ಎರಡು ದಿನಗಳ ಹಿಂದಷ್ಟೆ ನಿರ್ದೇಶಕ ಜೋಗಿ ಪ್ರೇಮ್​, ಏಕ್​ ಲವ್​ ಯಾ ಚಿತ್ರದ ನಂತರ ಚಾಲೆಂಜಿಂಗ್​ ಸ್ಟಾರ್ ದರ್ಶನ್​ಗೆ ಸಿನಿಮಾ ಮಾಡೋದಾಗಿ ಟ್ವೀಟ್​ ಮಾಡಿದ್ರು. ಪ್ರೇಮ್​ ಅವರ ಟ್ವೀಟ್​ ನೋಡಿದ ದರ್ಶನ್​ ಅಭಿಮಾನಿಗಳು ಕರಿಯ ಚಿತ್ರದ ಹಾಗೆ ಮತ್ತೆ ದರ್ಶನ್​ ಅವರನ್ನ ಮಾಸ್​ ಶೇಡ್​ನಲ್ಲಿ ನೋಡ್ಬೋದು ಅಂತ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದೂ ನಿಜ. ಆದ್ರೆ ಈ ಪೋಸ್ಟ್​​ನ ರೀ-ಟ್ವೀಟ್​ ಮಾಡಿರುವ ರಕ್ಷಿತಾ ಪ್ರೇಮ್​​, ‘ದೇವರು ಒಳ್ಳೆಯದು ಮಾಡಲಿ..ಇವರಿಬ್ಬರನ್ನು ಬೇಗ ಮತ್ತೆ ಜೊತೆಯಾಗಿ ನೋಡೋಕೆ ಇಷ್ಟಪಡ್ತೀನಿ’ ಅಂದಿದ್ದಾರೆ.

ಅರೇ..ಇದ್ಯಾಕೆ ರಕ್ಷಿತಾ ಈ ಥರ ರಿಯಾಕ್ಟ್​​ ಮಾಡಿದ್ದಾರೆ ಅಂತ ನಿಮಗೆ ಅನಿಸಿರಬಹುದು. ಅದಕ್ಕೆ ಕಾರಣ, ಅದು ನಿರ್ದೇಶಕ ಪ್ರೇಮ್​​ ಅಧಿಕೃತ ಟ್ವಿಟರ್​​ ಅಕೌಂಟ್​​ ಅಲ್ಲ, ಬದಲಾಗಿ ಫೇಕ್​ ಅಕೌಂಟ್​. ಹೌದು… ನಿರ್ದೇಶಕ ಪ್ರೇಮ್​​ ಫೇಕ್​ ಟ್ವಿಟರ್​ ಖಾತೆಯೊಂದು ಓಪನ್​ ಆಗಿದೆ. ಈ ಖಾತೆಯಲ್ಲೇ ದರ್ಶನ್​ ಜೊತೆ ಸಿನಿಮಾ ಮಾಡೋದಾಗಿ ಬರೆಯಲಾಗಿದೆ. ಅದೆಷ್ಟೋ ಜನ ಇದೆ ಪ್ರೇಮ್​ ಅವರ ಅಕೌಂಟ್​ ಅಂತ ಸುದ್ದಿಯನ್ನ ನಂಬಿದ್ದೂ ಇದೆ. ಆದ್ರೆ ಅಷ್ಟರಲ್ಲೇ ರಕ್ಷಿತಾ ಪ್ರೇಮ್​​ ಅಸಲಿ ಕಥೆಯನ್ನ ಬಿಚ್ಚಿಟ್ಟಿದ್ದಾರೆ.

ಪ್ರೇಮ್​ ಪತ್ನಿ ನಟಿ ರಕ್ಷಿತಾ, ಪ್ರೇಮ್​ ಫೇಕ್​​ ಪೇಜ್​ನ ಟ್ವೀಟ್​​ನ ಫೋಟೋವೊಂದನ್ನ ಹಾಕಿ ಈ ವಿಚಾರ ಸುಳ್ಳು ಅಂತ ತಿಳಿಸಿದ್ದಾರೆ. ‘ಇದು ಪ್ರೇಮ್​ ಟ್ವಿಟರ್​ ಖಾತೆಯಲ್ಲ.. ಇದನ್ನ ಯಾರೇ ಬರೆದಿದ್ರೂ ಅವರಿಗೆ ದೇವರು ಒಳ್ಳೆಯದು ಮಾಡಲಿ. ಇದರಲ್ಲಿ ಹೇಳಿರುವಂತೆ ನಿಜವಾಗಿಯೂ ಪ್ರೇಮ್​ ಮುಂದಿನ ಚಿತ್ರ ದರ್ಶನ್​ ಜೊತೆ ಮಾಡಿದ್ರೆ ಅದಕ್ಕಿಂತ ಖುಷಿ ವಿಚಾರ ಬೇರೆ ಇಲ್ಲ’ ಅಂತ ರಕ್ಷಿತಾ ಟ್ವೀಟ್​ ಮಾಡಿದ್ದಾರೆ.

ರಕ್ಷಿತಾ ಹಾಗೂ ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಆಪ್ತ ಸ್ನೇಹಿತರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಸೋ..ಪ್ರೇಮ್​ ದರ್ಶನ್​ಗೆ ಸಿನಿಮಾ ಮಾಡುವ ವಿಚಾರ ಏನಾದ್ರೂ ನಿಜವಾಗಿದ್ರೆ, ಬಹುಷಃ ರಕ್ಷಿತಾ ಎಲ್ಲರಿಗಿಂತಲೂ ಮುಂಚೆ ಈ ಬಗ್ಗೆ ಟ್ವೀಟ್​​ ಮಾಡ್ತಿದ್ರು ಅಲ್ವಾ.? ಆದ್ರಿಲ್ಲಿ, ಅಭಿಮಾನಿಗಳ ಜೊತೆ ರಕ್ಷಿತಾ ಕೂಡ ಕರಿಯ ಚಿತ್ರದ ಈ ಕಾಂಬಿನೇಷನ್​ ಮತ್ತೆ ಮ್ಯಾಜಿಕ್​ ಮಾಡಲಿ ಅಂತ ಕಾಯುತ್ತಿದ್ದಾರೆ.

 

The post ಚಾಲೆಂಜಿಂಗ್​ ಸ್ಟಾರ್​ ದರ್ಶನ್​-ಪ್ರೇಮ್​ ಸಿನಿಮಾ.. ದೇವರು ಒಳ್ಳೆಯದು ಮಾಡ್ಲಿ ಅಂದಿದ್ಯಾಕೆ ರಕ್ಷಿತಾ.? appeared first on News First Kannada.

Source: newsfirstlive.com

Source link