ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್ ಲಾರಿಯೊಂದು ಸಮುದ್ರಕ್ಕೆ ಬಿದ್ದಿದೆ. ನವಮಂಗಳೂರು ಬಂದರಿನಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಬಂದರಿನ 14ನೇ ಬರ್ತ್ ನಲ್ಲಿ ಕಲ್ಲಿದ್ದಿಲು ಲೋಡ್ ಮಾಡುವ ಸಂದರ್ಭದಲ್ಲಿ ಕಂಟೇನರ್ ಲಾರಿ ಹಿಂದೆ ಚಲಿಸುವಾಗ ನಿಯಂಣ ತಪ್ಪಿ ಕಡಲಿಗೆ ಬಿದ್ದಿದೆ ಎಂದು ತಿಳಿದುಬಂದಿದೆ. ಈ ವೇಳೆ ಲಾರಿಯ ಡ್ರೈವರ್ ಹಾಗು ಕ್ಲೀನರ್ ಕೂಡ ನೀರಿನಲ್ಲಿ ಬಿದ್ದಿದ್ದು, ಒಬ್ಬರ ಮೃತದೇಹ ಪತ್ತೆಯಾಗಿದೆ.

ಪಣಂಬೂರು ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

The post ಚಾಲಕನ ನಿಯಂತ್ರಣ ತಪ್ಪಿ ಕಡಲಿಗೆ ಬಿದ್ದ ಕಂಟೇನರ್ ಲಾರಿ, ಓರ್ವ ಸಾವು appeared first on News First Kannada.

Source: newsfirstlive.com

Source link