ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕ್ರೂಸರ್ ಡಿಕ್ಕಿ: 7 ಜನ ಸ್ಥಳದಲ್ಲೇ ದುರ್ಮರಣ, ಧಾರವಾಡದಲ್ಲೊಂದು ಭೀಕರ ರಸ್ತೆ ಅಪಘಾತ | A terrible road accident in Dharwad: Out of Control Cruiser Driver Hit by Tree: 7 people death on the spot,


ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕ್ರೂಸರ್ ಡಿಕ್ಕಿ: 7 ಜನ ಸ್ಥಳದಲ್ಲೇ ದುರ್ಮರಣ, ಧಾರವಾಡದಲ್ಲೊಂದು ಭೀಕರ ರಸ್ತೆ ಅಪಘಾತ

ಅಪಘಾತದಲ್ಲಿ ನುಜ್ಜುಗುಜ್ಜಾದ ಕ್ರೂಸರ್

ಇಂದು ಮದುವೆ ನಡೆಯಬೇಕಾಗಿತ್ತ. ಆದರೆ ಆಘಾತದಿಂದ ಸಂಬಂಧಿಕರು ಕಲ್ಯಾಣ ಮಂಟಪದ ಕಡೆಗೆ ಬರುತ್ತಿಲ್ಲ. ಸಂಭ್ರಮದ ಬದಲಿಗೆ ಮದುವೆ ನಡೆಯಬೇಕಾದ ಸ್ಥಳದಲ್ಲಿ ಸ್ಮಶಾನ ಮೌನ ಆವರಿಸಿದೆ.

ಧಾರವಾಡ: ಮರಕ್ಕೆ ಕ್ರೂಸರ್ ಡಿಕ್ಕಿಯಾಗಿ 7 ಜನರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಭೀಕರ ರಸ್ತೆ ಅಪಘಾತವು ಜಿಲ್ಲೆಯ ತಾಲೂಕಿನ ಬಾಡ ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ. ಬೆನಕಟ್ಟಿ ಗ್ರಾಮದ ಅನನ್ಯಾ(14), ಹರೀಶ್(13), ಶಿಲ್ಪಾ(34), ನೀಲವ್ವ(60), ಮಧುಶ್ರೀ(20), ಮಹೇಶ್ವರಯ್ಯ(11), ಶಂಭುಲಿಂಗಯ್ಯ(35) ಮೃತಪಟ್ಟವರು. 6 ಜನರ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿಗದಿ ಗ್ರಾಮದ ಯುವಕನ ನಿಶ್ಚಿತಾರ್ಥ ಮುಗಿಸಿಕೊಂಡು ಮನ್ಸೂರು ಗ್ರಾಮದಿಂದ ಬೆನಕಟ್ಟಿಗೆ ಹಿಂದಿರುಗುವಾಗ ರಾತ್ರಿ 1.30ರಿಂದ 2 ಗಂಟೆ ಸುಮಾರಿಗೆ ಭೀಕರ ಅಪಘಾತ ನಡೆದಿದ್ದು, ಕ್ರೂಸರ್ ಚಾಲಕನ ಅಜಾಗರೂಕತೆಯೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಮಳೆಯಿಂದಾಗಿ ಮನ್ಸೂರು ರೇವಣಸಿದ್ದೇಶ್ವರ ಮಠಕ್ಕೆ ಮದುವೆ ಸ್ಥಳಾಂತರಿಸಿದ್ದರು. ಮದುವೆ ಮುನ್ನ ದಿನ ನಿಶ್ಚಿತಾರ್ಥಕ್ಕೆ ಸಂಬಂಧಿಕರು ತೆರಳಿದ್ದರು. ಇಂದು ಮದುವೆ ನಡೆಯಬೇಕಾಗಿತ್ತ. ಆದರೆ ಆಘಾತದಿಂದ ಸಂಬಂಧಿಕರು ಕಲ್ಯಾಣ ಮಂಟಪದ ಕಡೆಗೆ ಬರುತ್ತಿಲ್ಲ. ಸಂಭ್ರಮದ ಬದಲಿಗೆ ಮದುವೆ ನಡೆಯಬೇಕಾದ ಸ್ಥಳದಲ್ಲಿ ಸ್ಮಶಾನ ಮೌನ ಆವರಿಸಿದೆ. ಅಪಘಾತ ಸ್ಥಳಕ್ಕೆ ಎಸ್​ಪಿ ಕೃಷ್ಣಕಾಂತ್​ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಧಾರವಾಡ ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

TV9 Kannada


Leave a Reply

Your email address will not be published. Required fields are marked *