ಬೆಂಗಳೂರು: ಚಾಲಕನಿಗೆ ಚಾಕು ತೋರಿಸಿ ಆಟೋರಿಕ್ಷಾವನ್ನ ಕದ್ದೊಯ್ಯುತ್ತಿದ್ದ ಖದೀಮರನ್ನ  ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಬ್ರೇಜ್ ಶರೀಫ್ (27), ಜಾಫರ್ ಪಾಷಾ (32) ಹಾಗೂ ತಬ್ರೇಜ್ ಪಾಷಾ (20) ಬಂಧಿತರು.

ಆರೋಪಿಗಳು ಕಲಾಸಿಪಾಳ್ಯಗೆ ಹೋಗಬೇಕು ಅಂತಾ ಹೇಳಿ ಜೆ.ಜೆ ನಗರ ಬಳಿ ಆಟೋ ಹತ್ತಿದ್ದರು. ನಂತರ ಚಾಕು ತೋರಿಸಿ ಚಾಲಕನನ್ನ ಕೆಳಗೆ ಇಳಿಸಿ ಆಟೋ ತೆಗೆದುಕೊಂಡು ಹೋಗಿದ್ದರು ಎನ್ನಲಾಗಿದೆ.

ಸದ್ಯ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದು, ಕೃತ್ಯಕ್ಕೆ ಬಳಸಿಇದ ಆಟೋ ಮತ್ತು ಚಾಕುವನ್ನ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಚಾಲಕನಿಗೆ ಚಾಕು ತೋರಿಸಿ ಆಟೋ ಕದ್ದೊಯ್ಯುತ್ತಿದ್ದ ಖದೀಮರು ಅರೆಸ್ಟ್​​ appeared first on News First Kannada.

Source: newsfirstlive.com

Source link