ಮಹಿಳೆಯೊಬ್ಬಳು ವಿಮಾನದಲ್ಲಿ ನಡೆಸಿದ ರಂಪಾಟದಿಂದಾಗಿ 60 ಪ್ರಯಾಣಿಕರಿದ್ದ ಫ್ಲೈಟ್​​​ ಅನ್ನೇ ಬೇರೆಡೆಗೆ ಡೈವರ್ಟ್​ ಮಾಡಿದ ಪ್ರಸಂಗ ನಡೆದಿದೆ. ಹೌದು.. ಪ್ರಯಾಣಿಕಳೊಬ್ಬಳ ಅಶಿಸ್ತಿನಿಂದಾಗಿ ಟೋಕಿಯೋದಿಂದ ದಲ್ಲಾಸ್​ಗೆ ಹೊರಟಿದ್ದ ಅಮೆರಿಕನ್ ಏರ್​ಲೈನ್ಸ್​ ವಿಮಾನವನ್ನ, ಸಿಯಾಟಲ್​​ಗೆ ​​ಡೈವರ್ಟ್​ ಮಾಡಲಾಯ್ತು..ಇದೀಗ ಆ ಮಹಿಳೆ ರಂಪಾಟ ಮಾಡಿರುವ ಸಂಬಂಧ ವಿಚಾರಣೆ ಎದುರಿಸುತ್ತಿದ್ದಾಳೆ.

ಏನಿದು ರಂಪಾಟ..?
ವಿಮಾನದಲ್ಲಿ ರಂಪಾಟ ಮಾಡಿದ ಮಹಿಳೆಯ ಹೆಸರು ವಾಲ್ಕಾ ಸುಝುಕಿ. ವಯಸ್ಸು 26. ವಿಮಾನದಲ್ಲಿ ಪ್ರಯಾಣ ಮಾಡ್ತಿದ್ದ ಈಕೆ, ತನ್ನ ಮೊಬೈಲ್​ ಚಾರ್ಜ್​​ ಹಾಕಲು ಪ್ರಯತ್ನಿಸಿದ್ದಾಳೆ. ಆದರೆ ಆಕೆಯ ಚಾರ್ಜರ್​ ಹಾಳಾಗಿ ಹೋಗಿತ್ತು. ಹೀಗಾಗಿ ಈಕೆ ವಿಮಾನದಲ್ಲಿದ್ದ ಸಹಾಯಕರನ್ನ ಕರೆದು ಸರಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾಳೆ. ಆದರೆ ವಿಮಾನದಲ್ಲಿದ್ದ ಅಟೆಂಡರ್​ ಬಳಿಯೂ ಅದು ಸಾಧ್ಯವಾಗಿಲ್ಲ. ಇದಕ್ಕೆ ರೊಚ್ಚಿಗೆದ್ದ ಮಹಿಳೆ ಜೋರಾಗಿ ಕೂಗಲು ಆರಂಭಿಸಿದ್ದಾಳೆ.

ನಂತರ ಆರೋಪಿ ಸುಝುಕಿ ವಿಮಾನದ ಮುಂಭಾಗಕ್ಕೆ ಹೋಗಿದ್ದಾಳೆ. ಅಲ್ಲಿದ್ದ ಸಿಬ್ಬಂದಿಯನ್ನ ದೂಡಿ, ಅವರ ಕಾಲುಗಳನ್ನ ತುಳಿದು, ಕಾಕ್​ಪಿಟ್​​ ಬಾಗಿಲಿಗೆ ಬಲವಾಗಿ ಬಡೆದು, ಮತ್ತೆ ಚಾರ್ಜರ್​ ಸರಿಮಾಡಿಕೊಡುವಂತೆ ಕೇಳಿದ್ದಾಳೆ. ಆಗ ವಿಮಾನದಲ್ಲಿದ್ದ ಸಿಬ್ಬಂದಿ ಆಕೆಯನ್ನ ತಡೆಯಲು ಪ್ರಯತ್ನಿಸಿ ವಿಫಲರಾಗುತ್ತಾರೆ. ಅಲ್ಲದೇ ವಿಮಾನದ ಇಬ್ಬರು ಸಿಬ್ಬಂದಿ ಮೇಲೆ ಹಲ್ಲೆ ಕೂಡ ಮಾಡಿದ್ದಾಳೆ ಅನ್ನೋ ಆರೋಪ ಕೇಳಿಬಂದಿದೆ.

