ಚಾಲೆಂಜ್​​ನಲ್ಲಿ ಗೆದ್ದಿದ್ದು ಕೊಹ್ಲಿನಾ? ಅನುಷ್ಕನಾ?: ಕ್ರಿಕೆಟ್​ ಜಗತ್ತಿನ ಟಾಪ್ ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

ಚಾಲೆಂಜ್​​ನಲ್ಲಿ ಗೆದ್ದಿದ್ದು ಕೊಹ್ಲಿನಾ? ಅನುಷ್ಕನಾ?: ಕ್ರಿಕೆಟ್​ ಜಗತ್ತಿನ ಟಾಪ್ ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

ಟೀಮ್​ ಇಂಡಿಯಾ ಕ್ರಿಕೆಟಿಗರು ಸುತ್ತಾಟ ಮಾಡ್ತಾ ಇದ್ರೆ, ಕೋಚ್​ ರವಿಶಾಸ್ತ್ರಿ ಹೋಗಿದ್ದೆಲ್ಲಿಗೆ? ದ್ರಾವಿಡ್​ ಕೋಚ್​ ಆಗುವ ಬಗ್ಗೆ ರಿತೀಂದರ್ ಸಿಂಗ್​​ ಸೋಧಿ ಹೇಳಿದ್ದಾದರೂ ಏನು? ಶ್ರೀಲಂಕಾ ಕ್ರಿಕೆಟ್​ ಬೋರ್ಡ್​​ ಮೇಲೆ ರಣತುಂಗ ಕಿಡಿಕಾರಿದ್ದೇಕೆ?ಈ ಎಲ್ಲದರ ಜೊತೆಗೆ ಕ್ರಿಕೆಟ್​ ಜಗತ್ತಿನ ಆಸಕ್ತಿಕರ ವಿಷಯಗಳು ಇಲ್ಲಿವೆ.

1) ಬುಮ್ರಾ-ಸಂಜನಾ ಜಾಲಿ, ವಾಟರ್​​ಫಾಲ್ಸ್​ನಲ್ಲಿ ಮಯಾಂಕ್ ಮಸ್ತಿ!
ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ ಬಳಿಕ ಟೀಮ್​ ಇಂಡಿಯಾ ಆಟಗಾರರಿಗೆ, ಬಿಸಿಸಿಐ ರೆಸ್ಟ್ ನೀಡಿದೆ. ಇಂಗ್ಲೆಂಡ್​ ಸರಣಿಗೂ ಮುನ್ನ ಆಟಗಾರರ ಬಯೋಬಬಲ್​ ಬಂಧನಕ್ಕೆ ಮುಕ್ತಿ ನೀಡಿದೆ. ಹೀಗಾಗಿ ಟೀಮ್​ ಮ್ಯಾನೇಜ್​ಮೆಂಟ್​​ ಆಟಗಾರರಿಗೆ ಇಂಗ್ಲೆಂಡ್​​ ಸುತ್ತಾಟಕ್ಕೆ ಅನುಮತಿ ನೀಡಿದೆ. ಆಂಗ್ಲರ ನಾಡಲ್ಲಿ ಪ್ರವಾಸಿ ತಾಣಗಳು, ರೆಸ್ಟೋರೆಂಟ್​, ಕಾಫಿ ಶಾಪ್​​ ಹೀಗೆ ಎಲ್ಲೆಡೆಯೂ ಟೀಮ್​ ಇಂಡಿಯಾ ಆಟಗಾರರೇ ಇದ್ದಾರೆ. ಕಾರ್ನ್​ವಾಲ್​​ನ ವಾಟರ್​ ಫಾಲ್ಸ್​​​​ನಲ್ಲಿ ಮಯಾಂಕ್​ ಅಗರ್ವಾಲ್ ಸಖತ್​ ಎಂಜಾಯ್​ ಮಾಡಿದ್ದಾರೆ. ಜಸ್​​ಪ್ರಿತ್​ ಬುಮ್ರಾ, ಸಂಜನಾ ಗಣೇಶನ್ ಪಾರ್ಕ್​​ವೊಂದರಲ್ಲಿ ಸೆಲ್ಫಿ ತೆಗೆದುಕೊಂದು ಗಮನ ಸೆಳೆದಿದ್ದಾರೆ.

