ಬೆಂಗಳೂರು: ನಾಳೆ ಬೆಳಿಗ್ಗೆ ಚಾಮರಾಜನಗರ ಜಿಲ್ಲೆಗೆ ಹೋಗ್ತಿದ್ದೇನೆ, ಆಕ್ಸಿಜನ್ ಸಮಸ್ಯೆ ಇಂದ ಸಾವನ್ನಪ್ಪಿದವರ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳುವ ಕೆಲಸ ಮಾಡ್ತೀವಿ ಅಂತ ಸದಾಶಿವನಗರದ ನಿವಾಸದಲ್ಲಿ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಸರ್ಕಾರದಿಂದ ಒಬ್ಬರೂ ಅಲ್ಲಿಗೆ ಹೋಗಿ ಕುಟುಂಬಗಳಿಗೆ ಸಾಂತ್ವನ ಹೇಳಿಲ್ಲ, ನನ್ನಿಂದಲೇ ಈ ಕಾರ್ಯಕ್ರಮ ಚಾಲನೆ ಕೊಡ್ತೀವಿ.
ಜುಲೈ ತಿಂಗಳಲ್ಲಿ ಕೋವಿಡ್​ನಿಂದ ನೊಂದವರ ಮನೆಗೆ ಭೇಟಿ ನೀಡ್ತೀವಿ, ಕಾರ್ಮಿಕರು ಹಾಗು ಕೋವಿಡ್ ಸೋಂಕಿನಿಂದ ಮರಣ ಹೊಂದಿದ ಮನೆಗೆ ಭೇಟಿ ಮಾಡ್ತೀವಿ. ಆ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡ್ತೀವಿ.

ಸರ್ಕಾರ ಸಾವಿನ ಬಗ್ಗೆ ತಪ್ಪು ಮಾಹಿತಿ ಕೊಡ್ತಿದೆ.. ನಮ್ಮ ಪ್ರಕಾರ ಮೂರು ಲಕ್ಷಕ್ಕೂ ಅಧಿಕ ಜನ ಸತ್ತಿದ್ದಾರೆ. ಆನ್ಲೈನ್ ರಿಜಿಸ್ಟ್ರೆಷನ್​ಗೆ ಸಮಸ್ಯೆ ಆದ್ರೆ ನಾವು ಅವರಿಗೆ ಸಹಾಯ ಮಾಡ್ತೀವಿ. ಆ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡ್ತೀವಿ ಅಂತ ಹೇಳಿದ್ದಾರೆ.

The post ಚಾ. ನಗರ ದುರಂತದಲ್ಲಿ ಸಾವನ್ನಪ್ಪಿದವರ ಮನೆಗೆ ನಾಳೆ ಭೇಟಿ ಕೊಡ್ತೇನೆ.. ಸಾಂತ್ವನ ಹೇಳ್ತೇನೆ- ಡಿಕೆಎಸ್​ appeared first on News First Kannada.

Source: newsfirstlive.com

Source link