ಇಬ್ಬರು ಸಿಬ್ಬಂದಿ ನನ್ನ ಮೇಲೆ ಉಗುಳಿದ್ರು
ಕೂಡಲೇ ಫೆಡರಲ್ ಏವಿಯೇಷನ್ ಅಡ್ಮಿನಿಷ್ಟ್ರೇಷನ್​​ಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ಪೈಲೆಟ್​ಗೆ ವಿಮಾನವನ್ನ ಸಿಯಾಟಲ್-ಟಕೋಮಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸುವಂತೆ ಒತ್ತಾಯಿಸಲಾಯಿತು. ವಿಮಾನ ನಿಲ್ದಾಣವನ್ನ ತಲುಪುತ್ತಿದ್ದಂತೆ ಮಹಿಳೆಗೆ ಕಳಗೆ ಇಳಿಯುವಂತೆ ಒತ್ತಾಯಿಸಲಾಯಿತು. ಆದರೆ 30 ನಿಮಿಷದವರೆಗೂ ಆಕೆ ವಿಮಾನದಿಂದ ಇಳಿಯಲಿಲ್ಲ. ಅತ್ತ ವಿಮಾನ ನಿಲ್ದಾಣದಲ್ಲಿ ಆಕೆಗಾಗಿ ಪೊಲೀಸ್​ ಹಾಗೂ ಭದ್ರತಾ ಸಿಬ್ಬಂದಿ ಕಾಯುತ್ತಿದ್ದರು. ವಿಮಾನದಲ್ಲಿ 60 ಪ್ರಯಾಣಿಕರು ಹಾಗೂ 13 ಸಿಬ್ಬಂದಿ ಇದ್ದರು.

ನಂತರ ವಿಮಾನದಿಂದ ಇಳಿಯುತ್ತಿದ್ದಂತೆ ಆಕೆಯನ್ನ ತನಿಖಾಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಚಾರ್ಜರ್ ಸರಿಯಾಗಿ ಕೆಲಸ ಮಾಡದಿದ್ದಕ್ಕೆ ಕೋಪಿಸಿಕೊಂಡಿದ್ದನ್ನ ಮಹಿಳೆ ಒಪ್ಪಿಕೊಂಡಿದ್ದಾಳೆ. ಅಲ್ಲದೇ ಅಟೆಂಡರ್​​ಗಳನ್ನ ವಜಾ ಮಾಡುವಂತೆ ಒತ್ತಾಯಿಸಿದ್ದಾಳೆ. ಇಬ್ಬರು ಸಿಬ್ಬಂದಿ ನನ್ನ ಮೇಲೆ ಉಗುಳಿದ್ದಾರೆ, ಅದರಿಂದ ನಾನು ಹಲ್ಲೆ ಮಾಡಿದೆ ಎಂದು ತನಿಖಾಧಿಕಾರಿಗಳಿಗೆ ದೂರಿದ್ದಾಳೆ. ಅದ್ಯ ಈ ಬಗ್ಎಗ ವಿಚಾರಣೆ ಮುಂದುವರೆದಿದೆ.

The post ಚಾರ್ಜರ್​​​ ಹಾಳಾಯ್ತೆಂದು ರಂಪಾಟ.. ವಿಮಾನವನ್ನೇ ಡೈವರ್ಟ್​ ಮಾಡಿಸಿದ ಮಹಿಳೆ appeared first on News First Kannada.

Source: newsfirstlive.com

Source link