ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಮಲ್ಲಿಕಾರ್ಜುನ ಶ್ರೀಗಳ ಕಾರು; ಸ್ಥಳದಲ್ಲೇ ಚಾಲಕ ದುರ್ಮರಣ | The car of Mallikarjuna, a car that crashed into a tree when the driver lost control; Driver dead on the spot


ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಮಲ್ಲಿಕಾರ್ಜುನ ಶ್ರೀಗಳ ಕಾರು; ಸ್ಥಳದಲ್ಲೇ ಚಾಲಕ ದುರ್ಮರಣ

ಮಲ್ಲಿಕಾರ್ಜುನ ಶ್ರೀ, ವೀರೇಶ ಕುರುಡಗಿ

ಗದಗ: ಚಾಲಕನ ನಿಯಂತ್ರಣ ತಪ್ಪಿ ಮಲ್ಲಿಕಾರ್ಜುನ ಶ್ರೀಗಳ ಕಾರು (Car Accident) ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ನರಗುಂದ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ವೀರೇಶ ಕುರುಡಗಿ (38) ಮೃತ ಚಾಲಕ. ರೋಣ ತಾಲೂಕಿನ ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಗಾಯವಾಗಿದ್ದು, ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಲಾಗುತ್ತಿದೆ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಹೊಲದಲ್ಲಿ ‌ಕೆಲಸ‌ ಮಾಡುವ ವೇಳೆ ಸಿಡಿಲು ಬಡಿದು ವ್ಯಕ್ತಿ ಸಾವು:

ಬಾದಾಮಿ: ಹೊಲದಲ್ಲಿ ‌ಕೆಲಸ‌ ಮಾಡುವ ವೇಳೆ ಸಿಡಿಲು ಬಡಿದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ತಾಲೂಕಿನ ಬೆನಕೇರಿ ಗ್ರಾಮದಲ್ಲಿ ನಡೆದಿದೆ. ನಾಗರಾಜ .ಹನುಮಪ್ಪ. ನಾಗನೂರ(22) ಮೃತ ವ್ಯಕ್ತಿ. ಶೇಂಗಾ ಬೆಳೆಯ ಬಣವೆಗೆ ತಾಡಪತ್ರಿ ಹೊದಿಸುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಕೃಷ್ಣಾ ನದಿ ನಾರಾಯಾಣಪುರ ಜಲಾಶಯ ಹಿನ್ನೀರಲ್ಲಿ ತೇಲಿ ಬಂದ ವ್ಯಕ್ತಿಯ ಶವ:

ಬಾಗಲಕೋಟೆ: ಕೃಷ್ಣಾ ನದಿ ನಾರಾಯಾಣಪುರ ಜಲಾಶಯ ಹಿನ್ನೀರಲ್ಲಿ ಅಂದಾಜು 35 ವರ್ಷ ವ್ಯಕ್ತಿಯ ಶವ ತೇಲಿ ಬಂದಿದೆ. ಜಿಲ್ಲೆಯ ಹುನಗುಂದ ತಾಲ್ಲೂಕಿನ ಮರೋಳನಲ್ಲಿ ಘಟನೆ ನಡೆದಿದೆ. ವ್ಯಕ್ತಿಯ ಶವ ನೀಲಿ‌ ಜೀನ್ಸ್ , ಶರ್ಟ್ ಧರಿಸಿದೆ. ಹುನಗುಂದ ಪೊಲೀಸರಿಗೆ ಸ್ಥಳೀಯರಿಂದ ಮಾಹಿತಿ ನೀಡಲಾಗಿದೆ. ಹುನಗುಂದ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

ಸಿಡಿಲು ಬಡಿದು ಜೋಡೆತ್ತು ಸಾವು:

ವಿಜಯಪುರ: ಜಮೀನಿನಲ್ಲಿ ಕಟ್ಟಿದ ಎರಡು ಎತ್ತುಗಳಿಗೆ ಸಿಡಿಲು ಬಡಿದು ಸಾವಿಗೀಡಾಗಿರುವಂತಹ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗೆದ್ದಲಮರಿ ಗ್ರಾಮದಲ್ಲಿ ನಡೆದಿದೆ. ಶಂಕರ ಲಮಾಣಿ ಎಂಬುವವರಿಗೆ ಎತ್ತುಗಳು ಸೇರಿದ್ದವು. ಸುಮಾರು 2 ಲಕ್ಷ ರೂಪಾಯಿ ಬೆಲೆ ಬಾಳುವ ಎತ್ತುಗಳು ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿವೆ. ಸರ್ಕಾರ ರೈತನಿಗೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರ ಒತ್ತಾಯ ಮಾಡುತ್ತಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

TV9 Kannada


Leave a Reply

Your email address will not be published. Required fields are marked *