ಕಳೆದ ಎರಡು ವರ್ಷಗಳಿಂದ ನಟ ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ? ಅಂತ ಕೇಳಿದ್ರೆ, ಥಟ್​​ ಅಂತ ಚಾರ್ಲಿ ಜೊತೆ ಕಾಲ ಕಳೆಯುತ್ತಿದ್ದಾರೆ ಅನ್ನಬಹುದು. ಯಾಕಂದ್ರೆ ರಕ್ಷಿತ್​ ಶೆಟ್ಟಿ ಹಾಗೂ ಮುದ್ದಿನ ಶ್ವಾನ ಚಾರ್ಲಿ ಸಂಬಂಧ ಅಷ್ಟು ಗಟ್ಟಿಯಾದಂತೆ ಕಾಣುತ್ತಿದೆ. ಸಿಂಪಲ್​ ಶೆಟ್ರ ಮೋಸ್ಟ್​ ಎಕ್ಸ್​​ಪೆಕ್ಟೆಡ್​​ ಸಿನಿಮಾ 777 ಚಾರ್ಲಿಯಿಂದ ಧರ್ಮ ಪಾತ್ರಧಾರಿ ರಕ್ಷಿತ್​​ ಹಾಗೂ ಚಾರ್ಲಿ ಪರಿಚಯವಾಗಿ ಒಂದು ಅವಿನಾಭಾವ ನಂಟು ಬೆಳೆದಿದೆ. ಇದೀಗ ಜೂನ್​ 6ರಂದು ಬರಲಿರೋ ರಕ್ಷಿತ್​ ಬರ್ತ್​ಡೇ ಪ್ರೀತಿಯಿಂದ ಚಾರ್ಲಿ ಉಡುಗೊರೆಯೊಂದನ್ನ ನೀಡ್ತಿದೆ ಅಂತ ಚಿತ್ರತಂಡ ಅನೌನ್ಸ್​​ ಮಾಡಿದೆ.

ಹೌದು.. ಜೂನ್​ 6ರಂದು ರಕ್ಷಿತ್​ ಶೆಟ್ಟಿ ಹುಟ್ಟುಹಬ್ಬ. ಇದೇ ದಿನ ಅದೇನೋ ಸ್ಪೆಷಲ್​ ಗಿಫ್ಟ್​​ ನೀಡಲು ಹೊರಟಿದೆ 777 ಚಾರ್ಲಿ ಟೀಂ. ರಕ್ಷಿತ್​ಗೆ ಮಾತ್ರವಲ್ಲ, ರಕ್ಷಿತ್​ರನ್ನ ಪ್ರೀತಿಸೋ ಎಲ್ಲಾ ಅಭಿಮಾನಿಗಳಿಗೂ. ಹೌದು.. ಐದು ಭಾಷೆಗಳಲ್ಲಿ ತೆರೆ ಕಾಣಲಿರುವ 777 ಚಾರ್ಲಿ, ರಕ್ಷಿತ್​ ಬರ್ತ್​ಡೇ ದಿನ ಸ್ಪೆಷಲ್​ ಟೀಸರ್​​ ಲಾಂಚ್​ ಮಾಡುವ ಪ್ಲ್ಯಾನ್​ ಮಾಡಿಕೊಂಡಿದ್ದಾರೆ. ಅಂದ್ಹಾಗೇ, ಟೀಸರ್​ ಕೇವಲ ಕನ್ನಡದಲ್ಲಿ ಮಾತ್ರವಲ್ಲ. ಏಕಕಾಲದಲ್ಲೇ ಐದು ಭಾಷೆಗಳಲ್ಲಿ 777 ಚಾರ್ಲಿ ‘ಲೈಫ್ ಆಫ್ ಚಾರ್ಲಿ’ ಟೀಸರ್​ ಕೂಡ ರಿಲೀಸ್​ ಆಗಲಿದೆ. ಕಳೆದ ವರ್ಷ ರಕ್ಷಿತ್​ ಬರ್ತ್​ಡೇಗೆ ‘ಲೈಫ್​ ಆಫ್​ ಧರ್ಮ’ ರಿಲೀಸ್​ ಮಾಡಿದ್ದ ಚಿತ್ರತಂಡ, ಈ ಬಾರಿ ‘ಲೈಫ್​ ಆಫ್​ ಚಾರ್ಲಿ’ಯತ್ತ ಚಿತ್ತ ನೆಟ್ಟಿದೆ. 777 ಚಾರ್ಲಿ ಸಿನಿಮಾ, ರಕ್ಷಿತ್​ ತಂಡದ ಪರ್ಮನೆಂಟ್​ ಸದಸ್ಯ ಕಿರಣ್​ ರಾಜ್​ ಅವರ ಪ್ರೀತಿಯ ಕೂಸು.

ಸದ್ಯ ಚಿತ್ರೀಕರಣ ಕಂಪ್ಲೀಟ್​ ಮಾಡಿ, ಡಬ್ಬಿಂಗ್​ ಮುಗಿಸಿ, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ಬ್ಯುಸಿಯಿರುವ ಚಾರ್ಲಿ ತಂಡ, ಇದೇ ವರ್ಷ ಸಿನಿಮಾ ರಿಲೀಸ್​ ಮಾಡುವ ಇರಾದೆಯನ್ನೇನೋ ಇಟ್ಟುಕೊಂಡಿದ್ದಾರೆ. ಆದ್ರೆ ಸದ್ಯ ನಡೆಯುತ್ತಿರುವ ಕೊರೊನಾ ಅಬ್ಬರಕ್ಕೆ ಚಿತ್ರರಂಗ ಮತ್ತೆ ಸ್ಥಗಿತವಾಗಿದೆ. ಸಿನಿಮಾಗಳ ರಿಲೀಸ್​​ ಬಗ್ಗೆ ಇನ್ನೇನಿದ್ರೂ ಚಿತ್ರಮಂದಿರಗಳು ಓಪನ್​ ಆದ ಮೇಲೆಯೇ ತೀರ್ಮಾನಿಸಲಾಗುವುದು.

ಇನ್ನು ರಕ್ಷಿತ್​ ಶೆಟ್ಟಿ ತಮ್ಮದೇ ಪ್ರೊಡಕ್ಷನ್​ನಲ್ಲಿ ಮೂಡಿ ಬರ್ತಿರುವ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಮೊದಲ ಹಂತದ ಚಿತ್ರೀಕರಣವನ್ನ ಮುಗಿಸಿದ್ದಾರೆ. ಈ ಸಿನಿಮಾಗಾಗಿ ರಕ್ಷಿತ್​ ಎರಡು ಹೊಸ ಲುಕ್​ನಲ್ಲಿ ಕಾಣಿಸಿಕೊಳ್ತಿದ್ದಾರೆ ಅನ್ನೋ ಸುದ್ದಿಯೂ ಇದೆ.

The post ಚಾರ್ಲಿಯಿಂದ ರಕ್ಷಿತ್​ ಶೆಟ್ಟಿಗೆ ಪ್ರೀತಿಯ ಗಿಫ್ಟ್​​; ಐದು ಭಾಷೆಗಳಲ್ಲಿ ಬರಲಿದೆ ‘ಲೈಫ್ ಆಫ್ ಚಾರ್ಲಿ’ appeared first on News First Kannada.

Source: newsfirstlive.com

Source link