ಚಾಮರಾಜನಗರ: ಚಾಮರಾಜನಗರದ ಹರಳುಕೋಟೆ ಬಳಿ ಬಸವನಗೌಡ ಪಾಟೀಲ್ ಯತ್ನಾಳ್ ಕಾರ್​​ಗೆ ವೀರಶೈವ ಲಿಂಗಾಯತ ಸಂಘಟನೆಗಳು ಮುತ್ತಿಗೆ ಹಾಕಿದ ಘಟನೆ ನಡೆದಿದೆ.

ಯತ್ನಾಳ್ ಕಾರ್​ಗೆ ಮುತ್ತಿಗೆ ಹಾಕಿದ ಸಂಘಟನೆಗಳ ಜನರು ಅವರ ವಿರುದ್ಧ ವೀರಶೈವ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಇನ್ನೊಂದೆಡೆ ಚಾಮರಾಜನಗರದ ಸಿದ್ದಮಲ್ಲೇಶ್ವರ ಮಠದ ಬಳಿಯೂ ಯತ್ನಾಳ್​ಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ಚಾಮರಾಜನಗರದ ಸಿದ್ದಮಲ್ಲೇಶ್ವರ ಮಠಕ್ಕೆ ಯತ್ನಾಳ್ ಭೇಟಿ ಕೊಡ್ತಾರೆ ಅಂತಾ ಗೇಟಿನ ಮುಂಭಾಗ ಜಮಾಯಿಸಿದ ಯಡಿಯೂರಪ್ಪ, ವಿಜಯೇಂದ್ರ ಅಭಿಮಾನಿಗಳು ಯಡಿಯೂರಪ್ಪ ವಿರುದ್ಧ ಪದೇ ಪದೇ ಯಾಕೆ ಮಾತಾಡ್ತಿರಾ ಅಂತಾ ಆಕ್ರೋಶ ಹೊರಹಾಕಿದ್ದಾರೆ.ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ, ಪ್ರತಿಭಟನೆ ನಿರತರನ್ನು ತಡೆಯಲು ಯತ್ನಿಸಿದ್ದಾರೆ.

The post ಚಾ. ನಗರದಲ್ಲಿ ಯತ್ನಾಳ್​ಗೆ ಧಿಕ್ಕಾರ, ಪ್ರತಿಭಟನೆಯ ಬಿಸಿ appeared first on News First Kannada.

Source: newsfirstlive.com

Source link