರ ಕಾಮಗಾರಿ ಮಾಡಲು ಹೊರಟಿದೆ. ಸರ್ಕಾರದ ನಡೆಗೆ ಇತಿಹಾಸ ತಜ್ಞರು ಮತ್ತು ಸಾರ್ವಜನಿಕರು ಅಸಮಧಾನ ಹೊರಹಾಕಿದ್ದಾರೆ. ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸೇವ್ ಚಾಮುಂಡಿ ಮೂಮೆಂಟ್ ಎಂಬ ಹೆಸರಿನಲ್ಲಿ ಚಾಮುಂಡಿ ಬೆಟ್ಟ ಉಳಿಸಿ ಅಭಿಯಾನ ಶುರುವಾಗಿದೆ. ಈ ಅಭಿಯಾನಕ್ಕೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೈ ಜೋಡಿಸಿದ್ದಾರೆ.

ಇದನ್ನೂ ಓದಿ

ಕರ್ನಾಟಕ ಸರ್ಕಾರದ ಶುಲ್ಕ ಆದೇಶಕ್ಕೆ ಖಾಸಗಿ ಶಾಲೆಗಳು ಗರಂ; ಕೋರ್ಟ್ ಮೆಟ್ಟಿಲೇರಲು ನಿರ್ಧಾರ

ದೀರ್ಘಾವಧಿ ಹೂಡಿಕೆ ಕುರಿತ ನಮ್ಮ ತಿಳುವಳಿಕೆ ಹೆಚ್ಚಿಸಿಕೊಳ್ಳಬೇಕು ಮತ್ತು ಭಯಮುಕ್ತರಾಗಿ ಹಣ ಹೂಡಬೇಕು: ಡಾ ಬಾಲಾಜಿ ರಾವ್

TV9 Kannada


Leave a Reply

Your email address will not be published.