 

View this post on Instagram

 

A post shared by Mayank Agarwal (@mayankagarawal)

2) ಬ್ಯಾಟ್​​ ಬ್ಯಾಲೆನ್ಸ್​​​ನಲ್ಲಿ ಕೊಹ್ಲಿ ವಿರುದ್ಧ ಅನುಷ್ಕಾ ಗೆದ್ರಾ, ಸೋತ್ರಾ..?
ಇತ್ತ ಅನುಷ್ಕಾ ಶರ್ಮಾ, ವಿರಾಟ್​ ಕೊಹ್ಲಿಗೆ ಬ್ಯಾಟ್​ ಬ್ಯಾಲೆನ್ಸ್​ ಚಾಲೆಂಜ್​ ನೀಡಿದ್ದಾರೆ. ಚಾಲೆಂಜ್​​ ಸ್ವೀಕರಿಸಿರುವ ಕೊಹ್ಲಿ ಅದನ್ನ ಅಚ್ಚುಕಟ್ಟಾಗಿಯೇ ಮಾಡಿದ್ದಾರೆ. ಇಶಾಂತ್​​​​ ಶರ್ಮಾ ದಂಪತಿ ಮತ್ತು ಮಯಾಂಕ್​ ದಂಪತಿ ಸ್ಟೋನ್​ ಹ್ಯಾಂಗ್​ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ನೀಡಿದ್ರು. ಇನ್ನು ರೆಸ್ಟೋರೆಂಟ್​ವೊಂದರಲ್ಲಿ ವಿವಿಧ ಖಾದ್ಯಗಳನ್ನ ಸೇವಿಸುತ್ತಾ ವಾಶಿಂಗ್ಟನ್ ಸುಂದರ್ ಎಂಜಾಯ್​ ಮಾಡ್ತಿದ್ದಾರೆ. ರವಿಚಂದ್ರನ್​ ಅಶ್ವಿನ್​ ದಿ ಲೈಫ್​ ಆಫ್​ ರಾಮ್​ ಪ್ರವಾಸಿ ತಾಣದಲ್ಲಿ ಸುತ್ತಾಡಿದ್ದಾರೆ. ಇನ್ನು ಆಟಗಾರರೆಲ್ಲಾ ಟೂರಿಸ್ಟ್​ ಪ್ಲೇಸ್​ಗಳತ್ತ ಹೆಜ್ಜೆ ಹಾಕಿದ್ರೆ, ​ಕೋಚ್ ರವಿ ಶಾಸ್ತ್ರಿ ಮಾತ್ರ, ವಿಂಬಲ್ಡನ್​ ಮ್ಯಾಚ್ ನೋಡೋಕೆ ಹೋಗಿದ್ರು.

 

View this post on Instagram

 

A post shared by AnushkaSharma1588 (@anushkasharma)

3) ಸ್ವಿಮ್ಮಿಂಗ್​ ಫೂಲ್​​ನಲ್ಲಿ ಚಿಲ್​​ ಆದ ಧವನ್​ ಪಡೆ
ಟೀಮ್​ ಇಂಡಿಯಾದ ಪ್ರಮುಖ ತಂಡ, ಇಂಗ್ಲೆಂಡ್​​ನಲ್ಲಿ ಸುತ್ತಾಟ ನಡೆಸ್ತಿದೆ. ಆದರೆ ಟೀಮ್​ ಇಂಡಿಯಾದ ಮತ್ತೊಂದು ತಂಡ, ಲಂಕಾದಲ್ಲಿ ಫುಲ್​ ಚಿಲ್​ ಆಗಿದೆ. ಮುಂಬೈನಿಂದ ಲಂಕಾಗೆ ಪ್ಲೈಟ್​ ಹತ್ತಿದ್ದ ಆಟಗಾರರು, ಕ್ವಾರಂಟೀನ್​ ಮುಗಿಸಿ ಸಖತ್​ ಮಸ್ತಿಯಲ್ಲಿ ತೊಡಗಿದ್ದಾರೆ. ಕ್ವಾರಂಟೀನ್​ ಅವಧಿ ಮುಗಿಯುತ್ತಿದ್ದಂತೆ ಸ್ವಿಮ್ಮಿಂಗ್​ ಫೂಲ್​​ಗೆ ಧುಮುಕಿದ ಧವನ್​ ಪಡೆ, ಕೆಲಕಾಲ ಎಂಜಾಯ್​ ಮಾಡ್ತು. ಇದೀಗ ಗಬ್ಬರ್​​ಸಿಂಗ್​ ನೇತೃತ್ವದ ಯುವ ಪಡೆ ಮೈದಾನಕ್ಕಿಳಿದಿದ್ದು, ಆಟಗಾರರು ಪ್ರಾಕ್ಟೀಸ್​​ ಆರಂಭಿಸಿದ್ದಾರೆ.

