ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಹಲ್ಲೆ ಆರೋಪ ಪ್ರಕರಣ ಎಲ್ಲಿವರೆಗೆ ಬಂತು..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಹಲ್ಲೆ ಆರೋಪ ಪ್ರಕರಣ ಎಲ್ಲಿವರೆಗೆ ಬಂತು..?

ಮೈಸೂರು: 25 ಕೋಟಿ ರೂಪಾಯಿ ಶ್ಯೂರಿಟಿ ಪ್ರಕರಣದ ಬೆನ್ನಲ್ಲೆ ನಟ ದರ್ಶನ್​ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ. ನಿರ್ದೇಶಕ ಇಂದ್ರಜಿತ್​ ಲಂಕೇಶ್ ಮಾಡಿರೋ ಆರೋಪ ನಿನ್ನೆಯೇ ಕಿಡಿ ಹೊತ್ತಿಸಿತ್ತು. ಇದರ ಎರಡನೇ ಅಧ್ಯಾಯ ಇಂದು ತೆರೆದುಕೊಳ್ಳೋ ಸಾಧ್ಯತೆ ಇದೆ.

ಇದನ್ನೂ ಓದಿ:ದರ್ಶನ್ ಅಂಡ್ ಟೀಂ ವಿರುದ್ಧ FIR ದಾಖಲಿಸಿ; ಮೈಸೂರು ಕಮಿಷನರ್​ಗೆ ಹಿರಿಯ ವಕೀಲ ದೂರು

ನಿನ್ನೆ ಇಂದ್ರಜಿತ್ ಲಂಕೇಶ್ ಆರೋಪಕ್ಕೆ ಖಡಕ್ ಉತ್ತರ ನೀಡಿದ್ದ ದರ್ಶನ್, ಲಂಕೇಶ್ ದೊಡ್ಡ ಇನ್ವೆಸ್ಟಿಗೇಟರ್​​. ಅವರಿಗೆ ಒಳ್ಳೆಯದು ಆಗಲಿ. ನಾನು ವೇಟರ್ ಮೇಲೆ ರೇಗಾಡಿದ್ದು ನಿಜ. ಆದ್ರೆ ಹಲ್ಲೆ ಯಾರೂ ಮಾಡಿಲ್ಲ ಅಂತ ಹೇಳಿದ್ರು. ಬಳಿಕ ಮೈಸೂರಿನಲ್ಲಿನ ಸಂದೇಶ್ ಹೋಟೆಲ್​ಗೆ ಭೇಟಿ ನೀಡಿದ್ದ ದರ್ಶನ್, ಅಲ್ಲೆ ಕೆಲ ಹೊತ್ತು ಮಾತುಕತೆ ನಡೆಸಿದ್ರು. ನಿನ್ನೆ ರಾತ್ರಿ ನಡೆದ ಈ ಮಾತುಕತೆ ಬಳಿಕ ದರ್ಶನ್ ಸುದ್ದಿಗೋಷ್ಠಿ ನಡೆಸ್ತಾರೆ ಎನ್ನಲಾಗಿತ್ತು. ಆದ್ರೆ, ಅದು ನಡೀಲಿಲ್ಲ.

ಇದನ್ನೂ ಓದಿ: ದರ್ಶನ್ ವಿರುದ್ಧ ಇಂದ್ರಜಿತ್ ಗಂಭೀರ ಆರೋಪ; ರಾಜ್ಯ ಸರ್ಕಾರದಿಂದ ತನಿಖೆಗೆ ಸೂಚನೆ

ಹೀಗಾಗಿ ಸಂದೇಶ್ ಪ್ರಿನ್ಸ್ ಮಾಲೀಕ ಸಂದೇಶ್ ನಾಗರಾಜ್ ಇವತ್ತು ದರ್ಶನ್​ ಸುದ್ದಿಗೋಷ್ಟಿ‌ ನಡೆಸಲಿದ್ದಾರೆ ಅನ್ನೋದನ್ನ ತಿಳಿಸಿದ್ದಾರೆ. ಒಟ್ನಲ್ಲಿ ನಿನ್ನೆ ಕೊಡಬೇಕಿದ್ದ ಉತ್ತರ ಇವತ್ತಿಗೆ ಪೋಸ್ಟ್​ಪೋನ್ ಆಗಿದೆ.

ಇದನ್ನೂ ಓದಿ: ‘ಸ್ಟಾರ್​ ಆಗೋಗಿಂತ ಮೊದಲೇ ನನ್ನ ಸ್ನೇಹಿತ.. ನಮ್ಮ ಸ್ನೇಹ ಒಡೆಯಲು ಇಂದ್ರಜಿತ್​ ಹೀಗೆ ಮಾಡಿದ್ದಾರೆ’

The post ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಹಲ್ಲೆ ಆರೋಪ ಪ್ರಕರಣ ಎಲ್ಲಿವರೆಗೆ ಬಂತು..? appeared first on News First Kannada.

Source: newsfirstlive.com

Source link