ಉತ್ತರ ಕನ್ನಡ: ಚಲಿಸುವ ಕಾರೊಂದು ಮುಂಡಗೋಡ ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆಗೆ ಬಿದ್ದು ಸಂಪೂರ್ಣವಾಗಿ ಮುಳುಗಿದ ದುರಂತ ಘಟನೆ ನಡೆದಿದೆ. ಯಲ್ಲಾಪುರದಿಂದ ಬಂದು ಕಲಘಟಗಿ ರಸ್ತೆಯತ್ತ ತಿರುಗಿಸಿಕೊಳ್ಳುವಾಗ ಚಾಲಕನ ನಿಯಂತ್ರಣ ತಪ್ಪಿದ ಸೆಲೆರಿಯೋ ಕಾರ್ ಕೆರೆಗೆ ಬಿದ್ದಿದೆ.
ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ನೀರು ಕೆರೆಗೆ ಬಿದ್ದ ಕೂಡಲೇ ಸಂಪೂರ್ಣ ಮುಳುಗಡೆಯಾಗಿದೆ. ಇನ್ನು, ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗೆ ಎರಡು ಶವಗಳು ಪತ್ತೆಯಾಗಿವೆ. ಮುಂಡಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈಗ ಅರಶಿಣಗೇರಿ ಗ್ರಾಮದ ರಾಜು ವರ್ಗಿಸ್ ಹಾಗೂ ಬ್ಲೆಸ್ಸಿ ಮೃತಪಟ್ಟ ದಂಪತಿಗಳು ಎಂದು ತಿಳಿದು ಬಂದಿದೆ.