4) ವಿಶ್ವಕಪ್​​ ನಂತರ ಟೀಮ್​ ಇಂಡಿಯಾಕ್ಕೆ​ ದ್ರಾವಿಡ್​ ಆಗ್ತಾರಾ ಕೋಚ್​​?!
ಭಾರತೀಯ ಕ್ರಿಕೆಟ್​ ಅಭಿಮಾನಿಗಳ ಬಹುದಿನದ ಕನಸು, ಟೀಮ್​ ಇಂಡಿಯಾಕ್ಕೆ ರಾಹುಲ್​​ ದ್ರಾವಿಡ್​ ಪರ್ಮನೆಂಟ್ ಕೋಚ್​ ಆಗ್ಬೇಕು ಅನ್ನೋದು.! ಆದರೀಗ ಅದಕ್ಕೆ ಸಂಬಂಧಿಸಿದ ಸಿಹಿ ಸುದ್ದಿಯೊಂದು, ಹೊರ ಬಿದ್ದಿದೆ. ಟಿ20 ವಿಶ್ವಕಪ್​ ನಂತರ ಟೀಮ್​ ಇಂಡಿಯಾ ಕೋಚ್​​ ರವಿ ಶಾಸ್ತ್ರಿ, ಗುತ್ತಿಗೆ ಕೊನೆಗೊಳ್ಳಲಿದೆ. ಹಾಗಾಗಿ ಈ ಸ್ಥಾನಕ್ಕೆ ರಾಹುಲ್​ ದ್ರಾವಿಡ್​​ರನ್ನೇ ನೇಮಕ ಮಾಡಿದರೆ ಒಳ್ಳೆಯದು ಎಂದಿದ್ದಾರೆ ಟೀಮ್ ಇಂಡಿಯಾ ಮಾಜಿ ಆಲ್​ರೌಂಡರ್​ ರಿತೀಂದರ್ ಸಿಂಗ್​​ ಸೋಧಿ.

ಈಗಾಗಲೇ ಲಂಕಾ ಪ್ರವಾಸಕ್ಕೆ ದ್ರಾವಿಡ್ ಕೋಚ್​ ಆಗಿದ್ದಾರೆ. ಹಾಗೆಯೇ ಅಂಡರ್-19 ತಂಡಕ್ಕೆ ಕೋಚ್ ಆಗಿರುವ ಅನುಭವ ಕೂಡ ಅವರಿಗಿದೆ. ಜೊತೆಗೆ ನ್ಯಾಷನಲ್​ ಕ್ರಿಕೆಟ್​​ ಅಕಾಡೆಮಿಯಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ರವಿ ಶಾಸ್ತ್ರಿ ನಂತರ, ದ್ರಾವಿಡ್​ ಪರ್ಮನೆಂಟ್​​ ಕೋಚ್​ ಆಗೋದು ಪಕ್ಕಾ ಎಂದಿದ್ದಾರೆ. ಜೊತೆಗೆ ರವಿ ಶಾಸ್ತ್ರಿ ಕೂಡ ಟೀಮ್​ ಇಂಡಿಯಾಕ್ಕೆ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.

5) ಟಿ20 ವಿಶ್ವಕಪ್​​ ಕೊಹ್ಲಿ ನಾಯಕತ್ವಕ್ಕೆ ವೆರಿ ಇಂಪಾರ್ಟೆಂಟ್​!
ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ನಲ್ಲಿ ಎಡವಿದ ಬಳಿಕ ಟೀಮ್​ ಇಂಡಿಯಾ ನಾಯಕತ್ವದ ಚರ್ಚೆ ನಡೆಯುತ್ತಲೇ ಇವೆ. ಇದೀಗ ಮಾಜಿ ಕ್ರಿಕೆಟಿಗ ಸಾಬಾ ಕರೀಮ್​ ಕೂಡ, ಅದಕ್ಕೆ ದನಿಗೂಡಿಸಿದ್ದಾರೆ. ಮುಂಬರುವ ಟಿ20 ವಿಶ್ವಕಪ್​​​​, ವಿರಾಟ್ ಕೊಹ್ಲಿ ನಾಯಕತ್ವ ವೃತ್ತಿ ಜೀವನಕ್ಕೆ ಬಹಳ ನಿರ್ಣಾಯಕವಾಗಿದೆ ಎಂದು ಕರೀಮ್​​ ಹೇಳಿದ್ದಾರೆ. ನಾಯಕನಾಗಿ ಕೊಹ್ಲಿ ಒಂದೂ ಐಸಿಸಿ ಟ್ರೋಫಿ ಗೆದ್ದಿಲ್ಲ. ಹಾಗಾಗಿ ಅವರ ಮೇಲೆ ಒತ್ತಡ ಹೆಚ್ಚಾದಂತೆ ಕಾಣ್ತಿದೆ. ಬಹುಶಃ ನವೆಂಬರ್​ 14ರಂದು ಟೀಮ್​ ಇಂಡಿಯಾ ಕಪ್​ ಗೆಲ್ಲುವ ವಿಶ್ವಾಸವಿದೆ. ಒಂದು ವೇಳೆ ಸೋತರೆ ರೋಹಿತ್​​ ಶರ್ಮಾಗೆ ತಂಡ ಮುನ್ನಡೆಸುವ ಬವಾಬ್ದಾರಿ ನೀಡಬೇಕು ಎಂದು, ಸಾಬಾ ಕರೀಮ್​ ಹೇಳಿದ್ದಾರೆ.

6) ಲಂಕಾ ಕ್ರಿಕೆಟ್​​​ ಮಂಡಳಿ ವಿರುದ್ಧ ರಣತುಂಗ ಕೆಂಡಾಮಂಡಲ!
1996ರಲ್ಲಿ ವಿಶ್ವಕಪ್​ ಜಯಿಸಿದ ಶ್ರೀಲಂಕಾ ತಂಡದ ನಾಯಕ ಅರ್ಜುನ ರಣತುಂಗ, ಶ್ರೀಲಂಕಾ ಕ್ರಿಕೆಟ್‌ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗಾಗಿ ಭಾರತದ ‘ಬಿ’ ಟೀಮ್​ ಇಲ್ಲಿಗೆ ಬರುತ್ತಿರೋದು, ಶ್ರೀಲಂಕಾ ಕ್ರಿಕೆಟ್​ಗೆ ಅವಮಾನ ಎಂದು ಬೇಸರ ಹೊರಹಾಕಿದ್ದಾರೆ. ಟೀಮ್​ ಇಂಡಿಯಾದ ಪ್ರಮುಖ ತಂಡ ಇಂಗ್ಲೆಂಡ್​ನಲ್ಲಿದೆ. ಮತ್ತೊಂದೆಡೆ ಇದೀಗ ಭಾರತದ 2ನೇ ತಂಡ, ಲಂಕಾಗೆ ಬಂದಿದೆ. ಮಾರ್ಕೆಂಟಿಂಗ್​ ಉದ್ದೇಶಕ್ಕಾಗಿ ಈ ಸರಣಿ ಆಯೋಜನೆಗೆ ಒಪ್ಪಿರುವ ಇಲ್ಲಿನ ಕ್ರಿಕೆಟ್​ ಮಂಡಳಿಯನ್ನ, ನಾನು ದೂಷಿಸುತ್ತೇನೆ ಎಂದಿದ್ದಾರೆ.

The post ಚಾಲೆಂಜ್​​ನಲ್ಲಿ ಗೆದ್ದಿದ್ದು ಕೊಹ್ಲಿನಾ? ಅನುಷ್ಕನಾ?: ಕ್ರಿಕೆಟ್​ ಜಗತ್ತಿನ ಟಾಪ್ ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link